ಉಪ್ಪಿನಂಗಡಿ: ಶ್ರೀ ಮಾಧವ ಶಿಶು ಮಂದಿರ ಮಾತೃ ಭೋಜನ

| Published : Dec 16 2024, 12:45 AM IST

ಸಾರಾಂಶ

ಶನಿವಾರ ರಾತ್ರಿ ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಮಾತೃ ಭೋಜನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿಯುವ ವಾಗ್ಮಿ ಸಂಕೇತ್ ಶೆಟ್ಟಿ ಮೂಡೈಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ವಿಶ್ವದಲ್ಲಿ ಮಾತೃ ಶಕ್ತಿಯನ್ನು ಗೌರವಿಸಿ ಪೂಜಿಸುತ್ತಿರುವ ಏಕೈಕ ದೇಶ ಭಾರತವಾಗಿದ್ದು, ಇಲ್ಲಿನ ಮಾತೆಯರು ರಾಷ್ಟ್ರದ ಬಗ್ಗೆ ಸದಾ ಜಾಗೃತರಾಗಿದ್ದರಿಂದಲೇ ಛತ್ರಪತಿ ಶಿವಾಜಿ, ಸ್ವಾಮಿ ವಿವೇಕಾನಂದ ಅರಂತಹ ಪುತ್ರ ರತ್ನರು ಪಡೆಯುವಂತಾಯಿತು ಎಂದು ಯುವ ವಾಗ್ಮಿ ಸಂಕೇತ್ ಶೆಟ್ಟಿ ಮೂಡೈಮಾರ್ ಹೇಳಿದ್ದಾರೆ.

ಶನಿವಾರ ರಾತ್ರಿ ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಮಾತೃ ಭೋಜನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ತ್ಯಾಗವನ್ನಾಧರಿತ ಭಾರತೀಯ ಕುಟುಂಬ ಪದ್ಧತಿಯನ್ನು ಇಡೀ ಜಗತ್ತೆ ಮೆಚ್ಚಿದೆ. ಪ್ರತಿ ಮನೆಯೂ ದೇಶದ ಪ್ರಬಲ ಆಧಾರಸ್ತಂಭಗಳಾಗಿ ರೂಪುಗೊಂಡಿದ್ದವು. ಅಂತಹ ಶ್ರೇಷ್ಠ ಜೀವನಪದ್ಧತಿಯ ವಾರಸುದಾರರಾದ ನಾವು ಸುಸಂಸ್ಕೃತ ಮನೆಗಳನ್ನು ರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ಮುಂದುವರಿಸಲು ಕಟಿಬದ್ದರಾಗೋಣ. ದೇಶದ ಸಾಧನೆಯ ಇತಿಹಾಸ ಶಿಕ್ಷಣದಿಂದ ಮರೆಯಾಗಿದೆ. ಆದರೆ ಅದನ್ನು ಮನೆಯಲ್ಲಿ ಮಕ್ಕಳಿಗೆ ಒದಗಿಸಿ, ಮನೆಯ ಮಕ್ಕಳು ರಾಷ್ಟ್ರಕ್ಕ್ಕೆ ಸಂಪತ್ತಾಗಿ ರೂಪುಗೊಳಿಸುವಲ್ಲಿ ಪ್ರತಿ ಮನೆಯ ಅಮ್ಮನ ಪಾತ್ರ ಅತೀ ಮಹತ್ವದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ವೀಣಾ ವಿ. ಗೌಡ ಮಾತನಾಡಿ, ವ್ಯಕ್ತಿ ವ್ಯಕ್ತಿಯ ನಡುವೆ ಭ್ರಾತೃತ್ವವನ್ನು ಮೂಡಿಸಿ ಸಮಾಜದೊಳಗಿನ ಸಾಮರಸ್ಯತೆಯನ್ನು ಬಲಪಡಿಸುವ ಮಾತೃ ಭೋಜನದಂತಹ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದರು.

ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ಸ್ವಾಗತಿಸಿದರು. ಪೋಷಕ ಸಂಘದ ಅಧ್ಯಕ್ಷೆ ಶ್ರೀದೇವಿ ಗೌತಮ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಮಾತೃ ಮಂಡಳಿಯ ಅಧ್ಯಕ್ಷೆ ಸುಜಾತ ಕೃಷ್ಣ ಆಚಾರ್ಯ ವಂದಿಸಿದರು.

