ಸಾರಾಂಶ
ಅನೇಕ ಮಠಗಳು ಧರ್ಮ ಸೇವೆಯೊಂದಿಗೆ ಪರಂಪರೆಯನ್ನೂ ಉಳಿಸಿಕೊಂಡು ಬಂದಿವೆ.
ಫೋಟೋ- 15ಎಂವೈಎಸ್2----ಕನ್ನಡಪ್ರಭ ವಾರ್ತೆ ಮೈಸೂರು
ಧರ್ಮದ ಬೆಳವಣಿಗೆ, ಅದರ ರಕ್ಷಣೆ ಕೆಲಸವನ್ನು ಮಠಗಳನ್ನು ಶತಮಾನಗಳಿಂದ ಮಾಡಿಕೊಂಡು ಬಂದಿವೆ. ಇದರ ಆಧಾರದ ಮೇಲೆಯೂ ಆಧುನಿಕ ಸಮಾಜವೂ ನಿಂತುಕೊಂಡಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.ನಗರದ ಬಸವೇಶ್ವರ ಮುಖ್ಯರಸ್ತೆ ಕುದೇರು ಮಠದ ಪಕ್ಕದಲ್ಲಿ ಶನಿವಾರ ಶ್ರೀ ಶಿವಪಾದ ಗುರುಸೇವಾ ನಂದಿಧ್ವಜ ಸಂಘದ 89ನೇ ವಾರ್ಷಿಕೋತ್ಸವ ಹಾಗೂ ಶಿವಯೋಗಿ ಶ್ರೀ ಶಿವಪಾದಸ್ವಾಮಿಯವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅನೇಕ ಮಠಗಳು ಧರ್ಮ ಸೇವೆಯೊಂದಿಗೆ ಪರಂಪರೆಯನ್ನೂ ಉಳಿಸಿಕೊಂಡು ಬಂದಿವೆ. ದಾಸೋಹ, ಶಿಕ್ಷಣ, ಆರೋಗ್ಯ ಮಾಡುವ ಮೂಲಕ ಮಠಮಾನ್ಯಗಳು ಉತ್ತಮ ಕೊಡುಗೆಯನ್ನು ಸಮಾಜಕ್ಕೆ ನೀಡಿವೆ. ಆಧ್ಯಾತ್ಮಿಕತೆ ನೆಲೆಯಲ್ಲಿ ಭಾರತ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.ಭಾರತದ ಮೂಲ ತತ್ವ ವಚನದಲ್ಲಿ ಇದೆ. ಇದುವೇ ಶ್ರೇಷ್ಠ ಕೊಡುಗೆಯಾಗಿದೆ. ಉತ್ತಮ ವಚನಗಳಲ್ಲಿ ಭಾರತೀಯತೆ ಅಡಗಿದೆ. ಇದು ಧರ್ಮವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. 12ನೇ ಶತಮಾನದಲ್ಲೇ ಬಸವಣ್ಣನವರು ಧರ್ಮವನ್ನು ಅರ್ಥೈಸುವ ಕೆಲಸವನ್ನು ಮಾಡಿದರು. ವಿಕಸಿತ ಭಾರತದತ್ತ ದೇಶ ಮುಖ ಮಾಡಿದೆ. ಭಾರತೀಯತೆ ಅಭಿವೃದ್ಧಿಗೆ ಗುರುಪರಂಪರೆ ಆಧಾರಿತ ಮಠಗಳು ಸೂಕ್ತ ಮಾರ್ಗದರ್ಶನ ಮಾಡಬೇಕಿದೆ ಎಂದರು.ಕುದೇರು ಮಠದಲ್ಲಿ ದಾಸೋಹ ಕೇಂದ್ರ ನಿರ್ಮಾಣಕ್ಕೆ ನೆರವು ನೀಡುವಂತೆ ಕೋರಲಾಗಿದ್ದು, ಮುಂದಿನ ದಿನಗಳಲ್ಲಿ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಜಗತ್ತಿಗೆ ದಾಸೋಹ ಪರಿಕಲ್ಪನೆ ಪರಿಚಯಿಸಿದ್ದು ಮಠಗಳು. ಅದರಲ್ಲೂ ವೀರಶೈವ ಲಿಂಗಾಯತ ಮಠಗಳು ದಾಸೋಹಕ್ಕೆ ಹೆಸರುವಾಸಿಯಾಗಿವೆ. ಶಿಕ್ಷಣ, ವಸತಿ, ಆರೋಗ್ಯ ಕಲ್ಪಿಸಿಕೊಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ ಎಂದರು.ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮೈಸೂರು ಬಸವ ಬಳಗಗಳ ಒಕ್ಕೂಟದ ಮಾಜಿ ಅಧ್ಯಕ್ಷ ಎಂ. ಪ್ರದೀಪ್ ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜು, ಸಂಘದ ಅಧ್ಯಕ್ಷ ಆರ್. ಅಂಕಯ್ಯ, ಎಚ್.ಜಿ. ರಾಜು, ನಿತೀಶ್ ಕುಮಾರ್, ಪಿ. ಗೂಳಪ್ಪ, ನಾಗಲಿಂಗಸ್ವಾಮಿ, ಗುರು, ಜಿ. ಮಾದೇಶ್ ಮೊದಲಾದವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))