ಪೂರ್ಣವಾಗದ ಬನ್ನಿಕೊಪ್ಪ ಬಸ್ ನಿಲ್ದಾಣ ನವೀಕರಣ ಕಾರ್ಯ

| Published : Nov 10 2025, 01:45 AM IST

ಪೂರ್ಣವಾಗದ ಬನ್ನಿಕೊಪ್ಪ ಬಸ್ ನಿಲ್ದಾಣ ನವೀಕರಣ ಕಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಿಸಿ ಹಾಕದೆ ಹಲವಾರು ದಿನಗಳು ಗತಿಸಿವೆ. ಇದರಿಂದ ಬಸ್ ಗಳು ಬಸ್ ನಿಲ್ದಾಣದ ಆವರಣದಲ್ಲಿ ಸಹ ಬರುವುದಿಲ್ಲ

ಕುಕನೂರು: ತಾಲೂಕಿನ ಬನ್ನಿಕೊಪ್ಪ ಬಸ್ ನಿಲ್ದಾಣದ ನವೀಕರಣ ಕಾರ್ಯ ಅಪೂರ್ಣಗೊಂಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಬನ್ನಿಕೊಪ್ಪ ಬಸ್ ನಿಲ್ದಾಣದ ಮುಖ್ಯ ಕಟ್ಟಡ ಅಭಿವೃದ್ಧಿ ಹಾಗೂ ಮುಚ್ಚಳ ಹೊದಿಕೆಗೆ ಕೆಕೆಆರ್‌ಟಿಸಿ, ಕೆಕೆಆರ್‌ಡಿಬಿಯಿಂದ ₹2.21 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ಬಹುತೇಕ ಕಾಮಗಾರಿ ಕಾರ್ಯ ಮುಗಿದಿದೆ. ಬಸ್ ನಿಲ್ದಾಣದ ಮುಂಭಾಗದಲ್ಲಿ ಬಸ್ ನಿಲ್ಲುವ, ಓಡಾಡುವ ಜಾಗದಲ್ಲಿ ಸಿಸಿ ಹಾಕುವ ಕೆಲಸ ಬಾಕಿ ಇದೆ.

ಸಿಸಿ ಹಾಕದೆ ಹಲವಾರು ದಿನಗಳು ಗತಿಸಿವೆ. ಇದರಿಂದ ಬಸ್ ಗಳು ಬಸ್ ನಿಲ್ದಾಣದ ಆವರಣದಲ್ಲಿ ಸಹ ಬರುವುದಿಲ್ಲ. ರಸ್ತೆಯಲ್ಲಿಯೇ ನಿಂತು ತೆರಳುತ್ತವೆ. ಬನ್ನಿಕೊಪ್ಪದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಒಂದೊಂದು ನಿಮಿಷಕ್ಕೂ ಅಪಾರ ವಾಹನ ತೆರಳುತ್ತವೆ. ಜನ ಸಹ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಹಾಗೂ ನಿಲ್ಲಲು ಅವಕಾಶ ಇಲ್ಲ. ಜನ ಸಹ ರಸ್ತೆ ಬದಿಯೇ ನಿಲ್ಲಬೇಕಾದ ಅನಿವಾರ್ಯತೆ ಇದೆ. ಇದರಿಂದ ಪೂರ್ಣವಾಗದ ಬನ್ನಿಕೊಪ್ಪ ಬಸ್ ನಿಲ್ದಾಣದ ಕಾಮಗಾರಿಯಿಂದ ಜನ ಕಷ್ಟ ಅನುಭವಿಸುವಂತಾಗಿದೆ.

ಬನ್ನಿಕೊಪ್ಪ ಬಸ್ ನಿಲ್ದಾಣದ ಕಾಮಗಾರಿ ಕೆಲಸ ಅಪೂರ್ಣ ಆದ ಹಿನ್ನೆಲೆ ಜನರಿಗೆ ತೊಂದರೆಯಾಗಿದೆ. ಜನರು ಬಿಸಿಲಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ರಸ್ತೆ ಬದಿಯಲ್ಲಿಯೇ ಜನರು ಬಸ್ಸಿಗಾಗಿ ಕಾಯುವುದರಿಂದ ಅಪಘಾತ ಆಗುವ ಸಂಬಂಧ ಸಹ ಹೆಚ್ಚಿವೆ. ಇದರ ಬಗ್ಗೆ ಕೂಡಲೇ ಅಧಿಕಾರಿ ವರ್ಗದವರು ಗಮನ ಹರಿಸಿ ಬಸ್ ನಿಲ್ದಾಣ ಕೆಲಸ ಪೂರ್ಣಗೊಳಿಸಿದರೆ ಜನರಿಗೆ ಅನುಕೂಲ ಆಗಲಿದೆ ಎಂದು ಬನ್ನಿಕೊಪ್ಪ ಗ್ರಾಮ ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪೂರ ತಿಳಿಸಿದ್ದಾರೆ.