ಜಿಲ್ಲೆಯ ಆರು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

| Published : Oct 31 2025, 01:15 AM IST

ಜಿಲ್ಲೆಯ ಆರು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಸಂದರ್ಭದಲ್ಲಿ ಹಲವು ವರ್ಷಗಳಿಂದ ನಂದಿಧ್ವಜ ಪೂಜೆ ನಡೆಸಿಕೊಂಡು ಬಂದಿರುವ ಉಡಿಗಾಲದ ಎಲ್‌. ಮಹದೇವಪ್ಪ

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಕನ್ನಡಪ್ರಭದ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್‌ಸೇರಿದಂತೆ ಜಿಲ್ಲೆಯ ಆರು ಮಂದಿಗೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಮಾಧ್ಯಮದ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗಾಗಿ ಅಂಶಿ ಪ್ರಸನ್ನಕುಮಾರ್‌ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.ದಸರಾ ಸಂದರ್ಭದಲ್ಲಿ ಹಲವು ವರ್ಷಗಳಿಂದ ನಂದಿಧ್ವಜ ಪೂಜೆ ನಡೆಸಿಕೊಂಡು ಬಂದಿರುವ ಉಡಿಗಾಲದ ಎಲ್‌. ಮಹದೇವಪ್ಪ ಅವರಿಗೆ ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಜನಿಸಿದ ಇವರು 80ರ ಇಳಿ ವಯಸ್ಸಿನಲ್ಲಿಯೂ ಕೂಡ ನಂದಿಧ್ವಜ ಜಾನಪದ ಕಲೆಯಲ್ಲಿ ಪರಿಣಿತರು. ಶಿವಭಕ್ತರಲ್ಲಿ ನಂದಿ ಧ್ವಜಕ್ಕೆ ಮಹತ್ವದ ನಂಬಿಕೆಯಿದ್ದು, ಸದರಿ ಕಲೆಯನ್ನು ಧಾರ್ಮಿಕವಾಗಿಯೂ ಕೂಡ ಉಪಯೋಗಿಸಿಕೊಂಡು ಬಂದಿರುತ್ತಾರೆ. ಅನೇಕ ಕಲಾವಿದರಿಗೆ ಕಲಾ ತರಬೇತಿಯನ್ನು ನೀಡಿದ್ದಾರೆ. ಮೈಸೂರು ದಸರಾ, ರಾಜ್ಯೋತ್ಸವ ಮುಂತಾದ ಅನೇಕ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರತಿಸಿ ಗೌರವಿಸಿವೆ.ಪ್ರೊ.ಕೆ. ರಾಮಮೂರ್ತಿ ರಾವ್‌ಅವರಿಗೆ ನೃತ್ಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಮೈಸೂರು ಜಿಲ್ಲೆಯವರಾದ ಇವರು 1955 ರಲ್ಲಿ ಜನಿಸಿದ್ದು, ಇವರಿಗೆ 70 ವರ್ಷ ವಯಸ್ಸು. ಭರತನಾಟ್ಯ ನಟುವಾಂಗ ಕಲಾವಿದರಾದ ಇವರು ಹಲವಾರು ಪ್ರಖ್ಯಾತ ಭರತನಾಟ್ಯ ಕಲಾವಿದರ ನೃತ್ಯಕ್ಕೆ ನಟುವಾಂಗ ಸಹಕಾರ ನೀಡಿದ್ದಾರೆ. 800ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ಬರೆದ ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ ಎಂಬ ಪುಸ್ತಕವನ್ನು ಸಂಗೀತ ನೃತ್ಯ ಅಕಾಡೆಮಿ ಪ್ರಕಟಿಸಿದೆ. ಅಂಕಣ ಬರಹಗಳ ಸಂಗ್ರಹ ʼಕಲಾಚಿಂತನೆʼ 2009ರಲ್ಲಿ ಪ್ರಕಟವಾಗಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿ ಪಡೆದಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯಮುಕ್ತ ವಿವಿ ಕುಲಪತಿ ವಿಶ್ರಾಂತ ಕುಲಪತಿ ಪ್ರೊ.