ಸಾರಾಂಶ
ಶಿವಮೊಗ್ಗ ಭಾಗದ ಮಲೆನಾಡಲ್ಲಿ ಪುನರ್ವಸು ಮಳೆಯ ರೌದ್ರಾವತಾರದಿಂದ ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿ ರಭಸವಾಗಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ ಜಮೀನುಗಳಲ್ಲಿ ಬೆಳೆಗಳು ಜಲಾವೃತವಾಗಿವೆ.
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಶಿವಮೊಗ್ಗ ಭಾಗದ ಮಲೆನಾಡಲ್ಲಿ ಪುನರ್ವಸು ಮಳೆಯ ರೌದ್ರಾವತಾರದಿಂದ ಸಮೀಪದ ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿ ರಭಸವಾಗಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ ಜಮೀನುಗಳಲ್ಲಿ ಬೆಳೆಗಳು ಜಲಾವೃತವಾಗಿವೆ.ಉಕ್ಕಡಗಾತ್ರಿ ಮತ್ತು ಫತೇಪುರ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ಹೆಚ್ಚಿನ ನೀರು ಸಂಗ್ರಹವಾಗಿದೆ. ನೀರಿನಲ್ಲಿಯೇ ರೈತರು ವಾಹನಗಳನ್ನು ತೊಳೆಯುವ ದೃಶ್ಯ ಕಂಡುಬಂದಿದೆ. ಕರಿಬಸವೇಶ್ವರ ದೇವಾಲಯದ ನದಿ ಪಾತ್ರದಲ್ಲಿ ನೀರಿನಮಟ್ಟ ಏರಿಕೆಯಾಗಿದೆ. ಸ್ನಾನಘಟ್ಟ ಮತ್ತು ಅಂಗಡಿಗಳು ಮುಳುಗಡೆಯಾಗಿವೆ. ಭಕ್ತರು ನದಿ ದಂಡೆ ಬಳಿಯ ನೀರಲ್ಲಿಯೇ ಸ್ನಾನಗೈದು ಅಜ್ಜಯ್ಯನ ದರ್ಶನ ಪಡೆಯುತ್ತಿದ್ದಾರೆ.
ಉಕ್ಕಡಗಾತ್ರಿ, ಗಜಾಪುರ, ತಿಮ್ಮೆನಹಳ್ಳಿ, ಮಾಡನಾಯಕನಹಳ್ಳಿ, ತುಮ್ಮಿನಕಟ್ಟಿ ಗ್ರಾಮಗಳ ನೂರಾರು ಎಕರೆ, ಭತ್ತದ ಗದ್ದೆ, ತೋಟಗಳು ಮತ್ತು ಪಂಪ್‌ಸೆಟ್ ಮೋಟಾರ್‌ಗಳು ಜಲಾವೃತವಾಗಿವೆ. ಅಲ್ಲಿನ ದೇವಾಲಯ ಟ್ರಸ್ಟ್ ಸದಸ್ಯರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ನದಿ ಪಾತ್ರದ ಭಕ್ತರಿಗೆ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ಯಾವುದೇ ಆತಂಕವಿಲ್ಲದೇ ಭಕ್ತರು ಸಮಾಧಾನದಿಂದ ಕ್ಷೇತ್ರಕ್ಕೆ ಆಗಮಿಸಿ, ದೇವರ ದರ್ಶನ ಮಾಡಬಹುದು ಎಂದು ದೇವಾಲಯ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಸುರೇಶ್ ತಿಳಿಸಿದ್ದಾರೆ.- - - -ಚಿತ್ರ-೪: ಉಕ್ಕಡಗಾತ್ರಿ-ಫತೇಪುರ ರಸ್ತೆ ಸಂಪರ್ಕ ಕಡಿತ.
-ಚಿತ್ರ-೫: ಉಕ್ಕಡಗಾತ್ರಿ ರೈತರ ಜಮೀನು ಜಲಾವೃತ.