ಯುಪಿಎಂಸಿ: ಬ್ಯಾಟ್‌ ಆ್ಯಂಡ್ ನೆಟ್ ಚಾಲೆಂಜ್‌ ಸಮಾರೋಪ

| Published : Oct 29 2025, 11:15 PM IST

ಯುಪಿಎಂಸಿ: ಬ್ಯಾಟ್‌ ಆ್ಯಂಡ್ ನೆಟ್ ಚಾಲೆಂಜ್‌ ಸಮಾರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಬ್ಯಾಟ್ ಆ್ಯಂಡ್ ನೆಟ್ ಚಾಲೆಂಜ್ 2025 ಒಂದು ದಿನದ ಕ್ರಿಕೆಟ್ ಮತ್ತು ಥ್ರೋ ಬಾಲ್ ಪಂದ್ಯಕೂಟ ಆಯೋಜಿಸಲಾಗಿತ್ತು.

ಉಡುಪಿ: ನಗರದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಬ್ಯಾಟ್ ಆ್ಯಂಡ್ ನೆಟ್ ಚಾಲೆಂಜ್ 2025 ಒಂದು ದಿನದ ಕ್ರಿಕೆಟ್ ಮತ್ತು ಥ್ರೋ ಬಾಲ್ ಪಂದ್ಯಕೂಟ ಆಯೋಜಿಸಲಾಗಿತ್ತು.

ಕ್ರಿಕೆಟ್‌ನಲ್ಲಿ ಎಂಜಿಎಂ ಪಪೂ ಕಾಲೇಜು ಪ್ರಥಮ, ವಿವೇಕ ಪಪೂ ಕಾಲೇಜು ಕೋಟ ದ್ವಿತೀಯ ಸ್ಥಾನ ಮತ್ತು ಥ್ರೋಬಾಲ್‌ನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿರಿಯಡ್ಕ ಪ್ರಥಮ, ಮಣಿಪಾಲ ಪಪೂ ಕಾಲೇಜು ದ್ವಿತೀಯ ಸ್ಥಾನಗಳನ್ನು ಪಡೆದವು.ಕ್ರಿಕೆಟ್ ಪಂದ್ಯಾಟದಲ್ಲಿ ವಿವೇಕ ಪದವಿ ಪೂರ್ವ ಕಾಲೇಜಿನ ರೋಹನ್ ಅತ್ಯುತ್ತಮ ಬೌಲರ್, ಎಂಜಿಎಂ ಪಪೂ ಕಾಲೇಜಿನ ಕನೀಶ್ ಅತ್ಯುತ್ತಮ ಬ್ಯಾಟ್ಸಮನ್ ಮತ್ತು ಸರಣಿ ಶ್ರೇಷ್ಟ ಪ್ರಶಸ್ತಿಗೂ ಭಾಜನರಾದರು. ಥ್ರೋಬಾಲ್ ಪಂದ್ಯಾಟದಲ್ಲಿ ಹಿರಿಯಡ್ಕ ಪಪೂ ಕಾಲೇಜಿನ ಮೇಘಾ ಆಲ್ ರೌಂಡರ್, ಶಾಮ್ಯ ಗುಡ್ ರಿಸೀವರ್ ಹಾಗೂ ಮಣಿಪಾಲ ಪಪೂ ಕಾಲೇಜಿನ ಮೀನಾಕ್ಷಿ ಗುಡ್ ಥ್ರೋವರ್ ಪ್ರಶಸ್ತಿಗೆ ಆಯ್ಕೆಯಾದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಆಗಮಿಸಿದ್ದರು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ದೈಹಿಕ ಶಿಕ್ಷಣದ ಉಪನ್ಯಾಸಕರು ಹಾಗೂ ಸ್ಪರ್ಧಿಗಳು ಪಂದ್ಯಕೂಟದ ಅನಿಸಿಕೆ ಹಂಚಿಕೊಂಡರು.

ಕ್ರೀಡಾಕೂಟದ ಸಂಯೋಜಕ ಉಪನ್ಯಾಸಕ ಹರಿಕೇಶವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.