ಎನ್‌.ಎಸ್‌. ರಾಮೇಗೌಡ ಅವರು ನಗುವನಹಳ್ಳಿಯಲ್ಲಿ 1941 ರಲ್ಲಿ ಜನಿಸಿದರು. ಇವರು ಪ್ರಾಥಮಿಕ ಮತ್ತು ಪೌಢಶಾಲೆಯ ವಿದ್ಯಾಭ್ಯಾಸವನ್ನು ಚನ್ನಪಟ್ಟಣದಲ್ಲಿ ಉನ್ನತ ಶಿಕ್ಷಣವನ್ನು ಮೈಸೂರಿನಲ್ಲಿ 1974ರಲ್ಲಿ ಜೋಧಪುರ್‌ವಿಶ್ವವಿದ್ಯಾಲಯ, ರಾಜಸ್ಥಾನದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಉಪನ್ಯಾಸಕರಾಗಿ ಕನಕಪುರದಲ್ಲಿ ಸೇವೆ ಸಲ್ಲಿಸಿ, ಮಂಡ್ಯದ ಭಾರತೀನಗರದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಮುಕ್ತ ವಿವಿಯ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಎಂ. ಯೋಗೇಂದ್ರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, 62 ವರ್ಷದ ಇವರು ಅಥ್ಲೆಟಿಕ್ಸ್‌ವಿಭಾಗದಲ್ಲಿ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ.ಚೀನಾದಲ್ಲಿ 2016 ರಲ್ಲಿ ನಡೆದ ಏಷ್ಯನ್‌ಮಾಸ್ಟರ್ಸ್ ಅಥ್ಲೆಟಿಕ್ಸ್‌ಕ್ರೀಡಾಕೂಟದಲ್ಲಿ ಎರಡು ಕಂಚಿನ ಪದಕ, ಜಪಾನ್‌ದೇಶದಲ್ಲಿ 2014ರಲ್ಲಿ ನಡೆದ 19ನೇ ಏಷ್ಯಾ ಮಾಸ್ಟರ್ಸ್‌ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.ಕರಕುಶಲ ಕ್ಷೇತ್ರದಿಂದ ಎಲ್‌. ಹೇಮಾ ಶೇಖರ್‌ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. 1952ರಲ್ಲಿ ನಂಜನಗೂಡಿನಲ್ಲಿ ಜನಿಸಿದ ಇವರಿಗೆ 73 ವರ್ಷ ವಯಸ್ಸು. ಸೂಫಿ ಮತ್ತು ಮೈಸೂರು ವರ್ಣ ಕಲೆಯನ್ನು ಮೈಸೂರು ಅರಮನೆ ಕಲಾವಿದರಾದ ರಾಮನರಸಯ್ಯನವರಿಂದ ಅಭ್ಯಾಸ ಮಾಡಿದ್ದಾರೆ. ಅಲ್ಲದೆ ಡ್ರಾಯಿಂಗ್‌ಮತ್ತು ವರ್ಣ ಕಲೆಗಳನ್ನು ಇತರ ನುರಿತ ಕಲಾವಿದರು, ಶ್ರಮಿಕ ವಿದ್ಯಾಪೀಠ ಮತ್ತು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಇವರುಗಳಿಂದ ತರಬೇತಿ ಪಡೆದಿದ್ದಾರೆ.ಇವರು ʼಬಾಟಿಕ್‌ಮತ್ತು ಟೈ ಅಂಡ್‌ಡೈʼ ಕಲೆಯನ್ನು ವೃತ್ತಿಯಾಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದಿಂದ 2014ನೇ ಸಾಲಿನ ಶಿಲ್ಪಗುರು ರಾಷ್ಟ್ರ ಪ್ರಶಸ್ತಿ, 2003ರಲ್ಲಿ ರಾಜ್ಯ ಸರ್ಕಾರದಿಂದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಲಭಿಸಿದೆ.ಇವರಲ್ಲದೆ ಮೈಸೂರಿನಲ್ಲಿಯೇ ನೆಲೆಸಿರುವ ರಂಗಾಯಣದ ನಿವೃತ್ತ ಕಲಾವಿದ ಮತ್ತು ಹಿರಿಯ ರಂಗಕರ್ಮಿ ಮೈಮ್‌ ರಮೇಶ್‌ ಅವರಿಗೂ ಪ್ರಶಸ್ತಿ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ನಟ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.