ಸಾರಾಂಶ
ಕಳೆದ 20 ವರ್ಷಗಳ ಹಿಂದೆ ಈ ದೇವಾಲಯಕ್ಕೆ ಕುಟುಂಬಸ್ಥರೊಂದಿಗೆ ಬಂದು ದೇವರ ದರ್ಶನ ಪಡೆದಿದ್ದೆವು. ಮತ್ತೆ ಬಂದು ದೇವರ ದರ್ಶನ ಪಡೆಯಬೇಕೆಂಬ ಆಸೆಯಿಂದ ಇಂದು ಭೇಟಿ ನೀಡಿ, ದೇವರ ದರ್ಶನ ಪಡೆದು ಕೃಪಾರ್ಥರಾಗಿದ್ದೇವೆ. ಶಿವಗಂಗೆ ಕ್ಷೇತ್ರಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ.
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಕಡೆ ಶ್ರಾವಣ ಶನಿವಾರ ಪ್ರಯುಕ್ತ ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆ ಬೆಟ್ಟಕ್ಕೆ ಕೇಂದ್ರ ಹಣಕಾಸು ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ತಂದೆ ನಾರಾಯಣನ್ ಸೀತಾರಾಮನ್, ತಾಯಿ ಸಾವಿತ್ರಿ ಅವರು ಭೇಟಿ ನೀಡಿ, ಕ್ಷೇತ್ರದ ಅಧಿದೇವರು ಹೊನ್ನಾದೇವಿ, ಗಂಗಾಧರೇಶ್ವರ ಸ್ವಾಮಿಯ ದರ್ಶನ ಪಡೆದರು.ದರ್ಶನ ಪಡೆದು ಮಾತನಾಡಿದ ಸಚಿವೆ ನಿರ್ಮಲ ಸೀತಾರಾಮನ್ ತಂದೆ ನಾರಾಯಣನ್ ಸೀತಾರಾಮನ್, ಕಳೆದ 20 ವರ್ಷಗಳ ಹಿಂದೆ ಈ ದೇವಾಲಯಕ್ಕೆ ಕುಟುಂಬಸ್ಥರೊಂದಿಗೆ ಬಂದು ದೇವರ ದರ್ಶನ ಪಡೆದಿದ್ದೆವು. ಮತ್ತೆ ಬಂದು ದೇವರ ದರ್ಶನ ಪಡೆಯಬೇಕೆಂಬ ಆಸೆಯಿಂದ ಇಂದು ಭೇಟಿ ನೀಡಿ, ದೇವರ ದರ್ಶನ ಪಡೆದು ಕೃಪಾರ್ಥರಾಗಿದ್ದೇವೆ. ಶಿವಗಂಗೆ ಕ್ಷೇತ್ರಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ ಎಂದರು.
ತಾಯಿ ಸಾವಿತ್ರಿ ಮಾತನಾಡಿ, ಕ್ಷೇತ್ರದಲ್ಲಿರುವ ಶ್ರೀ ಗಂಗಾಧರೇಶ್ವರ ಸ್ವಾಮಿಯ ಲಿಂಗದ ಮೇಲೆ ತುಪ್ಪವನ್ನು ಸವರಿದರೆ ತುಪ್ಪ ಬೆಣ್ಣೆಯಾಗಿ ಪರಿವರ್ತನೆಯಾಗುವ ವಿಸ್ಮಯ ಇಂದಿಗೂ ವಿಜ್ಞಾನಕ್ಕೆ ಸವಾಲಾಗಿದ್ದು, ಬಹುಶಃ ಈ ದೇವಾಲಯಲ್ಲಿ ಮಾತ್ರ ಈ ಪವಾಡ ಕಾಣಬಹುದಾಗಿದೆ ಎಂದರು.ಸಹಕಾರ ಭಾರತೀಯ ಅಸ್ಸಾಂ ರಾಜ್ಯದ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್
ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ:ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ ಎಂ.ಡಿ ಆಗಿ ಕಾರ್ಯನಿರ್ವಹಿಸಿದ್ದನ್ನು ನೆನಪಿಸಿಕೊಂಡ ನಾರಾಯಣನ್ ಸೀತಾರಾಮನ್, ಬೆಟ್ಟದ ಸಮೀಪವೇ ಇದ್ದ ಕೆನರಾ ಬ್ಯಾಂಕ್ ಗೆ ಭೇಟಿ ನೀಡಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮೀಣ ಪ್ರದೇಶದ ಜನತೆಗೆ ಸಮಸ್ಯೆಯಾಗದಂತೆ ಸ್ಪಂದಿಸಲು ತಿಳಿಸಿದರು. ಪಾರುಪತ್ತೇದಾರ್ ಸುಮಾ, ಸ್ಥಳೀಯರಾದ ಉಮೇಶ್, ಪ್ರದೀಪ್, ರುದ್ರೇಶ್ ಮತ್ತಿತರಿದ್ದರು.