ಸಾರಾಂಶ
ಶ್ರೀ ನಿರ್ಮಲಂದನಾಥ ಸ್ವಾಮೀಜಿಯವರ ಆಸೆಯಂತೆ, ಕರ್ನಾಟಕ ಸಂಘದ ಜಯಪ್ರಕಾಶ್ ಗೌಡರ ಅಭಿಲಾಷೆಯಂತೆ, ಆಡಳಿತ ಮಂಡಳಿಯ ನಿರೀಕ್ಷೆಯಂತೆ ಅತ್ಯಾಧುನಿಕವಾಗಿ ನವೀಕರಿಸುವ ಸಲುವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರು, ಮಾಜಿ ಸಚಿವ ಪುಟ್ಟರಾಜು ಜೊತೆ ಸೇರಿ ಪರಿಶೀಲನೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪ್ರತಿಷ್ಠಿತ ಆರ್‌ಎಪಿಸಿಎಂಎಸ್ ನ ರೈತ ಸಭಾಂಗಣ ನವೀಕರಿಸುವ ಸಂಬಂಧ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ರಾತ್ರಿ ಭೇಟಿ ನೀಡಿ ಸಭಾಂಗಣ ಪರಿಶೀಲನೆ ನಡೆಸಿದರು.ನಿತ್ಯ ಸಚಿವ ಕೆ.ವಿ.ಶಂಕರಗೌಡರವರು ಸ್ಥಾಪಿಸಿರುವ ಆರ್‌ಎಪಿಸಿಎಂಎಸ್ ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಜೊತೆ ಆಗಮಿಸಿ ನಿರ್ಮಿತಿ ಕೇಂದ್ರ ಸಿದ್ಧಪಡಿಸಿರುವ ಯೋಜನಾ ವರದಿಯನ್ನು ಪರಿಶೀಲಿಸಿ ಸ್ಥಳದಲ್ಲೇ ಬೇಕಾದ ಅಗತ್ಯ ಹಣಕಾಸು ನೆರವನ್ನು ನೀಡುವುದಾಗಿ ಪ್ರಕಟಿಸಿದರು.
ಸಂಘದ ಅಧ್ಯಕ್ಷ ಯು.ಸಿ.ಶೇಖರ್ ಮಾತನಾಡಿ, ಶ್ರೀ ನಿರ್ಮಲಂದನಾಥ ಸ್ವಾಮೀಜಿಯವರ ಆಸೆಯಂತೆ, ಕರ್ನಾಟಕ ಸಂಘದ ಜಯಪ್ರಕಾಶ್ ಗೌಡರ ಅಭಿಲಾಷೆಯಂತೆ, ಆಡಳಿತ ಮಂಡಳಿಯ ನಿರೀಕ್ಷೆಯಂತೆ ಅತ್ಯಾಧುನಿಕವಾಗಿ ನವೀಕರಿಸುವ ಸಲುವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರು, ಮಾಜಿ ಸಚಿವ ಪುಟ್ಟರಾಜು ಜೊತೆ ಸೇರಿ ಪರಿಶೀಲನೆ ನಡೆಸಿದ್ದಾರೆ ಎಂದರು.ಮಾಜಿ ಸಚಿವ ಪುಟ್ಟರಾಜುರವರು ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಯೋಜನೆಗೆ ಹಣಕಾಸಿನ ನೆರವು ಕೋರಿದ್ದರು. ಅದರಂತೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬಂದು ಸ್ಥಳ ಪರಿಶೀಲಿಸಿ ಯೋಜನೆಗೆ ಹಸಿರು ನಿಶಾನೆ ತೋರಿಸುವುದರಲ್ಲಿ ಯಶಸ್ವಿಯಾದರು ಎಂದು ನುಡಿದರು.
ಇದೇ ವೇಳೆ ಆಡಳಿತ ಮಂಡಳಿಯ ವತಿಯಿಂದ ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು. ಉಪಾಧ್ಯಕ್ಷ ಮಹೇಶ್, ಬೇಲೂರು ಸೋಮಶೇಖರ್, ಕೆ.ಸಿ.ರವೀಂದ್ರ, ಪುನೀತ್, ಯೋಗೇಶ್‌ಕುಮಾರ್, ಉದಯ್ ಕುಮಾರ್, ಪಾಪಯ್ಯ, ಶ್ರೀಧರ್, ಸ್ಥಳೀಯ ಮಾಜಿ ಶಾಸಕ ಡಾ.ಅನ್ನದಾನಿ, ಮುಖಂಡ ಅಮರಾವತಿ ಚಂದ್ರಶೇಖರ್, ಆರ್ ಎಪಿಸಿಎಂಎಸ್ ವ್ಯವಸ್ಥಾಪಕ ನಿರ್ದೇಶಕ ನಾಗಭೂಷಣ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್ ಮೊದಲಾದವರು ಇದ್ದರು.