ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಪ್ರಾದೇಶಿಕ ಕಚೇರಿಯ ನವೀಕರಿಸಿದ ಕಚೇರಿಯನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆಶೀಶ್ ಪಾಂಡೆ ಉದ್ಘಾಟಿಸಿದರು.
ಈ ಕಚೇರಿಯು ಪಾಂಡೇಶ್ವರದ ಮಂಗಳಾದೇವಿ ದೇವಾಲಯ ರಸ್ತೆಯಲ್ಲಿರುವ ಫೋರಂ ಫಿಝಾ ಮಾಲ್ ಎದುರಿನ ಸಿಒ ಅನೆಕ್ಸ್ ಕಟ್ಟಡದ 2ನೇ ಮಹಡಿಯಲ್ಲಿದೆ. ಈ ಸಂದರ್ಭ ಮಾತನಾಡಿದ ಆಶೀಶ್ ಪಾಂಡೆ, ಮಂಗಳೂರಿನಲ್ಲಿ ನವೀಕರಿಸಿದ ಪ್ರಾದೇಶಿಕ ಕಚೇರಿಯ ಉದ್ಘಾಟನೆಯು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಕಾರ್ಯಾಚರಣೆಗಳನ್ನು ಬಲಪಡಿಸುವ ಮತ್ತು ನಮ್ಮ ಗ್ರಾಹಕರಿಗೆ ಭವಿಷ್ಯ- ಸಿದ್ಧ ಬ್ಯಾಂಕಿಂಗ್ ಅನುಭವವನ್ನು ನೀಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.ವ್ಯಾಪಾರ ಕಾರ್ಯಕ್ಷಮತೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು, ಗ್ರಾಹಕರ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬ್ಯಾಂಕಿನ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಲು ಅವರು ಸಿಬ್ಬಂದಿಗೆ ಸಲಹೆ ನೀಡಿದರು.
ಮಂಗಳೂರು ಪ್ರಾದೇಶಿಕ ಕಚೇರಿಯ ಅಡಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 1 ಕರೆನ್ಸಿ ಚೆಸ್ಟ್, 1 ಎಂಎಸ್‌ಎಂಇ ಲೋನ್ ಪಾಯಿಂಟ್ ಮತ್ತು 1 ರಿಟೇಲ್ ಲೋನ್ ಪಾಯಿಂಟ್ ಜತೆಗೆ 60 ಶಾಖೆಗಳ ಬಲವಾದ ನೆಟ್‌ವರ್ಕ್ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.ಈ ಸಂದರ್ಭ ಮಂಗಳೂರು ಕ್ಷೇತ್ರ ಮಹಾ ಪ್ರಬಂಧಕ ರಾಜೇಂದ್ರ ಕುಮಾರ್, ಪ್ರಾದೇಶಿಕ ಮುಖ್ಯಸ್ಥೆ ತೇಜಶ್ವಿನಿ ವಿ.ಸಿ. ಹಾಗೂ ಹಿರಿಯ ಕಾರ್ಯ ನಿರ್ವಾಹಕರು ಇದ್ದರು.