ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಉಪ್ಪಾರ ಸಮಾಜದ ಬಂಧುಗಳು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕಳುಹಿಸುವುದಕ್ಕೆ ಸೀಮಿತರಾಗದೆ ಅವರಿಗೆ ಕಲಿಯುವ ಹಕ್ಕಿದೆ ಎಂಬುದನ್ನು ಅರ್ಧ ಮಾಡಿಕೊಂಡು ಉನ್ನತ ಶಿಕ್ಷಣ ಕೊಡಿಸಿ ಅದರಿಂದ ಸಮಾಜಕ್ಕೆ ಕೊಡುಗೆ ನೀಡುವುದಕ್ಕೆ ಮುಂದಾಗಬೇಕು ಎಂದು ಶಾಸಕ ಎ. ಆರ್. ಎ.ಆರ್.ಕೃಷ್ಣಮೂರ್ತಿ ಹೇಳಿದರುಗುರುಭವನದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಧಕ ಮಕ್ಕಳನ್ನು ಗೌರವಿಸಿ ಮಾತನಾಡಿ, ದೇಶದ ಜನಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಉದ್ಯೋಗ ಸೃಷ್ಟಿಗೆ ಸರ್ಕಾರಗಳು ಅಗತ್ಯ ಕ್ರಮಕೈಗೊಳ್ಳಬೇಕು. ಎಲ್ಲೆಡೆ ಹೊರಗುತ್ತಿಗೆ ನೌಕರರಹನ್ನೇ ಕಾಣುತ್ತಿದ್ದೆವೆ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಲಭ್ಯ ಇರುವ ವಿಪುಲ ಅವಕಾಶಗಳನ್ನು ಬಳಕೆ ಮಾಡಿಕೊಂಡು ವಿದ್ಯಾವಂತರಾಗಬೇಕು. ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡಬೇಕು. ಬದಲಾದ ರಾಜಕೀಯ ಸನ್ನಿವೇಶ ಹಾಗೂ ಸಂವಿಧಾನದಿಂದಾಗಿ ಇಂದು ಮೀಸಲಾತಿಯಡಿ ಎಲ್ಲರಿಗೂ ರಾಜಕೀಯದಲ್ಲೂ ಅವಕಾಶ ಸಿಗುತ್ತಿದೆ. ಇದನ್ನ ಉಪ್ಪಾರ ಸಮಾಜ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ಶೇ. 85ಕ್ಕೂ ಹೆಚ್ಚು ಅಂಕ ಪಡೆದ 80ಕ್ಕೂ ಅಧಿಕ 10ನೇ ತರಗತಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಶಿವಕುಮಾರ್, ತಾಲೂಕು ಉಪ್ಪಾರ ಸಂಘ ಅಧ್ಯಕ್ಷ ರಮೇಶ್, ಕೊಳ್ಳೇಗಾಲ ಮತ್ತು ಹನೂರು ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಜಯಶಂಕರ್, ಗೌರವಧ್ಯಕ್ಷ ಯಡಮೋಳೆ ಗೋವಿಂದರಾಜು, ಕಾರ್ಯದರ್ಶಿ ರಾಜೇಂದ್ರ, ಮಾದೇಶ್, ರಾಜು ಹೊಂಡರಬಾಳು, ಪ್ರಿಯಾಶಂಕರ್, ಕೆನರಾ ಬ್ಯಾಂಕ್ ನಂಜುಂಡ ಸ್ವಾಮಿ, ತೋಟೇಶ್, ಸೋಮಣ್ಣ ಉಪ್ಪಾರ್, ಮುಡಿಗುಂಡ ಶಾಂತರಾಜು, ಚೇತನ್, ಕಲ್ಲೇಶ್ ಇನ್ನಿತರಿದ್ದರು