ನೀಡದ ಬೆಳೆ ಪರಿಹಾರ: ಶ್ರೀರಂಗಪಟ್ಟಣ ತಾಲೂಕು ಕಚೇರಿಗೆ ಮುತ್ತಿಗೆ

| Published : May 29 2024, 01:01 AM IST

ನೀಡದ ಬೆಳೆ ಪರಿಹಾರ: ಶ್ರೀರಂಗಪಟ್ಟಣ ತಾಲೂಕು ಕಚೇರಿಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದರೂ ರೈತರ ಬೆಳೆ ನೀರಿಲ್ಲದೆ ಎಲ್ಲಿಯೂ ಬೆಳೆ ಬೆಳೆದಿಲ್ಲ. ಸಮೀಕ್ಷೆಯಲ್ಲಿ ಅನ್ಯಾಯ ಮಾಡಿ ಇತರೆ ರೈತರಿಗೆ ಬೆಳೆ ಪರಿಹಾರ ನೀಡದೆ ಇದೀಗ ಬೆಲೆ ಪರಿಹಾರ ನೀಡುತ್ತಿರುವ ಸರ್ಕಾರ ಯಾವ ಸಾಲಿನದ್ದಾಗಿದೆ ಇದಕ್ಕೆ ಉತ್ತರಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನೀರಿಲ್ಲದೆ ಬೆಳೆ ಒಣಗಿದ ರೈತರಿಗೆ ಬೆಳೆ ಸಮೀಕ್ಷೆ ಮಾಡಿ ಸರ್ಕಾರ ಸಮರ್ಪಕವಾಗಿ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ಸಮಿತಿಯ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ಸದಸ್ಯರು, ಸಮರ್ಪಕವಾಗಿ ರೈತರಿಗೆ ಬೆಳೆ ಪರಿಹಾರ ನೀಡದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಾದ್ಯಂತ 27 ಸಾವಿರ ಮಂದಿ ರೈತರು ಭೂಮಿ ಖಾತೆ ಹೊಂದಿದ್ದರೂ ಕೇವಲ 409 ಮಂದಿ ರೈತರಿಗೆ ಬೆಳೆ ಪರಿಹಾರ ನೀಡಿದೆ. ಸಮರ್ಪಕ ಬೆಳೆ ಸಮೀಕ್ಷೆ ನಡೆಸಲು ಸ್ಥಳೀಯ ಕಂದಾಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ಸರ್ಕಾರ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದರೂ ರೈತರ ಬೆಳೆ ನೀರಿಲ್ಲದೆ ಎಲ್ಲಿಯೂ ಬೆಳೆ ಬೆಳೆದಿಲ್ಲ. ಸಮೀಕ್ಷೆಯಲ್ಲಿ ಅನ್ಯಾಯ ಮಾಡಿ ಇತರೆ ರೈತರಿಗೆ ಬೆಳೆ ಪರಿಹಾರ ನೀಡದೆ ಇದೀಗ ಬೆಲೆ ಪರಿಹಾರ ನೀಡುತ್ತಿರುವ ಸರ್ಕಾರ ಯಾವ ಸಾಲಿನದ್ದಾಗಿದೆ ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಕೇವಲ 409 ಜನರಿಗೆ ಬೆಳೆ ಪರಿಹಾರ ನೀಡಿದ್ದೇವೆ ಎಂದು ಹೇಳುವ ಅಧಿಕಾರಿಗಳು ಬೇರೇ ರೈತರಿಗೆ ಬೆಳೆ ಪರಿಹಾರ ಯಾಕೆ ನೀಡಿಲ್ಲ. ಕೂಡಲೇ ಇದಕ್ಕೆ ಸ್ಪಷ್ಟತೆ ನೀಡಬೇಕು ಎಂದು ಮಾಹಿತಿ ಕುರಿತಾಗಿ ಅರ್ಜಿ ಜೊತೆಗೆ ಸಮರ್ಪಕ ಪರಿಹಾರಕ್ಕಾಗಿ ಬರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ, ಮಹದೇವಪುರ ಕೃಷ್ಣ, ಪಾಲಹಳ್ಳಿ ರಾಮಚಂದ್ರು, ರಾಮಕೃಷ್ಣ ಸೇರಿದಂತೆ ಇತರ ರೈತರು ಸೇರಿ ಉಪ ತಹಶೀಲ್ದಾರ್ ಆದರ್ಶ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.