-ಶಿಕ್ಷಣತಜ್ಞನ ಊರಿನ ಕಥೆ?
-ಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಳಪೆ ಕಾಮಗಾರಿ । ಸಾರ್ವಜನಿಕರ ತೀವ್ರ ಆಕ್ರೋಶಕನ್ನಡಪ್ರಭ ವಾರ್ತೆ ಗೌರಿಬಿದನೂರುತಾಲೂಕಿನ ಹೊಸೂರು ಹೋಬಳಿ ಕೇಂದ್ರವಾಗಿದ್ದು, ಇಡೀ ದೇಶವೇ ತಿರುಗಿ ನೋಡಿದ ಗ್ರಾಮ ಕಾರಣ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದ ಶಿಕ್ಷಣ ತಜ್ಞ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಹುಟ್ಟೂರು. ಪ್ರಶ್ನಿಸುವುದನ್ನು ಕಲಿಯಿರಿ ಪ್ರಶ್ನಿಸದೆ ಒಪ್ಪಬೇಡಿ ಎನ್ನುವ ಮಾತನ್ನು ಸಾರ್ವಜನಿಕರಿಗೆ ಹೇಳಿಕೊಟ್ಟ ಪುಣ್ಯಾತ್ಮ. ಆದರೆ ಪ್ರಸ್ತುತ ಪ್ರಶ್ನೆ ಮಾಡುವವರು ಇಲ್ಲದಂತಾಗಿದೆ.
ಡಾ.ಎಚ್.ನರಸಿಂಹಯ್ಯನವರ ಹೆಸರನ್ನು ಶಾಶ್ವತವಾಗಿ ಉಳಿಸುವ ಸಲುವಾಗಿ.ಡಾ.ಎಚ್. ನರಸಿಂಹಯ್ಯನವರ ಹೆಸರಿನಲ್ಲಿ ಪ್ರಾಧಿಕಾರವನ್ನು ಕೂಡ ರಚನೆ ಮಾಡಿದರು. ಆದರೆ ಹೋಬಳಿ ಕೇಂದ್ರವಾದರೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇತ್ತು ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಬಡ ಜನರ ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರ ಎಂದು ಘೋಷಣೆ ಮಾಡಿತು.ಈ ರೀತಿಯ ಐತಿಹಾಸಿಕ ಹಿನ್ನೆಲೆ ಇರುವ ಹೋಬಳಿ ಕೇಂದ್ರವಾದರೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇತ್ತು. ಅಂದಿನ ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಬಡ ಜನರ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆಯನ್ನು 2017ರ ಸಾಲಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಎಂದು ಘೋಷಣೆ ಮಾಡಿ ಹಳೆಯ ಕಟ್ಟಡದ ಜೊತೆಯಲ್ಲಿ ಸುಮಾರು 30 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡವನ್ನು 2019ರ ಸಾಲಿನಲ್ಲಿ ನಿರ್ಮಿಸಲಾಯಿತು.
ಈ ಆಸ್ಪತ್ರೆಗೆ ಉದ್ಘಾಟನಾ ಭಾಗ್ಯ ದೊರಕಲಿಲ್ಲ. ಕಾರಣ ಕೊರೋನಾ ಕೋವಿಡ್‌ನಂತಹ ಮಾರಕ ಸೋಂಕಿನ ಪರಿಣಾಮ ಉದ್ಘಾಟನೆಗೊಳ್ಳಲಿಲ್ಲ. ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ ನಿರ್ಮಾಣವಾದ ಕಟ್ಟಡ ಉಪಯೋಗಿಸದಿದ್ದರೆ ಶಿಥಿಲಗೊಳ್ಳುತ್ತದೆ ಎಂದು ಅಂದಿನ ಟಿ.ಎಚ್.ಒ.ರತ್ನಮ್ಮರವರು 2022ರಲ್ಲಿ ಕಟ್ಟಡವನ್ನು ಉಪಯೋಗಿಸಲು ಹೇಳುತ್ತಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರ ನಡೆಯುತ್ತಿದ್ದ ಹಳೇ ಕಟ್ಟಡವನ್ನು ಉನ್ನತೀಕರಿಸುವ ಸಲುವಾಗಿ ರಾಜ್ಯ ಸರ್ಕಾರದಿಂದ ಅನುದಾನವನ್ನು ಒದಗಿಸಲಾಗಿತ್ತು.
