ತ್ರಿಖಂಡ ಭಾರತ ಅಖಂಡವಾಗಲು ಹಿಂದುಗಳ ಒಗ್ಗಟ್ಟು ಅನಿವಾರ್ಯ: ದಿನೇಶ್ ಮೆಂಡನ್

| Published : Aug 13 2024, 12:52 AM IST

ತ್ರಿಖಂಡ ಭಾರತ ಅಖಂಡವಾಗಲು ಹಿಂದುಗಳ ಒಗ್ಗಟ್ಟು ಅನಿವಾರ್ಯ: ದಿನೇಶ್ ಮೆಂಡನ್
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಹಿಂದೂ ಪರಿಷದ್ ಭಜರಂಗದಳ, ಕಾಪು ಪ್ರಖಂಡ, ಪಡುಬಿದ್ರಿ ವಲಯ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಕಾಪು

ರಾಜಕೀಯ ಓಲೈಕೆಗಾಗಿ ನಮ್ಮ ರಾಷ್ಟ್ರವನ್ನು ತ್ರಿಖಂಡ ಮಾಡಲಾಗಿದ್ದು, ಅದನ್ನು ಮತ್ತೇ ಅಖಂಡ ಮಾಡಲು ನಮ್ಮ ಹಿಂದೂ ಸಮಾಜ ಒಂದಾಗುವ ಅನಿವಾರ್ಯತೆ ಇದೆ ಎಂದು ಹಿಂದೂ ಸಂಘಟನಾ ಮುಖಂಡ ದಿನೇಶ್ ಮೆಂಡನ್ ಹೇಳಿದ್ದಾರೆ.ಅವರು ವಿಶ್ವಹಿಂದೂ ಪರಿಷದ್ ಭಜರಂಗದಳ, ಕಾಪು ಪ್ರಖಂಡ, ಪಡುಬಿದ್ರಿ ವಲಯ ಆಯೋಜಿಸಿದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಪಂಜಿನ ಮೆರವಣಿಗೆ ಬಳಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಕನ್ನಾಂಗಾರು ಬ್ರಹ್ಮ ಬೈದರ್ಕಳ ಗರೋಡಿಯಿಂದ ಆರಂಭಗೊಂಡ ಪಂಜಿನ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಅದರಲ್ಲೂ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಯುವತಿಯರು ಭಾಗವಹಿಸಿದ್ದರು.ವಿವಿಧ ರೀತಿಯ ಹಿಂದೂಪರ ಘೋಷಣೆಯನ್ನು ಕೂಗುತ್ತಾ ಮೈಲುದ್ದ ಸಾಲಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಬಂದಿದ್ದು, ಈ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಡುಬಿದ್ರಿ ಎಸ್ಸೈ ಎಂ.ಎಸ್. ಪ್ರಸನ್ನ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಹಿಂದೂ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಸುಜೀತ್ ಶೆಟ್ಟಿ, ಗಣೇಶ್ ಗುಜರನ್, ಆನಂದ್, ಮಾಜಿ ಪಂ. ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ರೇಷ್ಮಾ ಉದಯ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಿಥುನ್ ಆರ್ ಹೆಗ್ಡೆ, ಉದಯ ಶೆಟ್ಟಿ ಇನ್ನಾ, ಮೋಹನ್ ದಾಸ್ ಫಣಿಯೂರು, ಸಂದೇಶ್ ಶೆಟ್ಟಿ, ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.