ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ವಕ್ಫ್ ಸಂಕಷ್ಟ ಪರಿಹರಿಸುವಂತೆ ಒತ್ತಾಯಿಸಿ ರೈತರು ಜಿಲ್ಲಾಡಳಿತ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದರು. ರಾತ್ರಿಯಿಡಿ ರೈತರೊಂದಿಗೆ ಇದ್ದು ಡಿಸಿ ಕಚೇರಿ ಆವರಣದಲ್ಲೇ ಅಡುಗೆ ತಯಾರಿಸಿ ಅವರೊಂದಿಗೆ ಉಪಹಾರವನ್ನೂ ಸವಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ಸಂಕಷ್ಟ ಪರಿಹರಿಸುವಂತೆ ಒತ್ತಾಯಿಸಿ ರೈತರು ಜಿಲ್ಲಾಡಳಿತ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದರು. ರಾತ್ರಿಯಿಡಿ ರೈತರೊಂದಿಗೆ ಇದ್ದು ಡಿಸಿ ಕಚೇರಿ ಆವರಣದಲ್ಲೇ ಅಡುಗೆ ತಯಾರಿಸಿ ಅವರೊಂದಿಗೆ ಉಪಹಾರವನ್ನೂ ಸವಿದರು.ಈ ವೇಳೆ ಉಮೇಶ ಕಾರಜೋಳ ಮಾತನಾಡಿ, ಹಿಂದೂ- ಮುಸ್ಲಿಂ ಎಲ್ಲರೂ ಒಂದೇ ಎಂದು ಶಾಂತವಾಗಿರುವ ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಧರ್ಮ ದಂಗಲ್ ಎಬ್ಬಿಸುತ್ತಿದೆ. ವಕ್ಫ್ ಆಸ್ತಿಯೆಂದು ಹೇಳಿ ರೈತರ, ಅಮಾಯಕರ ಭೂಮಿಯನ್ನು ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರ ಮಾಡಿಕೊಂಡಿದೆ. 50 ವರ್ಷಗಳ ಹಿಂದೆ ಆಗಿರುವ ಗೆಜೆಟ್ ಯಾವ ಆಧಾರದ ಮೇಲೆ ಆಯಿತು? ಗೆಜೆಟ್‌ನಲ್ಲಿರುವ ಆಸ್ತಿಗಳೆಲ್ಲವೂ ಎಲ್ಲಿಂದ ಬಂದವು ಎಂಬುದು ತಿಳಿಸಬೇಕು. ರೈತರ ಪಹಣಿಗಳಲ್ಲಿ ವಕ್ಫ್ ಎಂದು ಹೆಸರು ಸೇರಿಸುವ ಕಾರ್ಯವನ್ನು ಇಲ್ಲಿಗೆ ಕೈ ಬಿಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ವಿರುದ್ಧ ರೈತರು ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.
ಈ ವೇಳೆ ರೈತ ಹೋರಾಟಗಾರರಾದ ಅರವಿಂದ ಕುಲಕರ್ಣಿ, ಸಂಗಮೇಶ ಸಗರ ಸೇರಿದಂತೆ ನೂರಾರು ರೈತರು ಇದ್ದರು.