ಸಾರಾಂಶ
ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿ ಎಲ್ಲಾ 11 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿ ಎಲ್ಲಾ 11 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.ಗ್ರಾಹಕರ ಸಹಕಾರ ಸಂಘ ದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕುಲೇಟಿರ ಅರುಣ ಕೆ. ಎಂ , ನಾಯಕಂಡ ಟಿ. ಮುತ್ತಪ್ಪ, ಪಟ್ರಪ೦ಡ ಎ ಮುದ್ದಪ್ಪ, ಬೊಟ್ಟೋಳ೦ಡ ಕೆ. ಕುಟ್ಟಪ್ಪ, ಬೊಟ್ಟೋಳ೦ಡ ಎ . ಪೊನ್ನಯ್ಯ, ಕೊಂಬಂಡ ಕೆ. ಗಣೇಶ್ ಆಯ್ಕೆಯಾಗಿದ್ದಾರೆ .
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಎಚ್.ಎ.ಬೊಳ್ಳು ಆಯ್ಕೆಯಾಗಿದ್ದರೆ ಮಹಿಳಾ ಸದಸ್ಯರ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೇಟೊಳಿರ ಗಣಪತಿ ಮುತ್ತಮ್ಮ, ನಾಟೋಲಂಡ ಕಸ್ತೂರಿ ಉತ್ತಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಪಾಡಿಯಮ್ಮನ ಎ.ಮಹೇಶ್ ಹಾಗೂ ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಕೆಲೇಟಿರ ಟಿ. ಗಣಪತಿ ಆಯ್ಕೆ ಆಗಿದ್ದಾರೆ.
ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಮಾಚೇಟ್ಟಿರ ಕುಸು ಕುಶಾಲಪ್ಪ. ಚೋಕಿರ ಪೂವಪ್ಪ , ಮಹಮ್ಮದ್ ಆಲಿ, ಕೊಂಬಂಡ ಸೀತಾರಾಮ ನಾಮಪತ್ರ ಹಿ೦ಪಡೆದುಕೊಂಡ ಕಾರಣ 11 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.ಪರಿಶಿಷ್ಟ ಪಂಗಡ ಮೀಸಲು ಈ ಸ್ಥಾನಕ್ಕೆ ಸಂಘದಲ್ಲಿ ಸದಸ್ಯರೇ ಇಲ್ಲದ ಕಾರಣ 12 ಸದಸ್ಯರಲ್ಲಿ 11 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಂಘದ ರಿಟರ್ನಿಂಗ್ ಆಫೀಸರ್ ಪ್ರದೀಪ್ ಕುಮಾರ್ ಪಿ.ಎಸ್. ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದ್ದು ಜೊತೆಗೆ ಸಂಘದ ಕಾರ್ಯನಿರ್ವಹಣಾಧಿಕಾರಿ ಕೆ ಎಸ್ ತಿಮ್ಮಯ್ಯ ಇದ್ದರು.