ಸಾರಾಂಶ
ತರೀಕೆರೆ ಸಮೀೂಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ವತಿಯಿಂದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಕಾರ್ಯಕ್ರಮ ಏರ್ಪಾಡಿಸಲಾಗಿತ್ತು.
ಕನ್ನಡಪ್ರಭವಾರ್ತೆ ತರೀಕೆರೆ
ಮಕ್ಕಳು ಎಳೆ ವಯಸ್ಸಿಗೇ ಗಣಿ ಉದ್ಯಮ, ಕೃಷಿ ಇತ್ಯಾದಿ ಕೆಲಸಗಳಲ್ಲಿ ಸೇರಿಕೊಳ್ಳುವುದು ಕಾನೂನು ರೀತಿ ಅಪರಾಧ ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಟಿ. ಹಾಲೇಶ್ ಹೇಳಿದ್ದಾರೆ.ಮಂಗಳವಾರ ಶ್ರೀ ಅಮೃತೇಶ್ವರ ಪ್ರೌಢಶಾಲೆ ವತಿಯಿಂದ ಶಾಲೆ ಆವರಣದಲ್ಲಿ ಏರ್ಪಾಡಾಗಿದ್ದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಕಾರ್ಯಕ್ರಮ
ದಲ್ಲಿ ಅವರು ಮಾತನಾಡಿ, ಬಾಲ ಕಾರ್ಮಿಕರ ವಿರೋಧಿ ಕಾನೂನು ಅಸ್ತಿತ್ವಕ್ಕೆ ಬಂದು ಬಾಲ ಕಾರ್ಮಿಕರು ಬೇರ ಬೇರೆ ಉದ್ಯಮಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿರುವುದನ್ನು ತಿಳಿಸಿದರು,ಅಲ್ಲದೆ ಸಂವಿಧಾನದ 39ನೇ ವಿಧಿ ಪ್ರಕಾರ ಗಣಿ ಮತ್ತು ಉದ್ಯಮಗಳಲ್ಲಿ 14ನೇ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಕಾಸಿಗಾಗಿ ಕೆಲಸ ಮಾಡವುದನ್ನು ನಿಷೇಧಿಸಿರುವ ಬಗ್ಗೆ ಮಕ್ಕಳಿಗೆ ತಿಳಿಸಿ, 14 ವರ್ಷದೊಳಗಿನವರು ದುಡಿಮೆಗಾಗಿ ಬೇರೆ ಉದ್ಯಮಗಳಲ್ಲಿ ತೊಡಗಿಕೊಳ್ಳುವುದರಿಂದ ಅವರ ಮಾನಸಿಕ ಮತ್ತು ದೈಹಿಕ ವಿಕಾಸ ಕುಂಠಿತವಾಗುತ್ತದೆ ಎಂದು ಹೇಳಿದರು.
ಶ್ರೀ ಅಮೃತೇಶ್ವರ ಪ್ರೌಢಶಾಲೆ ಸಹ ಶಿಕ್ಷಕಿ ಮಂಜುಲಾ ಮಲ್ಲಿಗೆವಾಡ ಅವರು ಮಾತನಾಡಿ, ಮಕ್ಕಳು ಚಿಕ್ಕ ವಯಸ್ಸಿಗೆ ಬೇರೇ ಬೇರೆ ಉದ್ಯಮಗಳಲ್ಲಿ ತೊಡಗಿಕೊಳ್ಳುವುದರಿಂದ ಅವರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ, ಅಲ್ಲದೆ ಮಕ್ಕಳು ಚೆನ್ನಾಗಿ ಓದಿ ತಮ್ಮ ಭವ್ಯ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಅವರು ಹೇಳಿದರು.ವಿದ್ಯಾರ್ಥಿನಿ ಸಹನ ಅವರು ಶಾಲಾ ಮಕ್ಕಳಿಗೆ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ಪ್ರಮಾಣ ವಚನ ಬೋಧಿಸಿದರು. ಶಾಲಾ ಶಿಕ್ಷಕರಾದ ಖಜರ್ ಖಾನ್, ರಮಾಕಾಂತ್, ಸತೀಶ್ ನಂದಿಹಳ್ಳಿ, ಪಂಚಾಕ್ಷರಪ್ಪ, ಸವಿತಮ್ಮ, ಪ್ರಭಾಕರ್, ಮತ್ತಿತರರು ಭಾಗವಹಿಸಿದ್ದರು.