ಸಾರಾಂಶ
ಪ್ರತಿ ಟನ್ ಕಬ್ಬಿಗೆ ₹3500 ನಿಗದಿ ಪಡಿಸುವಂತೆ ಆಗ್ರಹಿಸಿ ಗುರ್ಲಾಪುರ ಕ್ರಾಸ್‌ದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ದಲಿತ, ಕನ್ನಡ ಪರ ಸಂಘಟನೆ ಮತ್ತು ರೈತರು ಬುಧವಾರ ಕರೆ ನೀಡಿದ್ದ ರಾಯಬಾಗ ಪಟ್ಟಣ ಬಂದ್‌ಗೆ ಪಟ್ಟಣದ ನಾಗರಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಕನ್ನಡಪ್ರಭ ವಾರ್ತೆ ರಾಯಬಾಗ
ಪ್ರತಿ ಟನ್ ಕಬ್ಬಿಗೆ ₹3500 ನಿಗದಿ ಪಡಿಸುವಂತೆ ಆಗ್ರಹಿಸಿ ಗುರ್ಲಾಪುರ ಕ್ರಾಸ್‌ದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ದಲಿತ, ಕನ್ನಡ ಪರ ಸಂಘಟನೆ ಮತ್ತು ರೈತರು ಬುಧವಾರ ಕರೆ ನೀಡಿದ್ದ ರಾಯಬಾಗ ಪಟ್ಟಣ ಬಂದ್‌ಗೆ ಪಟ್ಟಣದ ನಾಗರಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.ಪಟ್ಟಣದ ಅಭಾಜಿ ವೃತ್ತದಲ್ಲಿ (ಝೆಂಡಾ ಕಟ್ಟಿ ಹತ್ತಿರ) ಹೋರಾಟಗಾರರು ಮುಖ್ಯ ರಸ್ತೆ ಬಂದ ಮಾಡಿ ಕಾರ್ಖಾನೆ ಮಾಲೀಕರ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರ ಬೇಡಿಕೆ ಈಡೇರುವವರಿಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.
ಬೆಳಗ್ಗೆಯಿಂದ ಪಟ್ಟಣದ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತ ಬಂದ ಮಾಡಿದ್ದರು. ಹಾಲಿನ ಮಳಿಗೆ ಮತ್ತು ಮೆಡಿಕಲ್ ಹೊರತುಪಡಿಸಿ ಎಲ್ಲ ವ್ಯಾಪಾರ ಮಳಿಗೆಗಳು ಸಂಪೂರ್ಣ ಬಂದ ಮಾಡಲಾಗಿತ್ತು. ಬಂದ ಪರಿಣಾಮ ಸಾರಿಗೆ ಸಂಸ್ಥೆ ಬಸ್‌ಗಳು ಬಸ್ ನಿಲ್ದಾಣದಲ್ಲಿ ನಿಂತಿದ್ದು ಕಂಡು ಬಂದಿತು, ಬಸ್ ಬಂದ ಮಾಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಪರದಾಡುವಂತಾಯಿತು. ಹೋರಾಟಗಾರರಿಗೆ ರಾಯಬಾಗ ಗ್ರಾಮೀಣ ಭಾಗದ ಖೈರಕೊಡಿಯ ರೈತರು ರಸ್ತೆಯಲ್ಲಿ ಅಡುಗೆ ಮಾಡಿ ಊಟ ಬಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆ.ಡಿ.ಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಹಾಗೂ ಯುವ ಧುರೀಣ ಶಿವರಾಜ ಪಾಟೀಲರು ರೈತರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ, ತಾವು ಸದಾ ರೈತರ ಜೊತೆಗೆ ಇರುವುದಾಗಿ ಭರವಸೆ ನೀಡಿದರು.ರೈತರ ಹೋರಾಟಕ್ಕೆ ಪಟ್ಟಣದ ವೈದ್ಯರು, ವಕೀಲರು, ಮಾಜಿ ಸೈನಿಕರು, ಸಾಹಿತಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಅಶೋಕ ಅಂಗಡಿ, ಅನೀಲ ಶೆಟ್ಟಿ, ಪೃಥ್ವಿರಾಜ ಜಾಧವ, ಸದಾಶಿವ ಘೋರ್ಪಡೆ, ಮಹೇಶ ಕರಮಡಿ, ಸದಾನಂದ ಹಳಿಂಗಳಿ, ಬಸವರಾಜ ದೋಣವಾಡೆ, ಹರೀಶ ಕುಲಗುಡೆ, ದಿಲೀಪ ಪಾಯನ್ನವರ, ನಾರಾಯಣ ಮೇತ್ರಿ, ಗಜಾನನ ಮಾಳಿ, ರಮೇಶ ಕುಂಬಾರ, ಸಂಜು ಬಾವಜಿ ಸೇರಿ ಅನೇಕರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))