ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯು, ಇತ್ತೀಚೆಗೆ ಅತ್ಯಾಧುನಿಕ ಜೈವಿಕ ಸುರಕ್ಷತಾ ಹಂತ–3 (ಬಿಎಸ್‌ಎಲ್‌–3) ಸೌಲಭ್ಯವನ್ನು ಆರಂಭಿಸಿದ್ದು, ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ನಿಯಂತ್ರಣದಡಿ ನಡೆಯುವ ಜೀವವೈದ್ಯಕೀಯ ಸಂಶೋಧನೆ, ಸಾಂಕ್ರಾಮಿಕ ರೋಗಗಳ ಪತ್ತೆ ಹಾಗೂ ಸಾರ್ವಜನಿಕ ಆರೋಗ್ಯ ಸುರಕ್ಷೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯು, ಇತ್ತೀಚೆಗೆ ಅತ್ಯಾಧುನಿಕ ಜೈವಿಕ ಸುರಕ್ಷತಾ ಹಂತ–3 (ಬಿಎಸ್‌ಎಲ್‌–3) ಸೌಲಭ್ಯವನ್ನು ಆರಂಭಿಸಿದ್ದು, ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ನಿಯಂತ್ರಣದಡಿ ನಡೆಯುವ ಜೀವವೈದ್ಯಕೀಯ ಸಂಶೋಧನೆ, ಸಾಂಕ್ರಾಮಿಕ ರೋಗಗಳ ಪತ್ತೆ ಹಾಗೂ ಸಾರ್ವಜನಿಕ ಆರೋಗ್ಯ ಸುರಕ್ಷೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.

ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ಈ ಸೌಲಭ್ಯವನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಈ ಸಾಂಸ್ಥಿಕ ಉಪಕ್ರಮವು ಶೈಕ್ಷಣಿಕ, ಸಂಶೋಧನಾತ್ಮಕ, ಸಾಮಾಜಿಕ- ಈ ಮೂರು ನೆಲೆಗಳಲ್ಲಿ ಉಪಯುಕ್ತವೆನಿಸಲಿದೆ ಎಂದು ಆಶಿಸಿದರು.ಕೆಎಂಸಿ ಮೆಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಚಿರಂಜಯ್ ಮುಖೋಪಾಧ್ಯಾಯ ಅವರು ಸಂಶೋಧನ ಕ್ಷೇತ್ರದಲ್ಲಿ ಜೈವಿಕ ಸುರಕ್ಷತಾ ಹಂತ–3 (ಬಿಎಸ್‌ಎಲ್‌–3) ರ ಅನ್ವಯ ಸಾಧ್ಯತೆಗಳ ಬಗ್ಗೆ ವಿವರಿಸಿದರು.

ಸಂಶೋಧನೆಗೆ ಅನುಕೂಲ: ಸುಧಾರಿತ ಸುರಕ್ಷತಾ ನಿಯಂತ್ರಣ ಅಗತ್ಯವಿರುವ ಸೋಂಕುಕಾರಕಗಳ ಕುರಿತು ಸಂಶೋಧನೆ ನಡೆಸಲು ಅನುಕೂಲವಾಗುವಂತೆ ಈ ಬಿಎಸ್‌ಎಲ್‌-3 ಸೌಲಭ್ಯವನ್ನು ವಿನ್ಯಾಸಗೊಳಿಸಲಾಗಿದ್ದು, ಸಾಂಕ್ರಾಮಿಕ ರೋಗಗಳ ಸಂಶೋಧನೆ, ರೋಗಪತ್ತೆ, ರೋಗಗಳ ನಿಯಂತ್ರಣ ಹಾಗೂ ಸಂಶೋಧನಾ ಫಲಿತಾಂಶಗಳ ಕುರಿತು ವೈದ್ಯಕೀಯ ಕ್ರಮವನ್ನು ಕೈಗೊಳ್ಳುವಲ್ಲಿ ಈ ಸೌಲಭ್ಯ ನೆರವಾಗಲಿದೆ.

ಪ್ರಸ್ತುತ ಮಾಹೆಯಲ್ಲಿ ಆರಂಭಗೊಂಡಿರುವ ಬಿಎಸ್‌ಎಲ್‌–3 ಸೌಲಭ್ಯವು ಮಾರ್ಚ್-2026ರಲ್ಲಿ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ (ಡಿಬಿಟಿ) ಜೆನೆಟಿಕ್ ಮ್ಯಾನಿಪ್ಯುಲೇಷನ್ ಪರಿಶೀಲನಾ ಸಮಿತಿಯಿಂದ (ಆರ್‌ಸಿಜಿಎಂ) ಪ್ರಮಾಣೀಕರಣ ಪಡೆದಿದೆ.