ಓಬಳಾಪುರ ಡೇರಿಗೆ ನಿರ್ದೇಶಕರ ಅವಿರೋಧ ಆಯ್ಕೆ

| Published : Feb 04 2024, 01:34 AM IST

ಸಾರಾಂಶ

ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಮಾಂಜಿನಪ್ಪ ತಿಳಿಸಿದರು.

ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಮಾಂಜಿನಪ್ಪ ತಿಳಿಸಿದರು.

ಓಬಳಾಪುರದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಫೆ.7ರಂದು ಚುನಾವಣೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ 12 ನಿರ್ದೇಶಕ ಸ್ಥಾನಗಳಿಗೆ 13 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಒಬ್ಬರು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ 12 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರಾಗಿ ಗಂಗಸಾಮಯ್ಯ, ರೇಣುಕಾರಾಧ್ಯ, ನರಸಿಂಹಮೂರ್ತಿ, ಮಾರಣ್ಣ, ಬಸವರಾಜು, ಚಂದ್ರಶೇಖರ್, ಉಮಾದೇವಿ, ಸಿದ್ದಗಂಗಮ್ಮ, ವೀರಭದ್ರಯ್ಯ, ನಾರಾಯಣಪ್ಪ, ರಾಮಚಂದ್ರ, ಹನುಮಂತೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕ ರೇಣುಕಾರಾಧ್ಯ ಮಾತನಾಡಿ, ಈ ಬಾರಿ ಅನಾವಶ್ಯಕವಾಗಿ ಚುನಾವಣೆಗೆ ಖರ್ಚಾಗುವ ಹಣವನ್ನು ಸಂಘಕ್ಕೆ ಉಳಿಸಿದ್ದೇವೆ. ಎಲ್ಲರ ಸಹಕಾರದಿಂದ ಮುಂದಿನ ಐದು ವರ್ಷಗಳಲ್ಲಿ ಡೇರಿ ಕಟ್ಟಡ ನಿರ್ಮಾಣಕ್ಕೆ ಶ್ರಮಿಸುತ್ತೇವೆ ಎಂದು ಸಂಘದ ಎಲ್ಲಾ ಸದಸ್ಯರಿಗೂ ಧನ್ಯವಾದ ಅರ್ಪಿಸಿದರು.

ನೂತನ ನಿರ್ದೇಶಕರನ್ನು ಗ್ರಾಮದ ಮುಖಂಡರಾದ ಹನುಮಂತೇಗೌಡ್ರು, ಸಂಘದ ಮಾಜಿ ಅಧ್ಯಕ್ಷರಾದ ನಾಗರಾಜು, ಗೋವಿಂದರಾಜು, ಗ್ರಾಪಂ ಮಾಜಿ ಉಪಾಧ್ಯಕ್ಷ ರಂಗಸ್ವಾಮಿ, ಗ್ರಾಪಂ ಸದಸ್ಯ ಶ್ರೀಧರ್, ಸೋಮಶೇಖರ್, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು.

ಪೋಟೋ 6 :

ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದಕ್ಕೆ ಗ್ರಾಮಸ್ಥರು ಅಭಿನಂದಿಸಿದರು.