ಸಾರಾಂಶ
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಯುಪಿಎಂಸಿ ಪ್ರಿಮಿಯರ್ ಲೀಗ್-೨೪ ಅಂತರ್ ಕಕ್ಷಾ ವಾಲಿಬಾಲ್, ಥ್ರೋ ಬಾಲ್ ಪಂದ್ಯಾಟ ನಡೆಯಿತು. ಉಡುಪಿಯ ಉಜ್ವಲ್ ಗ್ರೂಪ್ಸ್ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಪಂದ್ಯಾಟಗಳನ್ನು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಏ.೨೦ರಂದು ಯುಪಿಎಂಸಿ ಪ್ರಿಮಿಯರ್ ಲೀಗ್-೨೪ ಅಂತರ್ ಕಕ್ಷಾ ವಾಲಿಬಾಲ್, ಥ್ರೋ ಬಾಲ್ ಪಂದ್ಯಾಟ ನಡೆಯಿತು.ಉಡುಪಿಯ ಉಜ್ವಲ್ ಗ್ರೂಪ್ಸ್ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಪಂದ್ಯಾಟಗಳನ್ನು ಉದ್ಘಾಟಿಸಿ, ಸಾಂಪ್ರದಾಯಿಕ ವಾಣಿಜ್ಯ ಮತ್ತು ಆಡಳಿತ ನಿರ್ವಹಣೆಯ ತರಗತಿಯ ಪಾಠಗಳಿಗೆ ಪ್ರಾಯೋಗಿಕತೆಯನ್ನು ಕಲ್ಪಿಸುವ ದೃಷ್ಟಿಯಿಂದ ಮಕ್ಕಳಿಗೆ ಜವಾಬ್ದಾರಿ ಇತ್ತು ನಡೆಸಿದ ಪಂದ್ಯಾಟ ಇದಾಗಿದೆ. ಐಪಿಎಲ್ ಮಾದರಿಯಲ್ಲಿ ಆಟಗಾರರ ಏಲಂ ನಡೆಸಿ ಐದು ತಂಡಗಳನ್ನು ರಚಿಸಿ ವಿದ್ಯಾರ್ಥಿಗಳು ನಡೆಸಿದ ಈ ಪಂದ್ಯಾಟವು ನಾಯಕತ್ವವೇ ಮೊದಲಾದ ಗುಣಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾದ ದೈವಾನುಗ್ರಹ ಚಿಟ್ ಫಂಡ್ ಮಾಲಕ ರಾಘವೇಂದ್ರ ಶೇರಿಗಾರ್, ಪುರುಷರ ವಾಲಿಬಾಲ್ ಪಂದ್ಯಾಟಕ್ಕೆ ಹಾಗೂ ಶಕುಂತಳಾ ಆರ್. ಶೇರಿಗಾರ್ ಅವರು ಮಹಿಳೆಯರ ಥ್ರೋ ಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು.ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೋಟ್ಯಾನ್, ವಿದ್ಯಾರ್ಥಿ ತಂಡಗಳ ಮಾಲಕರಾದ ರಚನ್ ಸಾಲ್ಯಾನ್, ಶಶಾಂಕ್, ಸುಹಾಫ್, ಪ್ರೀತಂ, ತುಷಾರ್, ಸುಜನ್, ಕಾವ್ಯ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವರ್ಷಾ ಕಾಮತ್ ಸ್ವಾಗತಿಸಿದರು. ಯಶಸ್ವಿನಿ ವಂದಿಸಿದರು. ಪ್ರೇಮಸಾಯಿ ಕಾರ್ಯಕ್ರಮ ನಿರೂಪಿಸಿದರು.