ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಬಹುತೇಕ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಕೆಲವು ಕ್ಷೇತ್ರಗಳಿಗೆ ಮಾತ್ರ ಮತದಾನ ನಡೆಯಬೇಕಿದೆ.ಕೃಷಿ ಇಲಾಖೆ ಮತಕ್ಷೇತ್ರದಿಂದ ದೇವೇಂದ್ರಪ್ಪ ಕಡ್ಲೇರ, ಪಶುಪಾಲನಾ ಮತ್ತು ವೈದ್ಯ ಸೇವಾ ಇಲಾಖೆ ಮತಕ್ಷೇತ್ರದಿಂದ ಡಾ.ಸಿ.ಬಿ ರಮೇಶ್, ಕಂದಾಯ ಇಲಾಖೆಯಿಂದ ಕೆ.ಆರ್ ಪ್ರಶಾಂತ್ ಮತ್ತು ರವಿಕುಮಾರ್, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಎ. ಲಲಿತಾ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಪಿಎಂಜಿಎಸ್‌ವೈ ಯೋಜನೆ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ಕ್ಷೇತ್ರದಿಂದ ಜಾನ್ ನಿರ್ಮಲ್ ಮತ್ತು ಬಿ.ಎಚ್ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿ ಮತಕ್ಷೇತ್ರದಿಂದ ಸಿ.ಎ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯಿಂದ ಆರ್. ಅಶೋಕ್‌ರಾವ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ಎಚ್.ಎಸ್ ರಾಮಕೃಷ್ಣ, ಖಜಾನೆ ಇಲಾಖೆ ಕ್ಷೇತ್ರದಿಂದ ಎ.ಸಿ. ಮಮತಾ, ನ್ಯಾಯಾಂಗ ಇಲಾಖೆಯಿಂದ ಕೆ. ಮುರಳಿಧರ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಜಿ. ಲಕ್ಷ್ಮೀಕಾಂತ ಮತ್ತು ಸಿ. ವೆಂಕಟೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಡಿ. ನಾಗರತ್ನ, ಮೀನುಗಾರಿಕೆ, ತೂಕ ಮತ್ತು ಅಳತೆ ಇಲಾಖೆ ಹಾಗೂ ಸಾರಿಗೆ ಇಲಾಖೆಯಿಂದ ಬಿ.ಕೆ. ನಾರಾಯಣ ಮೂರ್ತಿ ಆಯ್ಕೆಯಾಗಿದ್ದಾರೆ.ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಮತಕ್ಷೇತ್ರದಿಂದ ಆರ್. ಜನಾರ್ದನ, ಅಬಕಾರಿ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಿಂದ ಸುನಿಲ್ ಕಲ್ಲೂರ, ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಹಾಗೂ ಸಾಂಖ್ಯಿಕ ಇಲಾಖೆಯಿಂದ ಎಂ. ಮಾಲತಿ, ಗ್ರಂಥಾಲಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಕ್ಷೇತ್ರದಿಂದ ರಾಜ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗಳ ಮತಕ್ಷೇತ್ರದ ಒಟ್ಟು 3 ಸ್ಥಾನಗಳಿಗೆ ಜೇನಮ್ಮ, ಎಸ್. ನಾಗರತ್ನಮ್ಮ, ಯು. ಮಹಾದೇವಪ್ಪ, ಮುಕ್ತಿಯಾರ್ ಅಹಮದ್, ಎಸ್.ಕೆ ಮೋಹನ್, ರಮೇಶ್ ನಾಯ್ಕ, ಎ. ರಂಗನಾಥ, ವೈ.ಎನ್ ಶಶಿಧರಗೌಡ ಮತ್ತು ಎಚ್.ಎಸ್ ಸುಮಾ, ಸರ್ಕಾರಿ ಪ್ರೌಢಶಾಲೆ ಮತ ಕ್ಷೇತ್ರದ 1 ಸ್ಥಾನಕ್ಕೆ ವಿ. ಮೋತಿನಾಯ್ಕ, ಜಿ. ಶಿವಾನಾಯ್ಕ ಮತ್ತು ಬಿ. ಸಿದ್ದಬಸಪ್ಪ, ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ಮತಕ್ಷೇತ್ರದ 1 ಸ್ಥಾನಕ್ಕೆ ಬಿ. ಚನ್ನಯ್ಯ, ಎಸ್. ಚಂದ್ರಶೇಖರಪ್ಪ, ಎಂ.ಆರ್ ತಿಪ್ಪೇಸ್ವಾಮಿ ಮತ್ತು ಎಂ. ವೆಂಕಟೇಶ್, ಅರಣ್ಯ ಇಲಾಖೆ ಮತಕ್ಷೇತ್ರದ 1 ಸ್ಥಾನಕ್ಕೆ ಕಾಂತೇಶ್ ನಾಯ್ಕ ಮತ್ತು ಡಿ. ವೆಂಕಟೇಶ್ ಸ್ಪರ್ಧಿಸುತ್ತಿದ್ದಾರೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತಕ್ಷೇತ್ರದ ಒಟ್ಟು 4 ಸ್ಥಾನಗಳಿಗೆ ಉಮೇಶಪ್ಪ, ಡಾ. ಎಚ್.ಎಸ್ ಗಿರೀಶ್, ಎಚ್.ಎಂ ನಾಗರಾಜಪ್ಪ, ಪದ್ಮರಾಜ ಶೆಟ್ಟಿ, ಕೆ. ರಮೇಶ್, ಆರ್. ರೀನಾ ಮತ್ತು ಶ್ರೀನಿವಾಸ್ ಎಚ್. ಬಾಗೋಡಿ, ಎಂ.ಎಚ್ ಹರೀಶ್, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಸಬಲೀಕರಣ ಮತ್ತು ಮುದ್ರಾಂಕಗಳ ಇಲಾಖೆ ಮತಕ್ಷೇತ್ರದ 1 ಸ್ಥಾನಕ್ಕೆ ಸಿ.ಎನ್. ಮಮತಾ, ಎಚ್.ಎಲ್. ಮಂಜಾನಾಯ್ಕ ಮತ್ತು ಎನ್. ವಿನಯ್, ತಾಂತ್ರಿಕ ಶಿಕ್ಷಣ ಇಲಾಖೆ (ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಕಿರಿಯ ತಾಂತ್ರಿಕ ಶಾಲೆ) ಮತಕ್ಷೇತ್ರದ 1 ಸ್ಥಾನಕ್ಕೆ ತಮ್ಮಣ್ಣ, ಟಿ. ತಿಮ್ಮಪ್ಪ ಮತ್ತು ಎಂ.ಎನ್. ಬಸವರಾಜು ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆ ಮತಕ್ಷೇತ್ರದ 1 ಸ್ಥಾನಕ್ಕೆ ಎಸ್.ಎನ್. ಚಂದ್ರಶೇಖರ್ ಮತ್ತು ಎಂ. ಪುಟ್ಟಲಿಂಗಮೂರ್ತಿ ಸ್ಪರ್ಧಿಸಿದ್ದಾರೆ. ಅ.28ರಂದು ಮತದಾನ ನಡೆಯಲಿದ್ದು, ಇದೇ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿಯಾಗಿರುವ ನಿವೃತ್ತ ಉಪತಹಸೀಲ್ದಾರ್ ಎಸ್. ಮೈಲಾರಯ್ಯ ತಿಳಿಸಿದ್ದಾರೆ.