- ರಾತ್ರೋ ರಾತ್ರಿ ಪ್ರತಿಷ್ಠಾಪನೆಯಾಗಿದ್ದ ಮೂರ್ತಿಗಳ ಅನಾವರಣ

| Published : Oct 23 2023, 12:15 AM IST

- ರಾತ್ರೋ ರಾತ್ರಿ ಪ್ರತಿಷ್ಠಾಪನೆಯಾಗಿದ್ದ ಮೂರ್ತಿಗಳ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ರಂಜಿತಾ ಹೋಟೆಲ್ ಮತ್ತು ಇಂದಿರಾ ಕ್ಯಾoಟೀನ್ ಮುಂಭಾಗ ಕಳೆದ ಅಕ್ಟೊಬರ್ 3ರಂದು ಕರ್ನಾಟಕ ರಕ್ಷಣಾ ವೇದಿಕೆಯವರು ರಾತ್ರೋರಾತ್ರಿ ಎರಡು ಪ್ರತಿಮೆಗಳ ಪ್ರತಿಷ್ಠಾಪನೆ ಮಾಡಿದ್ದರು. ಪ್ರತಿಮೆಗಳ ಮುಖ ಕಾಣದಂತೆ ಬಟ್ಟೆಯಿಂದ ಮುಚ್ಚಲಾಗಿತ್ತು. ರಾಷ್ಟ್ರಕವಿ ಕುವೆಂಪು ಹಾಗೂ ಪುನೀತ್ ರಾಜಕುಮಾರ್ ಅವರ ಪ್ರತಿಮೆಗಳು ಹೂವಿನ ಹಾರಗಳಿಂದ ಸಿಂಗಾರಗೊಂಡು ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಂಡಿವೆ ರಾತ್ರೋರಾತ್ರಿ ಪ್ರತಿಷ್ಠಾಪನೆಗೊಂಡಿದ್ದ ಪ್ರತಿಮೆಗಳ ಬಗ್ಗೆ ಕರವೇ ಮತ್ತು ನಗರಸಭೆ ಅಧಿಕಾರಿಗಳ ನಡುವೆ ಹಗ್ಗ ಜಗ್ಗಾಟ ನಡೆದೇ ಇತ್ತು. ನಗರಸಭೆ ಅಧಿಕಾರಿಗಳು ಸಹ ಕರವೇ ಕಾರ್ಯಕರ್ತರನ್ನು ಕರೆದು ಮಾತುಕತೆ ನಡೆಸಿ ನೋಟಿಸ್ ನೀಡಿದ್ದರು ಎನ್ನಲಾಗಿದೆ. ಆದರೆ ಇದೀಗ ಭಾನುವಾರ ಬೆಳಗ್ಗೆ ಎರಡೂ ಪ್ರತಿಮೆಗಳನ್ನು ಕರವೇ ಕಾರ್ಯಕರ್ತರು ಅನಾವರಣಗೊಳಿಸಿದ್ದಾರೆ.

