ಸಾರಾಂಶ
ಹೊಸಕೋಟೆ: ಸಮಾಜದಲ್ಲಿ ಮಕ್ಕಳನ್ನು ಅನಧಿಕೃತವಾಗಿ ದತ್ತು ಸ್ವೀಕಾರ ಮಾಡುವುದು ಕಾನೂನಿನಡಿ ಶಿಕ್ಷಾರ್ಹ ಅಪರಾಧ ಎಂದು ಮಾನವ ಸಾರಥಿ ಟ್ರಸ್ಟ್ ಮುಖ್ಯಸ್ಥೆ ಶಾಂಭವಿ ತಿಳಿಸಿದರು.
ಹೊಸಕೋಟೆ: ಸಮಾಜದಲ್ಲಿ ಮಕ್ಕಳನ್ನು ಅನಧಿಕೃತವಾಗಿ ದತ್ತು ಸ್ವೀಕಾರ ಮಾಡುವುದು ಕಾನೂನಿನಡಿ ಶಿಕ್ಷಾರ್ಹ ಅಪರಾಧ ಎಂದು ಮಾನವ ಸಾರಥಿ ಟ್ರಸ್ಟ್ ಮುಖ್ಯಸ್ಥೆ ಶಾಂಭವಿ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ತೆಯಲ್ಲಿ ಮಾನವ ಸಾರಥಿ ಟ್ರಸ್ಟ್ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಥೆ 3 ವರ್ಷಗಳಿಂದ ಅನಾಥ ಮಕ್ಕಳಿಗೆ ಆಶ್ರಯ ನೀಡಿ ಕಲಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ದಾಖಲಿಸುತ್ತಿದೆ. ಮಕ್ಕಳಿಲ್ಲದ ದಂಪತಿಗಳು ಕೇವಲ ಸಂಬಂಧಿಕರಲ್ಲಿನ ಮಕ್ಕಳನ್ನು ಮಾತ್ರ ದತ್ತು ಪಡೆಯಲು ಆದ್ಯತೆ ನೀಡದೆ ಸಂಘ ಸಂಸ್ಥೆಗಳಲ್ಲಿರುವ ಅನಾಥ ಮಕ್ಕಳ ಬಗ್ಗೆಯೂ ಗಮನಹರಿಸಬೇಕು ಎಂದು ಮನವಿ ಮಾಡಿದರು.ಸಂಪನ್ಮೂಲ ವ್ಯಕ್ತಿ ಓಬಳೇಶ್ ಮಾತನಾಡಿ, ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾನೂನಿನ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಸೀ ನಿಟ್ಟಿನಲ್ಲಿ ಸರ್ಕಾರವೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಡಾ.ಸಿ.ಎಸ್. ಸತೀಶ್‌ಕುಮಾರ್ ಮಾತನಾಡಿ, ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರೇತರ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿರುವುದು ಅಭಿನಂದನಾರ್ಹ ಎಂದರು.ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ, ಮಾನವ ಸಾರಥಿ ಟ್ರಸ್ಟ್ ಸಿಬ್ಬಂದಿ ಲಕ್ಷ್ಮೀ ಹೆಬ್ಬಾಳ್ ಮತ್ತು ಲಕ್ಕವ್ವ ಹುಲ್ಕುಂದ್ ಉಪಸ್ಥಿತರಿದ್ದರು.
ಫೋಟೋ: 15 ಹೆಚ್ ಎಸ್‌ಕೆ 2ಹೊಸಕೋಟೆ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಮಾನವ ಸಾರಥಿ ಟ್ರಸ್ಟ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮವನ್ನು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್ ಉದ್ಘಾಟಿಸಿದರು.