ಶೃಂಗೇರಿತಾಲೂಕು ಕಚೇರಿ ಸಮೀಪದ ತಡೆಗೋಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕ, ಕಳಪೆ ಯಾಗಿದ್ದರಿಂದ ಒಂದೆರೆಡು ಮಳೆಗೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.
ಪ್ರತಿಭಟನೆ ಭಯದಿಂದ ಎಚ್ಚೆತ್ತಿದ್ದಾರೆ । ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆರೋಪ
ಕನ್ನಡಪ್ರಭ ವಾರ್ತೆ ಶೃಂಗೇರಿತಾಲೂಕು ಕಚೇರಿ ಸಮೀಪದ ತಡೆಗೋಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕ, ಕಳಪೆ ಯಾಗಿದ್ದರಿಂದ ಒಂದೆರೆಡು ಮಳೆಗೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.
ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಅವೈಜ್ಞಾನಿಕವಾಗಿ ತಡೆಗೋಡೆ ಕಟ್ಟಿ ಎಲ್ಲಿಂದಲೋ ಮಣ್ಣು ತಂದು ತುಂಬಿಸಿದ್ದಾರೆ.₹1.86 ಲಕ್ಷ ಮಂಜೂರಾಗಿದೆ. ಬಿರುಕು ಬಿಟ್ಟಿರುವ ತಡೆಗೋಡೆ, ತುಂಬಿರುವ ಮಣ್ಣು ಅಷ್ಟೇ. ಈಗ ಅದು ಕುಸಿಯುತ್ತಿದೆ. ಈಗಾಗಲೇ ಕುಸಿದು ಬೀಳಬೇಕಿತ್ತು.ಅದು ನಿಂತಿದ್ದು ಗುಡ್ಡದ ಕೆಳಗಿರುವ ಜನಗಳ ಪುಣ್ಯ ಎಂದು ಹೇಳಬೇಕು.ಬಿಜೆಪಿಯವರು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದ್ದರಿಂದ ಭಯದಿಂದ ಕೂಡಲೇ ಎಚ್ಚೆತ್ತು ಕೆಲಸ ಮಾಡುತ್ತಿದ್ದಾರೆ. ನನ್ನ ಅವಧಿಯಲ್ಲಿಯೇ ಅಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ಕೆಲವರು ಗಮನಕ್ಕೆ ತಂದಿದ್ದರು. ಆದರೆ ಗುಡ್ಡದ ಕೆಳಭಾಗದಲ್ಲಿ ಮಣ್ಣು ಜರಿಯದಂತೆ ಮಾಡಿ ಬಿಡಲಾಯಿತು. ಈಗ ಮೇಲೆ ಜಾಗ ಮಾಡಿಕೊಡುವ ಉದ್ದೇಶದಿದಲೋ,ಕೆಳಗೆ ಜಾಗ ತೆಗೆಯುವ ಉದ್ದೇಶದಿಂದಲೋ ,ಯಾರದ್ದೋ ತೃಪ್ತಿಗಾಗಿ ಎತ್ತರದ ಅವೈಜ್ಞಾನಿಕ ತಡೆಗೋಡೆ ನಿರ್ಮಿಸಲು ಹೊರಟು ಅಪಾಯ ತಂದೊಡ್ಡಿದ್ದಾರೆ.
ಕೇವಲ ಹಣ ಖರ್ಚು ಮಾಡಿ ರಾಜಕಾರಣ ಮಾಡುವುದು ತಾತ್ಕಲಿಕ. ಜನಬೆಂಬಲ ಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಕಾರ್ಯಕರ್ತರು ಇದನ್ನು ಗಮನಿಸಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನರಲ್ಲಿ ಮನವರಿಕೆ ಮಾಡುವ ಕೆಲಸ ಮಾಡಬೇಕು.ಸ್ಥಳೀಯ ಚುನಾವಣೆಗೆ ತಯಾರಿ ನಡೆಸಬೇಕು ಆ ನಿಟ್ಟಿನಲ್ಲಿ ಪಕ್ಷ ಸಂಘಟಿಸಬೇಕು.ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಮಹತ್ತರವಾಗಿದೆ.ಸುಪ್ರಿಂ ಕೋರ್ಟಿನಲ್ಲಿ 23ಕ್ಕೆ ಪ್ರಕರಣ ವಿಚಾರಣೆಗೆ ಇದೆ. ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ನ್ಯಾಯಾಂಗ, ಸಂವಿಧಾನದ ಮೇಲೆ ನಂಬಿಕೆಯಿದೆ. ಆದರೆ ಅವರು ಮಾತನಾಡುತ್ತಿದ್ದಾರೆ. ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ. ನ್ಯಾಯಾಲಯ ನಿರ್ದರಿಸುತ್ತದೆ.
ಎಸ್ ಐ ಆರ್ ಬಗ್ಗೆ ಕಾಂಗ್ರೆಸ್ ನವರು ಅನಗತ್ಯ ಸುಳ್ಳು ಸೃಷ್ಠಿಸಿ, ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದಾರೆ. ಅಕ್ರಮ ಬಾಂಗ್ಲಾ ದೇಶಿಯರು ಸೇರಿದಂತೆ ಅಕ್ರಮ ವಿದೇಶಿಯರು ದೇಶದಲ್ಲಿ ನುಸುಳಿದ್ದಾರೆ. ಅಂತಹವರು ಸಿಕ್ಕಿಹಾಕಿಕೊಳ್ಳುತ್ತಾರೆ, ಈ ದೇಶದ ನಾಗರಿಕರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಐಸ್ ಐ ಆರ್ ಬಗ್ಗೆ ಪಕ್ಷದ ಕಾರ್ಯಕರ್ತರು ಜನರಲ್ಲಿ ಅರಿವು, ಜಾಗೃತಿ ಮೂಡಿಸಬೇಕಿದೆ. ಕಾರ್ಯಕರ್ತರು ಬೂತ್ ಮಟ್ಚದಿಂದಲೇ ಪಕ್ಷ ಸಂಘಟಿಸಿ ಸ್ಥಳೀಯ ಸಂಸ್ಥೆಗಳಲ್ಲಿ,ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್ ಭಟ್,ಅರುಣ್ ಕುಮಾರ್, ಎಚ್.ಎಸ್. ವೇಣುಗೋಪಾಲ್, ಎಚ್.ಕೆ.ನೂತನ್ ಕುಮಾರ್,ಬಿ.ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
20 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿದರು.