ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಚಂದ್ರಯಾನ-3ರ ಉಡ್ಡಯನದ ನಂತರ ಅಂತರಿಕ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ದೇಶಗಳು ಮಾಹಿತಿ ಪಡೆಯುತ್ತಿದ್ದು, ಪ್ರವಾಹ, ಚಂಡಮಾರುತ ಸೇರಿದಂತೆ ಪ್ರಾಕೃತಿಕ ವಿಕೋಪದ ವಾತಾವರಣ ಉಂಟಾಗುವ ಏರುಪೇರುಗಳ ಮಾಹಿತಿಯನ್ನು ಪಡೆಯಲಾಗುತ್ತಿದ್ದು, ಹೆಚ್ಚಿನ ಅನಾಹುತ ತಪ್ಪಿಸಲು ಸಹಕಾರಿಯಾಗುತ್ತಿದೆ ಎಂದು ಬೆಂಗಳೂರಿನ ಇಸ್ರೋ ಕೇಂದ್ರದ ಟೆಲಿಮಿಟ್ರಿ, ಟ್ರಾಕಿಂಗ್ ಕಮಾಂಡ್ ನೆಟ್‌ವರ್ಕ್ ನಿರ್ದೇಶಕ ಡಾ ಬಿ.ಎನ್.ರಾಮಕೃಷ್ಣ ಹೇಳಿದರು.ನಗರದ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಎಂಜಿನಿಯರ್ ಕಾಲೇಜಿನ ಕ್ಯಾಂಪಸ್ ಆವರಣದಲ್ಲಿ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಚಂದ್ರಯಾನ 3ರಲ್ಲಿ ಉಡ್ಡಯನದ ನಂತರದಲ್ಲಿ ಇಸ್ರೋ ತನ್ನದೇ ಸಾಧನೆ ಮಾಡಿದೆ. ಅದೇ ರೀತಿ ರಾಕೆಟ್ ನಿರ್ಮಾಣ ಕಾರ್ಯಗಳಲ್ಲಿ ಅನೇಕ ಸಂಶೋಧನೆ ನಡೆಸಿ ಇಡೀ ವಿಶ್ವಕ್ಕೆ ಅವಶ್ಯಕತೆ ಇರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲಾಗಿದೆ. ಇಸ್ರೋದ ಚಂದ್ರಯಾನ ಯಶಸ್ವಿಯಾಗಿದ್ದನ್ನು ಇಡೀ ವಿಶ್ವ ಗಮನಿಸಿದೆ. ಸ್ಪೇಸ್ ಅಂದರೆ ಅನಂತವೆಂದು ಇದಕ್ಕೆ ಕೊನೆಯಿಲ್ಲ. ಅಂತರಿಕ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೆಳವಣಿಗೆಗಳ ಬಗ್ಗೆ ಅನೇಕ ದೇಶಗಳು ಮಾಹಿತಿ ಪಡೆಯುತ್ತಿವೆ ಎಂದರು. ಪ್ರಾಕೃತಿಕ ವಿಕೋಪಗಳು, ದುರಂತ, ಬರ, ಪ್ರವಾಹ ಚಂಡಮಾರುತ ಸೇರಿದಂತೆ ವಾತಾವರಣ ಉಂಟಾಗುವ ಏರುಪೇರುಗಳ ಮಾಹಿತಿಯನ್ನು ಬಾಹ್ಯಾಕಾಶದಿಂದ ಪಡೆಯಲಾಗುತ್ತಿದ್ದು, ಇದರಿಂದ ಹೆಚ್ಚಿನ ಹಾನಿ ಹಾಗೂ ಅನಾಹುತ ತಪ್ಪಿಸಬಹುದಾಗಿದೆ ಎಂದು ಹೇಳಿದರು.ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಂಶೋಧನಾತ್ಮಕ ಅಧ್ಯಯನ ನಡೆಸಿ, ಮುಂದೆ ಸಂಭವಿಸುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಟ್ರಾಫಿಕ್, ರಸ್ತೆ ಸಂಚಾರದಲ್ಲಿನ ದಟ್ಟಣೆ ಘಟನೆಗಳ ಬಗ್ಗೆ ಮಾಹಿತಿಯನ್ನು ತಕ್ಷಣದಲ್ಲಿ ಪಡೆಯುವ ತಂತ್ರಜ್ಞಾನ ಅವಿಷ್ಕಾರವಾಗುತ್ತಿದ್ದು, ಇದನ್ನು ವಾಹನ ತಯಾರಿಕಾ ಕಂಪನಿಗಳು ಅಳವಡಿಸಬಹುದು. ಪ್ರತಿ ಸಮಸ್ಯೆಗೂ ಒಂದಲ್ಲಾ ಒಂದು ಹೊಸ ರೀತಿಯಲ್ಲಿ ಸಂಶೋಧನಾತ್ಮಕ ಉತ್ತರ ಕಂಡುಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಇಸ್ರೋ ಕೂಡಾ ಮಾನವನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಎಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಡಿಜಿಟಲ್ ಸಾಧನೆ ಮಾಡಬೇಕು. ನಮ್ಮ ಇಸ್ರೋಗೆ ಅವಶ್ಯಕತೆ ಇರುವ ತಂತ್ರಜ್ಞಾನ ನಿಪುಣ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅವಶ್ಯಕತೆ ಇದೆ. ತಂತ್ರಜ್ಞಾನದಲ್ಲಿ ಉನ್ನತ ಸಂಶೋಧನೆ ಬೆಳವಣಿಗೆಗೆ ಸಮಾಜಕ್ಕೆ ಅಗತ್ಯವಾಗಿದೆ ಎಂದರು.ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಭಾರತ ಎಂದಿಗೂ ಕೂಡಾ ಮುಂಚೂಣಿಯಲ್ಲಿರುವ ರಾಷ್ಟ್ರ. ಸ್ವಾತಂತ್ರ್ಯಾ ಬಂದ ನಂತರ ದೇಶದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ ಎಂದರು.ಸಾಹೇ ವಿವಿ ಕುಲಪತಿ ಡಾ. ಕೆ.ಬಿ.ಲಿಂಗೇಗೌಡ ಮಾತನಾಡಿ, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳಿಗೆ ನೂರು ವರ್ಷಗಳ ಸಾಧನೆಯತ್ತ ಸಾಗಿದೆ ಎಂದರು.
ಡಾ. ಎಂ.ಝಡ್. ಕುರಿಯನ್, ಡಾ.ಗುರುಶಂಕರ್, ನಂಜುಂಡಪ್ಪ, ಡಾ.ವಿವೇಕ್ ವೀರಯ್ಯ, ಡಾ. ಎಂ.ಎಸ್. ರವಿಪ್ರಕಾಶ್, ಡಾ.ಎಲ್.ಸಂಜೀವ್ ಕುಮಾg, ಸಿದ್ದಾರ್ಥ ಉಪಸ್ಥಿತರಿದ್ದರು.