ಆಸ್ಪತ್ರೆಯ ಮೇಲ್ಛಾವಣಿ ಬಿರುಕು ಬಿಟ್ಟು ಮಳೆ ಬಿದ್ದ ತಕ್ಷಣ ಮಳೆ ನೀರು ಸೋರುತ್ತಿದ್ದ ಕಾರಣ ಕೇವಲ ಒಂದು ವರ್ಷದ ಹಿಂದೆ ಅಷ್ಟೇ ಮೇಲ್ಛಾವಣಿ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿಗೆ ಸುಮಾರು ₹3 ಲಕ್ಷವರೆಗೆ ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ.ಆದರೆ ಕಾಮಗಾರಿ ಎಷ್ಟರ ಮಟ್ಟಿಗೆ ಅವೈಜ್ಞಾನಿಕವಾಗಿ ಮತ್ತು ಕಳಪೆಯಾಗಿ ನಡೆದಿದೆಯೆಂದರೆ, ಮೊದಲು ಮಳೆಯ ಸಂದರ್ಭದಲ್ಲಿ ಕೆಲವೇ ಹನಿಗಳಷ್ಟು ನೀರು ಸೋರಿಕೆಯಾಗುತ್ತಿತ್ತು. ಇದೀಗ ಆಸ್ಪತ್ರೆಯ ಒಳಭಾಗದಲ್ಲೇ ಹಲವೆಡೆ ನೀರು ಧಾರಾಕಾರವಾಗಿ ಸೋರಿಕೆಯಾಗುತ್ತಿದ್ದು, ಕೆಲವು ಕಡೆ ನೀರು ನಿಂತು ರೋಗಿಗಳು ಹಾಗೂ ಸಿಬ್ಬಂದಿಗೆ ತೊಂದರೆ ಉಂಟಾಗುತ್ತಿದೆ ಎನ್ನುತ್ತಾರೆ ರೋಗಿಗಳು.
ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ,ಆರೋಗ್ಯ ಇಲಾಖೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹ.ಕೋಟ್..
ಸದ್ಯದ ಈಗಿನ ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಸಚಿವ ಸಂಪುಟದಲ್ಲಿ ಅಧಿಕಾರ ಈ ರೀತಿಯ ಐತಿಹಾಸಿಕ ಹಿನ್ನೆಲೆ ಇರುವ ಹೋಬಳಿ ಕೇಂದ್ರವಾದರೂ ಸಹ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇತ್ತು. ಅಂದಿನ ರಾಜ್ಯ ಸರ್ಕಾರವು ಗ್ರಾಮೀಣಬಾಗದ ಬಡ ಜನರ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆಯನ್ನು 2017ರ ಸಾಲಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಎಂದು ಘೋಷಣೆ ಮಾಡಿ ಹಳೆಯ ಕಟ್ಟಡದ ಜೊತೆಯಲ್ಲಿ ಸುಮಾರು 30 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡವನ್ನು 2019ರ ಸಾಲಿನಲ್ಲಿ ನಿರ್ಮಾಣ ಮಾಡಲಾಯಿತು. ಇದರ ಹಿಂದೆ ಜನಪ್ರತಿನಿಧಿಗಳು, ವರ್ಗಾವಣೆಯ ಹಿಂದೆ ಅಧಿಕಾರಿಗಳ ಪಯಣ ಈ ರೀತಿಯ ಅವ್ಯವಸ್ಥೆ ಸರಿಪಡಿಸುವರು ಯಾರು ಎಂಬುದು ತಿಳಿಯದಾಗಿದೆ.ನರಸಿಂಹಗೌಡ, ಸಾಮಾಜಿಕ ಹೋರಾಟಗಾರ.
-ಫೋಟೋ..1 ಆಸ್ಪತ್ರೆ ಕಟ್ಟಡ.2 ಕಟ್ಟಡದ ಮೇಲ್ಚಾವಣಿಯಲ್ಲಿ ನಿಂತಿರುವ ಮಳೆ ನೀರು