ಸಾರಾಂಶ
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇಲ್ಲಿನ ರಾಜನಗರ ಮೈದಾನದಲ್ಲಿ ಆಯೋಜಿಸಿದ್ದ ಅಂಡರ್-16 ಇಂಟರ್ ಕ್ಲಬ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು.
ಹುಬ್ಬಳ್ಳಿ:
ಅರ್ಜುನ ಗೊಥೆ 53, ಶಿವಂ ಕಾಟವೆ 28 ಅವರ ಉತ್ತಮ ಬ್ಯಾಟಿಂಗ್ ಹಾಗೂ ಸುಚೇತನ್ ಹರಿಹರ 22-3, ನಿತಾಂತ್ ಪಾವಸ್ಕರ್ 20-3 ಇವರ ಉತ್ತಮ ಬೌಲಿಂಗ್‌ನಿಂದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಎ ತಂಡ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ಎ ತಂಡದ ವಿರುದ್ಧ 47 ರನ್‌ಗಳಿಂದ ಜಯ ಗಳಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇಲ್ಲಿನ ರಾಜನಗರ ಮೈದಾನದಲ್ಲಿ ಆಯೋಜಿಸಿದ್ದ ಅಂಡರ್-16 ಇಂಟರ್ ಕ್ಲಬ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಎ ತಂಡ 40.4 ಓವರ್‌ನಲ್ಲಿ 149ಕ್ಕೆ ಆಲ್‌ಔಟ್ ಆಯಿತು. ತಂಡದ ಪರ ಅರ್ಜುನ ಗೊಥೆ 53, ಶಿವಂ ಕಾಟವೆ 28, ನಿತಾಂತ್ ಪಾವಸ್ಕರ್ 16 ರನ್ ಗಳಿಸಿದರು.ಲೀಲಾಕೃಷ್ಣ 32-3, ಅಣ್ಣಪ್ಪ ಹೊಸಮನಿ 28-2, ನವಾಜ್ ಶಿಬಾರಗಟ್ಟಿ 23-2 ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಮಾಡಿದ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ 45.4 ಓವರ್‌ನಲ್ಲಿ 102 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ತಂಡದ ಪರ ಶಲೊಕ್ ಮಹಾಲೆ 32 ರನ್ ಗಳಿಸಿದರು. ಸುಚೇತನ್ ಹರಿಹರ 22-3, ನಿತಾಂತ್ ಪಾವಸ್ಕರ್ 20-3, ಹರೀಶಗೌಡ ತೋಟದ 15-2 ವಿಕೆಟ್ ಪಡೆದುಕೊಂಡರು. ಕೋಚ್ ನಟರಾಜ ಯಾವಗಲ್, ನಿರ್ದೇಶಕ ಪ್ರಮೋದ ಜಂಬಗಿ ಗೆದ್ದ ತಂಡವನ್ನು ಅಭಿನಂದಿಸಿದರು.