ಪ್ರತಿಮೆಗಳು ಕುವೆಂಪು, ಪುನೀತ್ ಅವರದ್ದೆಂದು ಖಾತ್ರಿ ಆಯ್ತು । ಕದ್ದು ಮುಚ್ಚಿ ಪ್ರತಿಮೆ ಪ್ರತಿಷ್ಠಾಪನೆ ಬಗ್ಗೆ ಸಾರ್ವಜನಿಕರ ಅಸಮಾಧಾನಕನ್ನಡಪ್ರಭ ವಾರ್ತೆ ಹಿರಿಯೂರು ಕಳೆದ ಹದಿನೈದು ದಿನಗಳಿಂದ ಮುಸುಕುಧಾರಿಗಳಾಗಿ ಬಿಸಿಲು, ಗಾಳಿಗೆ ಮೈಯೊಡ್ಡಿ ನಿಂತಿದ್ದ ಎರಡು ಪ್ರತಿಮೆಗಳಿಗೆ ಹಿರಿಯೂರಿನಲ್ಲಿ ಮೋಕ್ಷ ದೊರತಿದೆ. ಮುಸುಕಿನ ಹಿಂದೆ ಇದ್ದದ್ದು ರಾಷ್ಟ್ರಕವಿ ಕುವೆಂಪು ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರತಿಮೆಗಳೆಂಬ ಸಂಗತಿ ಅಂತೂ ನಾಗರಿಕರಿಗೆ ಖಾತ್ರಿಯಾಗಿದೆ. ನಗರದ ರಂಜಿತಾ ಹೋಟೆಲ್ ಮತ್ತು ಇಂದಿರಾ ಕ್ಯಾoಟೀನ್ ಮುಂಭಾಗ ಕಳೆದ ಅಕ್ಟೊಬರ್ 3ರಂದು ಕರ್ನಾಟಕ ರಕ್ಷಣಾ ವೇದಿಕೆಯವರು ರಾತ್ರೋರಾತ್ರಿ ಎರಡು ಪ್ರತಿಮೆಗಳ ಪ್ರತಿಷ್ಠಾಪನೆ ಮಾಡಿದ್ದರು. ಪ್ರತಿಮೆಗಳ ಮುಖ ಕಾಣದಂತೆ ಬಟ್ಟೆಯಿಂದ ಮುಚ್ಚಲಾಗಿತ್ತು. ರಾಷ್ಟ್ರಕವಿ ಕುವೆಂಪು ಹಾಗೂ ಪುನೀತ್ ರಾಜಕುಮಾರ್ ಅವರ ಪ್ರತಿಮೆಗಳು ಹೂವಿನ ಹಾರಗಳಿಂದ ಸಿಂಗಾರಗೊಂಡು ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಂಡಿವೆ ರಾತ್ರೋರಾತ್ರಿ ಪ್ರತಿಷ್ಠಾಪನೆಗೊಂಡಿದ್ದ ಪ್ರತಿಮೆಗಳ ಬಗ್ಗೆ ಕರವೇ ಮತ್ತು ನಗರಸಭೆ ಅಧಿಕಾರಿಗಳ ನಡುವೆ ಹಗ್ಗ ಜಗ್ಗಾಟ ನಡೆದೇ ಇತ್ತು. ನಗರಸಭೆ ಅಧಿಕಾರಿಗಳು ಸಹ ಕರವೇ ಕಾರ್ಯಕರ್ತರನ್ನು ಕರೆದು ಮಾತುಕತೆ ನಡೆಸಿ ನೋಟಿಸ್ ನೀಡಿದ್ದರು ಎನ್ನಲಾಗಿದೆ. ಆದರೆ ಇದೀಗ ಭಾನುವಾರ ಬೆಳಗ್ಗೆ ಎರಡೂ ಪ್ರತಿಮೆಗಳನ್ನು ಕರವೇ ಕಾರ್ಯಕರ್ತರು ಅನಾವರಣಗೊಳಿಸಿದ್ದಾರೆ. ಈ ವೇಳೆ ಕರವೇ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಪ್ರತಿಮೆ ಅನಾವರಣಕ್ಕೆ ಸಾರ್ವಜನಿಕರ, ಅಭಿಮಾನಿಗಳ ಒತ್ತಾಯ ಜಾಸ್ತಿಯಾಗಿತ್ತು. ಹಾಗಾಗಿ ಪೂಜೆ ಸಲ್ಲಿಸಿ ಅನಾವರಣ ಮಾಡಿದೆವು. ಪ್ರತಿಮೆಗಳ ತೆರವಿಗೆ ಅಧಿಕಾರಿಗಳು ಪ್ರಯತ್ನಿಸಿದಲ್ಲಿ ರಾಜ್ಯಾಧ್ಯಕ್ಷ ನಾರಾಯಣಗೌಡರು ಮತ್ತು ಜಿಲ್ಲಾಧ್ಯಕ್ಷ ಟಿ.ರಮೇಶ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ತಿಮ್ಮರಾಜು, ತಾಲೂಕು ಗೌರವಾಧ್ಯಕ್ಷ ಗೋ. ಬಸವರಾಜ್, ಪ್ರಧಾನ ಕಾರ್ಯದರ್ಶಿ ದಾದಾಪೀರ್,ನಗರಾಧ್ಯಕ್ಷ ಜಾಕೀರ್, ಎಂ ಕೆ ಜಾಫರ್, ಮೊಹಮ್ಮದ್ ಸುಹೇಲ್, ಕಲಂದರ್, ರವಿ, ಮಂಜುನಾಥ್ ಮುಂತಾದವರು ಹಾಜರಿದ್ದರು. ಕದ್ದು ಮುಚ್ಚಿ ಮಾಡಬೇಕಿತ್ತಾ:ಕುವೆಂಪು ಹಾಗೂ ಪುನೀತ್ ರಾಜಕುಮಾರ್ ಪ್ರತಿಮೆ ಪ್ರತಿಷ್ಠಾಪನೆ ಬಗ್ಗೆ ಯಾರೊಬ್ಬರೂ ವಿರೋಧ ಮಾಡುತ್ತಿರಲಿಲ್ಲ. ಕರವೇ ಕಾರ್ಯಕರ್ತರು ಅನಗತ್ಯವಾಗಿ ಈ ಸಂದರ್ಭ ಸೃಷ್ಟಿಸಿದ್ದಾರೆ. ಪ್ರತಿಮೆಗಳ ಮುಖಕ್ಕೆ ಬಟ್ಟೆ ಮುಚ್ಚಿ ಗೌಪ್ಯತೆ ಕಾಪಾಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಕುವೆಂಪು, ಪುನೀತ್ ಪ್ರತಿಮೆ ಪ್ರತಿಷ್ಠಾಪನೆಗೆ ನಗರಸಭೆ ಅಡ್ಡಬರಲು ಸಾಧ್ಯವೇ. ಅನುಮತಿ ಪಡೆದೇ ಮಾಡಬಹುದಿತ್ತು. ರಾತ್ರೋರಾತ್ರಿ ತಂದು ನಿಲ್ಲಿಸುವ ಪ್ರಮೇಯ ಏಕೆ ಬೇಕಿತ್ತು. ರಾತ್ರೋ ರಾತ್ರಿ ಕಾರ್ಯಾಚರಣೆಗಳು ಸರಿಯಾದ ನಡೆಯಲ್ಲ. ಇದೇ ರೀತಿ ಬೇರೆಯವರಿಗೆ ರಾತ್ರೋ ರಾತ್ರಿ ಕಾರ್ಯಾಚರಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕರವೇ ಕಾರ್ಯಕರ್ತರ ಈ ನಡೆ ಸರಿಯಾದುದ್ದಲ್ಲವೆಂದು ಹೆಸರು ಹೇಳಲು ಇಚ್ಚಿಸದ ಜನಪ್ರತಿನಿಧಿಯೊಬ್ಬರು ಆಕ್ಷೇಪಿಸಿದರು.