ಮಹೇಶ್ ಬಜತ್ತೂರು, ನವೀನ್ , ದೇವರಾಜ್ , ಕಿರಣ್ ಹರಿನಗರ, ಪ್ರಶಾಂತ್ , ರಾಜಶೇಖರ ಕರಾಯ, ಕೈಲಾರ್ ರಾಜಗೋಪಾಲ ಭಟ್, ಕಂಗ್ವೆ ವಿಶ್ವನಾಥ ಶೆಟ್ಟಿ, ಶ್ಯಾಮಲಾ ಶೆಣೈ, ವೆಂಕಪ್ಪ ಗೌಡ, ಹರಿರಾಮಚಂದ್ರ, ಬಿ ಕೆ ಆನಂದ, ನಿತೇಶ್ ಗಾಣಿಗ, ಧರ್ಣಪ್ಪ ಗೌಡ ನೆಕ್ಕಿಲಾಡಿ, ಶಶಿಕಲಾ ಭಾಸ್ಕರ್, ಶೋಭಾ ದಯಾನಂದ್, ಪುಷ್ಪಲತಾ ಜನಾರ್ಧನ್, ಜಯಶ್ರೀ ಜನಾರ್ಧನ್ , ರಾಧ ಮೋನಪ್ಪ, ಭಾಸ್ಕರ್ ಹರಿನಗರ ,ಉಷಾ ಮುಳಿಯ, ಕೆ ರಾಘವೇಂದ್ರ ನಾಯಕ್, ಸುಧಾಕರ ಶೆಟ್ಟಿ, ಶಶಿಧರ್ ಶೆಟ್ಟಿ, ಸುಬ್ರಹ್ಮಣ್ಯ ಶೆಣೈ, ಜಗದೀಶ್ ಶೆಟ್ಟಿ, ಯು ರಾಜೇಶ್ ಪೈ, ಯತೀಶ್ ಶೆಟ್ಟಿ, ಮಂಜುನಾಥ್ ಹರಿನಗರ, ಯು ಕೆ ರೋಹಿತಾಕ್ಷ , ನಾರಾಯಣ ಸಪಲ್ಯ, ದೀಕ್ಷಾ ಪ್ರಶಾಂತ್ ನೆಕ್ಕಿಲಾಡಿ,ಸುನಿಲ್ ಸಂಗಮ್, ದಯಾನಂದ್, ಮೊದಲಾದವರು ಭಾಗವಹಿಸಿದ್ದರು.

೪೦೫ ಮಂದಿಯಿಂದ ಸಹ ಭೋಜನ:

ಶಿಶು ಮಂದಿರದ ೩೮ ಪೋಷಕರಿಂದ ತಮ್ಮ ತಮ್ಮ ಮನೆಯಲ್ಲಿ ಸಿದ್ದ ಪಡಿಸಿ ತರಿಸಲಾದ ಭೋಜನ ಭಕ್ಷ್ಯಗಳನ್ನು ೩೮ ಮನೆಗಳನ್ನು ಗುರುತಿಸಿ ಅಲ್ಲಿಗೆ ಅತಿಥಿಗಳನ್ನು ಕಳುಹಿಸಿ ಮನೆಯ ಯಜಮಾನಿ ಮಾತೃ ಭಾವದಿಂದ ಅನ್ನ ಬಡಿಸುವ , ಭೋಜನ ಮಂತ್ರದೊಂದಿಗೆ ಎಲ್ಲರೂ ಸಹ ಭೋಜನವನ್ನು ಸವಿದರು. ಕಾರ್ಯಕ್ರಮದ ಅಂಗವಾಗಿ ಶಿಶು ಮಂದಿರದ ಪುಟಾಣಿಗಳಿಂದ ಬಾಲಗೋಕುಲದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ಮನ ಸೆಳೆಯಿತು. ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ, ಕಾಂತಿಮಣಿ, ಚಂದ್ರಾವತಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು. ಹರಿಣಾಕ್ಷಿ ಉಳಿ ನಿರೂಪಿಸಿದರು.