ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆ ಸಂತ್ರಸ್ತ ಮಹಿಳೆಯರ ಧರಣಿ ಎರಡನೇ ದಿನಕ್ಕೆ

| Published : Oct 04 2024, 01:05 AM IST

ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆ ಸಂತ್ರಸ್ತ ಮಹಿಳೆಯರ ಧರಣಿ ಎರಡನೇ ದಿನಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅನಧಿಕೃತವಾಗಿ ಗರ್ಭಕೋಶ ಚಿಕಿತ್ಸೆಗೆ ಒಳಗಾದ ಸಂತ್ರಸ್ತ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ವಿಶೇಷ ಪ್ಯಾಕೇಜ್ ಹಾಗೂ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ನಗರದ ತಹಸೀಲ್ದಾರ್ ಕಚೇರಿ ಎದುರು ಸಂತ್ರಸ್ತ ಮಹಿಳೆಯರು ನಡೆಸುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ರಾಣಿಬೆನ್ನೂರು: ಅನಧಿಕೃತವಾಗಿ ಗರ್ಭಕೋಶ ಚಿಕಿತ್ಸೆಗೆ ಒಳಗಾದ ಸಂತ್ರಸ್ತ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ವಿಶೇಷ ಪ್ಯಾಕೇಜ್ ಹಾಗೂ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ನಗರದ ತಹಸೀಲ್ದಾರ್ ಕಚೇರಿ ಎದುರು ಸಂತ್ರಸ್ತ ಮಹಿಳೆಯರು ನಡೆಸುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸಾಮೂಹಿಕ ಆತ್ಮಹತ್ಯೆಯ ಅಣಕು ಪ್ರದರ್ಶನ: ಸಂತ್ರಸ್ತ ಮಹಿಳೆಯರು ಸಾಮೂಹಿಕ ಆತ್ಮಹತ್ಯೆಯ ಅಣಕು ಪ್ರದರ್ಶನ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಅಸ್ವಸ್ಥಗೊಂಡ ಸಂತ್ರಸ್ತ ಮಹಿಳೆ: ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಸಂತ್ರಸ್ತೆ ಶಂಕ್ರಮ್ಮ ಚಂದಪೋರ ಎನ್ನುವರು ತೀವ್ರವಾಗಿ ಅಸ್ವಸ್ಥಗೊಂಡರು. ಈ ಹಿನ್ನೆಲೆಯಲ್ಲಿ ಅವರನ್ನು ತುರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಚಂದ್ರಣ್ಣ ಬೇಡರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಲಲಿತವ್ವ ಲಮಾಣಿ, ಶೈಲ ರಂಗರೆಡ್ಡಿ, ಪಾರವ್ವ ಲಮಾಣಿ, ಮಂಜಕ್ಕ ಚೌಡಕ್ಕವರ, ಗುತ್ತೇವ್ವ ಹರಿಜನ, ನಿರ್ಮಲ ಹರಿಜನ, ಗಂಗವ್ವ ಲಮಾಣಿ, ಶಾಂತವ್ವ ಕುರಬರ, ಗಿರಿಜವ್ವ ಶಿಡೇನೂರ, ನಾಗವ್ವ ತಳವಾರ, ಮಂಜವ್ವ ಲಮಾಣಿ, ಗಂಗವ್ವ ಲಮಾಣಿ, ಪ್ರೇಮಕ್ಕ ಕೆರಿಮಲ್ಲಾಪುರ, ಗಿರಿಜವ್ವ ಲಮಾಣಿ, ನೀಲವ್ವ ಬೋಳಹೊಳೆಯಪ್ಪವರ, ರೈತ ಮುಖಂಡ ಹನುಮಂತಪ್ಪ ಕಬ್ಬಾರ, ರವೀಂದ್ರಗೌಡ ಪಾಟೀಲ, ಜಗದೀಶ ಕೆರೂಡಿ, ಹರಿಹರಗೌಡ ಪಾಟೀಲ ಮತ್ತಿತರರಿದ್ದರು.