ಪಾಲಿಟೆಕ್ನಿಕ್ ಕಾಲೇಜ್‌ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ, ಸಾರ್ವಜನಿಕರ ಆಕ್ರೋಶ

| Published : Jan 15 2024, 01:45 AM IST

ಪಾಲಿಟೆಕ್ನಿಕ್ ಕಾಲೇಜ್‌ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ, ಸಾರ್ವಜನಿಕರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರೋಣ ತಾಲೂಕಿನ ಗ್ರಾಮೀಣ ಬಡ ಮಕ್ಕಳಿಗೆ ಉನ್ನತ ತಾಂತ್ರಿಕ ಶಿಕ್ಷಣ ಲಭಿಸಲಿ ಎಂಬ ಸದುದ್ದೇಶದಿಂದ ಪಟ್ಟಣದ ಸಮೀಪ ಕುರಹಟ್ಟಿ ಒಳ ರಸ್ತೆಯಲ್ಲಿ ನಿರ್ಮಿಸಲಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನೂತನ ಕಟ್ಟಡವು ಉದ್ಘಾಟನೆಗೂ ಮುನ್ನ ಅನೈತಿಕ ಚಟುವಟಿಕೆ ತಾಣವಾಗಿದೆ ಎಂದು‌ ಪಟ್ಟಣದ ಜನತೆ ಶುಕ್ರವಾರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಕಟ್ಟಡ ಎದುರು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.

ರೋಣ: ತಾಲೂಕಿನ ಗ್ರಾಮೀಣ ಬಡ ಮಕ್ಕಳಿಗೆ ಉನ್ನತ ತಾಂತ್ರಿಕ ಶಿಕ್ಷಣ ಲಭಿಸಲಿ ಎಂಬ ಸದುದ್ದೇಶದಿಂದ ಪಟ್ಟಣದ ಸಮೀಪ ಕುರಹಟ್ಟಿ ಒಳ ರಸ್ತೆಯಲ್ಲಿ ನಿರ್ಮಿಸಲಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನೂತನ ಕಟ್ಟಡವು ಉದ್ಘಾಟನೆಗೂ ಮುನ್ನ ಅನೈತಿಕ ಚಟುವಟಿಕೆ ತಾಣವಾಗಿದೆ ಎಂದು‌ ಪಟ್ಟಣದ ಜನತೆ ಶುಕ್ರವಾರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಕಟ್ಟಡ ಎದುರು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪುರಸಭೆ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಮಾತನಾಡಿ, ರೋಣ ತಾಲೂಕಿಗೆ 2017ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಪ್ರಾರಂಭಿಸಲು ಅನುಮೋದನೆ ನೀಡುವದರ ಜೊತೆಗ, ಕಟ್ಟಡ ನಿರ್ಮಾಣಕ್ಕೆ ₹ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿತು. ಈ ನಿಟ್ಟಿನಲ್ಲಿ ರೋಣ ಸಮೀಪ ಕುರಹಟ್ಟಿ ಗ್ರಾಮ ಸಂಪರ್ಕ ಒಳ ರಸ್ತೆಯಲ್ಲಿ ಬೃಹತ್ ಕಟ್ಡಡವನ್ನು ನಿರ್ಮಿಸಲಾಗಿದೆ.‌ 2022-23ನೇ ಸಾಲಿನಲ್ಲಿ ಈ ಕಟ್ಟಡದಲ್ಲಿ ಉನ್ನತ ಶಿಕ್ಷಣ ತರಗತಿಗಳು ಪ್ರಾರಂಭವಾಗಬೇಕಿತ್ತು. ವಿಪರ್ಯಾಸವೆಂದರೆ ಇದಕ್ಕೆ ಸಂಬಂಧಿಸಿದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಈವರೆಗೂ ಇತ್ತ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಮನ ಹರಿಸದ ಇಲಾಖೆ ಅಧಿಕಾರಿಗಳು ಈ ಕುರಿತು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದಲ್ಲಿ, ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದೂ, ಒಳಗಡೆ ಎಲೆಕ್ಟ್ರಿಕ್ ವರ್ಕ( ಕೆಲಸ) ಇನ್ನೂ ಬಾಕಿಯಿದ್ದು, ಎಲೆಕ್ಟ್ರಾನಿಕ್ ಕೆಲಸ ಸೇರಿದಂತೆ ಅನೇಕ ಸಣ್ಣ ಪುಟ್ಟ ಕಾಮಗಾರಿ ಬಾಕಿಯಿದೆ. ಇದೆಲ್ಲವೂ ಪೂರ್ಣಗೊಂಡರೆ ಮಾತ್ರ ಇಲಾಖೆಗೆ ಅಧೀನಕ್ಕೆ ಪಡೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಕಾಮಗಾರಿ ನಿರ್ಮಿಸಿದ ಗುತ್ತಿಗೆದಾರರು ಹೇಳುವದೇ ಬೇರೆ, ನಾವು ಕಟ್ಟಡ ಮತ್ತು ಒಳಗಡೆ ಬೇಕಾದ ಎಲ್ಲಾ ರೀತಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಒಂದುವರೆ ವರ್ಷವಾಗುತ್ತಾ ಬಂದರೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ ಎಂದು ಒಬ್ಬರ ಮೇಲೆ ಒಬ್ಬರು ಹಾಕುತ್ತಾ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ.

