ಎನ್ಡಿಎ ನಾಲ್ಕು ಕ್ಷೇತ್ರಗಳಲ್ಲಿ ವಿಜಯವನ್ನು ಸಾಧಿಸಿದೆ. ಈ ವಿಜಯ ಜಿಲ್ಲೆಯ ಮತದಾರರು ಮತ್ತು ಕಾರ್ಯಕರ್ತರ ಗೆಲುವಾಗಿದೆ.
ಹೊನ್ನಾವರ: ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಬಿಜೆಪಿ ಎಸ್.ವಿ. ಸಂಕನೂರ ಅವರು ಅಭೂತಪೂರ್ವ ಗೆಲುವಿನೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದ ಹಿನ್ನೆಲೆ ಗೆಲುವಿನ ವಿಜಯೋತ್ಸವವನ್ನು ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಪಟ್ಟಣದ ಶರಾವತಿ ಸರ್ಕಲ್ನಲ್ಲಿ ಬುಧವಾರ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಸ್. ಹೆಗಡೆ ಮಾತನಾಡಿದ ಅವರು, ಎನ್ಡಿಎ ನಾಲ್ಕು ಕ್ಷೇತ್ರಗಳಲ್ಲಿ ವಿಜಯವನ್ನು ಸಾಧಿಸಿದೆ. ಈ ವಿಜಯ ಜಿಲ್ಲೆಯ ಮತದಾರರು ಮತ್ತು ಕಾರ್ಯಕರ್ತರ ಗೆಲುವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಹೇಶ ಟೆಂಗಿನಕಾಯಿ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನಿಲ್ ನಾಯ್ಕ, ಶಿವಾನಂದ ನಾಯ್ಕ ಇತರೆ ಪ್ರಮುಖ ನಾಯಕರು ಕಳೆದ ಒಂದು ತಿಂಗಳಿಂದ ನಿರಂತರ ಪರಿಶ್ರಮವನ್ನು ಹಾಕಿ ನಮ್ಮ ಅಭ್ಯರ್ಥಿ ಗೆಲ್ಲಲು ಕಾರಣಿಕರ್ತರಾಗಿದ್ದಾರೆ. ಚುನಾವಣೆ ಮೂಲಕ ಪ್ರಬುದ್ಧ ಮತದಾರರು ಕಾಂಗ್ರೆಸ್ ಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಜನರು ಈ ಸರ್ಕಾರವನ್ನು ತಿರಸ್ಕರಿಸಿದ್ದಾರೆ ಎಂದರು.ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಯೋಗೀಶ್ ಮೇಸ್ತ, ಮಂಕಿ ಘಟಕದ ಅಧ್ಯಕ್ಷ ಮಂಜುನಾಥ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಹೆಗಡೆ, ಈಶ್ವರ್ ನಾಯ್ಕ, ಕಮಲಾ ನಾಯ್ಕ, ಬಿ.ಟಿ. ಗಣಪತಿ, ಗೋವಿಂದ ನಾಯ್ಕ, ವಿನೋದ ಮೇಸ್ತ, ಸವಿತಾ, ಗಣಪತಿ ಗೌಡ ಇತರರು ಇದ್ದರು.
ಮುಂಡಗೋಡದಲ್ಲಿ ಪಟಾಕಿ ಸಿಡಿಸಿ ಸಂಭ್ರಮಮುಂಡಗೋಡ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿನ ಛತ್ರಪತಿ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ನಡೆದ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ೪ ವಿಧಾನ ಪರಿಷತ್ ಸದಸ್ಯ ಸ್ಥಾನ ಚುನಾವಣೆಯಲ್ಲಿ ಕೂಡ ಬಿಜೆಪಿ(ಎನ್ಡಿಎ) ಅಭ್ಯರ್ಥಿಗಳನ್ನು ಗೆಲ್ಲಿಸಿರುವ ಮತದಾರರು ಆಡಳಿತಾರೂಡ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸುವ ಅರ್ಹತೆ ಇಲ್ಲ ಎಂಬ ಸಂದೇಶ ನೀಡಿದ್ದಾರೆ ಎಂದರು.ಮುಂಡಗೋಡ ಮಂಡಲ ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ್ ಮಾತನಾಡಿದರು. ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸಂತೋಷ ತಳವಾರ್, ಮುಖಂಡರಾದ ನಾಗರಾಜ ಕುನ್ನೂರ, ನಾಗರಾಜ ಅಂಡಗಿ(ಮಳಗಿ) ಮಂಜುನಾಥ ಶೇಟ್, ನಾಗರಾಜ್ ಬೆಣ್ಣಿ, ಬಾಬುರಾವ್ ವಾಲ್ಮೀಕಿ, ಮಂಜುನಾಥ ನಡಗೇರಿ, ಬಸವರಾಜ ಟಣಕೆದಾರ, ಚಂದ್ರಶೇಖರ ಗಾಣಿಗೇರ, ಪವನ ಇಂಗಳೆ, ಭರತರಾಜ ಹದಳಗಿ, ದತ್ತಾತ್ರೆಯ ರಾಯ್ಕರ, ಚನ್ನಪ್ಪ ಹಿರೇಮಠ, ನಾಗರಾಜ ಸಂಕನಾಳ ಮುಂತಾದವರಿದ್ದರು.