ದೇಶದ ಭವಿಷ್ಯದ ಯೋಜನೆಗಳು ಮತ್ತು ಅಭಿವೃದ್ಧಿಗೆ ನೈಜ ಅಂಕಿ-ಅಂಶ ನೀಡುವ ಜನಗಣತಿ ದಿಕ್ಸೂಚಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡ:

ಏ. 1ರಿಂದ 15ರ ವರೆಗೆ ಸ್ವಯಂ ಜನಗಣತಿ ಆರಂಭವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದ್ದರು, ಟ್ಯಾಬ್‌ ಮೂಲಕ ತಮ್ಮ ಕುಟುಂಬದ ಸ್ವಯಂ ಜನಗಣತಿಯನ್ನು ಶುಕ್ರವಾರ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಅವರು, ದೇಶದ ಭವಿಷ್ಯದ ಯೋಜನೆಗಳು ಮತ್ತು ಅಭಿವೃದ್ಧಿಗೆ ನೈಜ ಅಂಕಿ-ಅಂಶ ನೀಡುವ ಜನಗಣತಿ ದಿಕ್ಸೂಚಿಯಾಗಿದೆ. ಈ ಹಿನ್ನೆಲೆಯಲ್ಲಿ 2027ರ ಜನಗಣತಿ ಪ್ರಕ್ರಿಯೆ ಈಗ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ''''''''ಡಿಜಿಟಲ್ ಇಂಡಿಯಾ'''''''' ಕನಸಿನಂತೆ, ಈ ಬಾರಿ ನಮಗೆ ''''''''ಸ್ವಯಂ-ಗಣತಿ'''''''' ಮಾಡುವ ಅದ್ಭುತ ಅವಕಾಶ ಸಿಕ್ಕಿದೆ. ಎಲ್ಲ ನಾಗರಿಕರು ಸ್ವಯಂ ಗಣತಿಯಲ್ಕಿ ಸಕ್ರಿಯವಾಗಿ ಭಾಗವಹಿಸಲು ಜೋಶಿ ತಿಳಿಸಿದರು.

ನಾನು ಈಗಾಗಲೇ ಆನ್‌ಲೈನ್ ಮೂಲಕ ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ನನ್ನ ಮತ್ತು ಕುಟುಂಬದ ವಿವರ ದಾಖಲಿಸಿದ್ದೇನೆ. ಇದು ಕೇವಲ ಅಂಕಿ-ಅಂಶಗಳಲ್ಲ, ದೇಶದ ಪ್ರಗತಿಯಲ್ಲಿ ನಾವು ನೀಡುವ ಅಳಿಲು ಸೇವೆ. ನಾಗರಿಕರು se.census.gov.in ಪೋರ್ಟಲ್‌ಗೆ ಭೇಟಿ ನೀಡಿ, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ಲಾಗಿನ್ ಆಗಿ ಜನಗಣತಿಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.