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಇಲಾಖೆ ಮತ್ತು ಕಾಮಗಾರಿ ನಿರ್ಮಾಣ ಗುತ್ತಿಗೆ ಪಡೆದ ಬೆಂಗಳೂರ ಮೂಲದ ರೈಸ್ ಕಂಪನಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಗ್ಗ ಜಗ್ಗಟಾದ ಮಧ್ಯೆ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಭಾಗ್ಯ ಮರೀಚಿಕೆಯಾಗುತ್ತಿದೆ ಎಂಬುದೇ ಬೇಸರ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನೈತಿಕ ಚಟುವಟಿಕೆ ತಾಣ: ಕೋಟ್ಯಂತರ ರು.ಗಳ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಕಿಟಕಿಯ ಗ್ಲಾಸಗಳು ಒಡೆದಿವೆ. ಕಟ್ಟಡ ಒಳಗೆ ಇರುವ ಪ್ಯಾನ್ ಗಳು, ಸೇರಿದಂತೆ ಅನೇಕ ಪೀಠೋಪಕರಣಗಳಿ ದ್ವಂಸವಾಗಿವೆ. ಎಲ್ಲೆಂದರಲ್ಲಿ ಸಾರಾಯಿ ಬಾಟಲ್, ಟೆಟ್ರಾ ಪ್ಯಾಕೆಟ್‌ ಬಿದ್ದಿವೆ. ಕುರಿ, ಆಡು, ದನ, ಜಾನುವಾರುಗಳನ್ನು ಕಟ್ಟಡದ ಒಳಗೆ ಕಟ್ಟುತ್ತಿದ್ದಾರೆ. ರಾತ್ರಿಯಾಯಿತೆಂದರೆ ಕುಡುಕರ ಅಡ್ಡವಾಗಿ, ಪ್ರೇಮಿಗಳ ನೆಚ್ಚಿನ ಅನೈತಕ ಚಟುವಟಿಕೆ ತಾಣವಾಗಿ ಮಾರ್ಪಡುತ್ತಿದೆ ಎಂದು ಆರೋಪಿಸಿದರು.

ಶೀಘ್ರ ಕಾಲೇಜ್ ಪ್ರಾರಂಭಿಸಿ: ಕಟ್ಟಡ ಸಂಪುರ್ಣವಾಗಿ ಹಾಳಾಗುವ ಮೊದಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳುಬಗಮನ ಹರಿಸಿ, ಕೂಡಲೇ ಇಲ್ಲಿ ನಿತ್ಯವೂ ನಡೆಯುವ ಅನೈತಿಕ ಚಟುವಟಿಕೆ ತಡೆದು ಕ್ರಮ‌ಕೈಗೊಳ್ಳಬೇಕು. ಜೊತೆಗೆ ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಲ್ಲಿ ಪಾಲಿಟೆಕ್ನಿಕ್ ಕಾಲೇಜ್ ತರಗತಿಗಳನ್ನು ಆರಂಭಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಅನಗತ್ಯ ಕುಂಟು ನೆಪ ಹೇಳುತ್ತಾ ವಿಳಂಬ ಮಾಡಿದಲ್ಲಿ ಪಟ್ಟಣದ ಜನತೆ ಬೀದಿಗಿಳಿದು ಉಗ್ರ ಸ್ವರೂಪದಲ್ಲಿ ಹೋರಾಟ ಹಮ್ಮಿಕೊಳ್ಳಲಿದ್ದಾರೆ ಎಂದು ಪುರಸಭೆ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಎಚ್ವರಿಸಿದರು. ಪ್ರತಿಭಟನೆಯಲ್ಲಿ ಮುತ್ತಣ್ಣ ಕಳಸಣ್ಣವರ, ರವಿ ಗದಗಿನ, ಮಲ್ಲೇಶ ಆದಿ, ಮಲ್ಲಿಕಾರ್ಜುನ ಮಾಡಲಗೇರಿ, ಪ್ರಶಾಂತ ಪವಾರ, ಗಿರೀಶ ಸಾಳಂಕೆ, ಮುತ್ತಪ್ಪ ಜಿಗಳೂರ, ಕಬೀರಸಾಮ ಮುಗಳಿ ಮುಂತಾದವರಿದ್ದರು.