ಸಾರಾಂಶ
ಪ್ರತಿ ಜಾತಿ ಸಮುದಾಯ ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸಿಕೊಡುವ ಸಂವಿಧಾನವನ್ನು ವಿರೋಧಿಸುವರ ಸಂಖ್ಯೆ ಹೆಚ್ಚಾಗುತ್ತಿದೆ. ಸಂವಿಧಾನದ ಮಹತ್ವ ಸಂವಿಧಾನ ವಿರೋಧಿಗಳಿಗೆ ಗೋತ್ತಿಲ್ಲ. ಏಕೆಂದರೆ ಅವರು ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ಸಂವಿಧಾನ ವಿರೋಧಿಸುವರನ್ನು ನಾವು ವಿರೋಧಿಸಬೇಕು.
ಕನ್ನಡಪ್ರಭ ವಾರ್ತೆ ಮಾಲೂರು
ಸಮಾನತೆ ಪ್ರತಿಪಾದಿಸುವ ಸಂವಿಧಾನ ರಚನೆಯಾಗಿ ಅನುಷ್ಠಾನಗೊಂಡು 75 ವರ್ಷವಾದರೂ ಇನ್ನೂ ಸಂವಿಧಾನದಡಿಯಲ್ಲಿನ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಾಗಿ ಬಂದಿರುವುದು ರ್ದುದೈವ ಸಂಗತಿ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಪಟ್ಟಣದ ಪುರಸಭೆ ಉದ್ಯಾನವನದಲ್ಲಿ ರಾಷ್ಟ್ರೀಯ ಸಂವಿಧಾನ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು.
ಸಂವಿಧಾನ ವಿರೋಧಿಗಳುಪ್ರತಿ ಜಾತಿ ಸಮುದಾಯ ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸಿಕೊಡುವ ಸಂವಿಧಾನವನ್ನು ವಿರೋಧಿಸುವರ ಸಂಖ್ಯೆ ಹೆಚ್ಚಾಗುತ್ತಿದೆ. ಸಂವಿಧಾನದ ಮಹತ್ವ ಸಂವಿಧಾನ ವಿರೋಧಿಗಳಿಗೆ ಗೋತ್ತಿಲ್ಲ. ಏಕೆಂದರೆ ಅವರು ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ಸಂವಿಧಾನ ವಿರೋಧಿಸುವರನ್ನು ನಾವು ವಿರೋಧಿಸುತ್ತೇವೆ ಎಂದರು.
ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನದಿಂದಲೇ ಇಂದು ದೇಶದಲ್ಲಿ ಸುಖ ಶಾಂತಿ ಯಿಂದ ನೆಲೆಸಲು ಸಾಧ್ಯವಾಗಿದ್ದು,ಅಂತಹ ಧೀಮಂತ ನಾಯಕ ಬಾಬಾ ಸಾಹೇಬ ಅಂಬೇಡ್ಕರ್ ದೇವರಾಗಿದ್ದು,ಅವರ ಪೋಟೋ ನ್ನು ಪ್ರತಿ ಮನೆಯಲ್ಲಿ ದೇವರ ಪೋಟೋಗಳ ಜತೆ ಇಟ್ಟು ಪೂಜಿಸಬೇಕು ಎಂದರು.ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧನೆ
ಶಾಲಾ ಮಕ್ಕಳಿಂದ ಸಂವಿಧಾನ ಪಾಲಿಸುವ ಪ್ರಮಾಣವನ್ನು ವಾಚಿಸಿದರು.ಜನಪದ ಗಾಯಕ ದೂಡ್ಡಮಲ್ಲೆ ರವಿ ತಂಡದವರಿಂದ ಅಂಬೇಡ್ಕರ್ ಕುರಿತ ಗಾಯನ ನಡೆಯಿತು.ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್ , ಪ್ರಾಧಿಕಾರದ ಅಧ್ಯಕ್ಷ ನಯೀಮ್ ,ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂಧನ್ ,ವಿಜಯನಾರಸಿಂಹ ,ಕಾಂಗ್ರಸ್ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ಭಾರತಮ್ಮ ಶಂಕರಪ್ಪ, ವಿಜಯಲಕ್ಷ್ಮಿ ಲಕ್ಷ್ಮಿನಾರಾಯಣ್ ಹನುಮಂತರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ,ಎ.ಕೆ.ವೆಂಕಟೇಶ್ ,ಇನ್ನಿತರರು ಇದ್ದರು.