ಈಡೇರದ ರಾಹುಲ್ ಗಾಂಧಿ ಗ್ಯಾರಂಟಿ: ಆಕ್ಸಿಜನ್ ದುರಂತ ಸಂತ್ರಸ್ತರ ಅಳಲು

| Published : Jan 18 2024, 02:01 AM IST

ಈಡೇರದ ರಾಹುಲ್ ಗಾಂಧಿ ಗ್ಯಾರಂಟಿ: ಆಕ್ಸಿಜನ್ ದುರಂತ ಸಂತ್ರಸ್ತರ ಅಳಲು
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ಹಾಗೂ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ನೀಡಿದ್ದ ನೌಕರಿ ಗ್ಯಾರಂಟಿ ಇನ್ನೂ ಈಡೇರದೆ ಆಮ್ಲಜನಕ ದುರಂತ ಸಂತ್ರಸ್ತರು ಕಣ್ಣೀರಿಟ್ಟಿದ್ದಾರೆ. ಕೊರೊನಾ ಎರಡನೇ ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಆಮ್ಲಜನಕ ಸಿಗದ ಪರಿಣಾಮ 24 ಮಂದಿಗೂ ಅಧಿಕ (ಸರ್ಕಾರದ ವರದಿಯಲ್ಲಿ 24, ಸಂತ್ರಸ್ತರ ಪ್ರಕಾರ 36 ಮಂದಿ) ಅಸುನೀಗಿದ್ದರು. ನ್ಯಾಯಾಲಯದ ಆದೇಶದಂತೆ ಕೆಲವರಿಗೆ ಅಲ್ಪಸ್ವಲ್ಪ ಪರಿಹಾರ ಸಿಕ್ಕಿದರೂ ಕಾಂಗ್ರೆಸ್ ನಾಯಕರು ಕೊಟ್ಟಿದ್ದ ಉದ್ಯೋಗ ಗ್ಯಾರಂಟಿ ಮಾತ್ರ ಈಡೇರಿಲ್ಲ. ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಸಿಜನ್ ಸಂತ್ರಸ್ತರ ಜೊತೆ ಸಂವಾದ ನಡೆಸಿದ್ದರು. ನಮ್ಮ ಸರ್ಕಾರ ಬಂದೇ ಬರಲಿದ್ದು, ಕುಟುಂಬದ ಒಬ್ಬರಿಗೆ ನೌಕರಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು.

ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ಹಾಗೂ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ನೀಡಿದ್ದ ನೌಕರಿ ಗ್ಯಾರಂಟಿ ಇನ್ನೂ ಈಡೇರದೆ ಆಮ್ಲಜನಕ ದುರಂತ ಸಂತ್ರಸ್ತರು ಕಣ್ಣೀರಿಟ್ಟಿದ್ದಾರೆ. ಕೊರೊನಾ ಎರಡನೇ ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಆಮ್ಲಜನಕ ಸಿಗದ ಪರಿಣಾಮ 24 ಮಂದಿಗೂ ಅಧಿಕ (ಸರ್ಕಾರದ ವರದಿಯಲ್ಲಿ 24, ಸಂತ್ರಸ್ತರ ಪ್ರಕಾರ 36 ಮಂದಿ) ಅಸುನೀಗಿದ್ದರು. ನ್ಯಾಯಾಲಯದ ಆದೇಶದಂತೆ ಕೆಲವರಿಗೆ ಅಲ್ಪಸ್ವಲ್ಪ ಪರಿಹಾರ ಸಿಕ್ಕಿದರೂ ಕಾಂಗ್ರೆಸ್ ನಾಯಕರು ಕೊಟ್ಟಿದ್ದ ಉದ್ಯೋಗ ಗ್ಯಾರಂಟಿ ಮಾತ್ರ ಈಡೇರಿಲ್ಲ. ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಸಿಜನ್ ಸಂತ್ರಸ್ತರ ಜೊತೆ ಸಂವಾದ ನಡೆಸಿದ್ದರು. ನಮ್ಮ ಸರ್ಕಾರ ಬಂದೇ ಬರಲಿದ್ದು, ಕುಟುಂಬದ ಒಬ್ಬರಿಗೆ ನೌಕರಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು.ಚುನಾವಣಾ ಪ್ರಚಾರದ ಸಮಯದಲ್ಲೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೂಡ ಭರವಸೆ ಕೊಟ್ಟಿದ್ದರು. ಅದಕ್ಕೂ ಮುನ್ನ, ಡಿಕೆಶಿ 36 ಕುಟುಂಬಗಳನ್ನೂ ಭೇಟಿ ಮಾಡಿ ತಲಾ 1ಲಕ್ಷ ವೈಯಕ್ತಿಕ ಪರಿಹಾರ ಕೊಟ್ಟು ನೆರವು ನೀಡಿದ್ದರು. ಸದ್ಯ, ಸರ್ಕಾರ ಬಂದು ಹತ್ತಿರ 8 ತಿಂಗಳಾದರೂ ಇವರಿಗೆ ಉದ್ಯೋಗ ನೀಡಿಲ್ಲ. ಕಳೆದ ತಿಂಗಳು ಚಾಮರಾಜನಗರ ಡಿಸಿಗೆ ಮನವಿ ಸಲ್ಲಿಸಿದ ವೇಳೆ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ ಎಂದಿದ್ದರು, ಅದಾದ ಬಳಿಕವು ಸಾಕಷ್ಟು ಸಚಿವರು, ಜನತಾ ದರ್ಶನದಲ್ಲಿ ಮನವಿ ಮಾಡಿದರೂ ಇವರಿಗೆ ಕೊಟ್ಟಿದ್ದ ಗ್ಯಾರಂಟಿ ಈಡೇರಿಲ್ಲ.ಹೊರಗುತ್ತಿಗೆ ನೌಕರಿಗೆ ನಕಾರ; ಮಂಗಳವಾರ ಚಾಮರಾಜನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ 31 ಸಂತ್ರಸ್ತ ಕುಟುಂಬಗಳು ಸಚಿವ ಕೆ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ,ತಾತ್ಕಾಲಿಕವಾಗಿ ಹೊರಗುತ್ತಿಗೆ ನೌಕರಿಯನ್ನು ಶೀಘ್ರವೇ ಕೊಡುವುದಾಗಿ ಹೇಳಿದರು. ಇದಕ್ಕೆ, ನಮಗೆ ಹೊರಗುತ್ತಿಗೆ ನೌಕರಿ ಬೇಡ, ಇಷ್ಟು ವರ್ಷವೇ ಕಾದಿದ್ದು ಖಾಯಂ ಉದ್ಯೋಗವನ್ನೇ ಕೊಡಿ ಎಂದು ಒತ್ತಾಯಿಸಿದರು.ಹಿಂದಿನ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ದುರಂತ ನಡೆದು ಆ ಸರ್ಕಾರ ನಮ್ಮ ಗಂಡನ ಸಾವಿಗೆ ಕಾರಣವಾಯಿತು. ಈ ಸರ್ಕಾರ ನಮ್ಮ ಸಾವಿಗೆ ಕಾರಣವಾಗುವುದು ಬೇಡ. ನುಡಿದಂತೆ ನಡೆದುಕೊಂಡು ನಮಗೆ ಸರ್ಕಾರಿ ನೌಕರಿ ಕೊಡಲಿ ಎಂದು ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಸಂತ್ರಸ್ತೆ ನಾಗರತ್ನ ಎಂಬವರನ್ನು ಸರ್ಕಾರವನ್ನು ಆಗ್ರಹಿಸಿದರು.ನನ್ನ ಪತಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ನನಗೂ ಸೇರಿದಂತೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಯಾವ ಕುಟುಂಬದವರಿಗೂ ಯಾವುದೇ ಪರಿಹಾರ ದೊರೆತಿಲ್ಲ. ಸಿಎಂ ಅವರಿಗೂ ಮನವಿ ಮಾಡಿದ್ದೇವೆ. ರಾಹುಲ್ ಗಾಂಧಿ ಅವರನ್ನು ಬೇಟಿ ಮಾಡಿದ್ದೇವೆ. ಇಂದು ಜನತಾ ದರ್ಶನದಲ್ಲಿ ಸಚಿವ ವೆಂಕಟೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ಕಣ್ಣೀರಿಟ್ಟರು.ಎಲ್ಲೇ ಜನತಾ ದರ್ಶನ ನಡೆದ್ರು ಅಲ್ಲಿಗೆ ಹೋಗಿ ಮನವಿ ಮಾಡುತ್ತಿದ್ದೇವೆ, ಕಾಂಗ್ರೆಸ್ ಕೊಟ್ಟಿದ್ದ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿದೆ, ಆದರೆ ನಮಗೆ ಕೊಟ್ಟಿದ್ದ ಗ್ಯಾರಂಟಿಯನ್ನು ಈಡೇರಿಸಿಲ್ಲ, ತಂದೆ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ ಊಟ ಬಟ್ಟೆಗೂ ಭಾರಿ ಸಮಸ್ಯೆಯಾಗಿದ್ದು ಆದಷ್ಟು ಬೇಗ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ.