ಆಲ್ದೂರುಮೂಡಿಗೆರ ತಾಲೂಕಿನ ಹಲವು ಕಡೆಗಳಲ್ಲಿ ಕಸದ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುವಂತೆ ಸ್ಥಳೀಯರಿಂದ ಒತ್ತಾಯ ಕೇಳಿ ಬರುತ್ತಿದೆ.

ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ಕಸದ ತ್ಯಾಜ್ಯ

ಕನ್ನಡಪ್ರಭ ವಾರ್ತೆ ಅಲ್ದೂರು

ಮೂಡಿಗೆರ ತಾಲೂಕಿನ ಹಲವು ಕಡೆಗಳಲ್ಲಿ ಕಸದ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುವಂತೆ ಸ್ಥಳೀಯರಿಂದ ಒತ್ತಾಯ ಕೇಳಿ ಬರುತ್ತಿದೆ.

ಹಳೆ ಮೂಡಿಗೆರೆ ಗ್ರಾಪಂ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ವೃತ್ತದ ಬಳಿ ಹಾದುಹೋಗುವ ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ಕಸದ ತ್ಯಾಜ್ಯಗಳನ್ನು ಸುರಿದಿದ್ದು, ಪಕ್ಕದಲ್ಲಿಯೇ ಪಂಚಾಯಿತಿಯಿಂದ ಕಸ ಸುರಿಯುವಂತವರಿಗೆ ₹10,000 ದಂಡ ಹಾಕಲಾಗುವುದು ಮತ್ತು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಮಾಹಿತಿ ಫಲಕ ಕೂಡ ಇದೆ ಆದರೂ ಕೂಡ ಫಲಕದ ಪಕ್ಕದಲ್ಲೇ ಕಸ ಸುರಿದಿರುವುದು ಬೇಸರ ತರಿಸಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅಲ್ತಾಫ್ ಬಿಳುಗುಳ ಮಾತನಾಡಿ ಸಿದ್ದಾರ್ಥ ವನ ಮತ್ತು ಅದರ ಪಕ್ಕದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಈ ಹಿಂದೆ ಕೆಲವು ಸಾಮಾಜಿಕ ಕಾರ್ಯಕರ್ತರು ಅದನ್ನು ಸ್ವಚ್ಛತೆ ಮಾಡಿದ್ದರು. ಪುನಃ ಅದೇ ಸ್ಥಳದಲ್ಲಿ ಕಸದ ತ್ಯಾಜ್ಯಸುರಿದಿರುವುದು ಖಂಡನೀಯ. ಪ್ರವಾಸಿಗರು ಯಾರೇ ಆಗಿರಲಿ ಜಿಲ್ಲೆಗೆ ಭೇಟಿ ನೀಡುವಾಗ ಸ್ವಚ್ಛತೆ ಕಾಪಾಡಬೇಕು ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಹಕರಿಸಲು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕಠಿಣ ನಿಯಮ ರೂಪಿಸ ಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸ್ಥಳೀಯರಾದ ಪ್ರವೀಣ್ ಪೂಜಾರಿ ಕಸದ ತ್ಯಾಜ್ಯದ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಮಾತ್ರವಲ್ಲದೆ ಕಸದ ತ್ಯಾಜ್ಯ ಎಸೆಯದಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಮತ್ತು ಹೊರ ಜಿಲ್ಲೆಗಳಿಂದ ಭೇಟಿ ಕೊಡುವ ಪ್ರವಾಸಿಗರಿಗೆ ಪ್ರಯಾಣಿ ಕರಿಗೆ ಮಾಹಿತಿ ತಲುಪುವಂತೆ ಸೂಚನಾ ಫಲಕ ಅಳವಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ...ಕೋಟ್...

15 ದಿನಗಳಿಗೆ ಒಮ್ಮೆ ಸ್ವಚ್ಛತೆ ಮಾಡಿಸುತ್ತಿದ್ದು, ಸಂಬಂಧಪಟ್ಟ ಸ್ಥಳದಲ್ಲಿ ಸಿಸಿ ಕ್ಯಾಮೆರಾ ವನ್ನು ಈ ಹಿಂದೆ ಅಳವಡಿಸ ಲಾಗಿತ್ತು ಅದನ್ನು ಕೆಲವು ಕಿಡಿಗೇಡಿಗಳು ಕೊಂಡೊಯ್ದಿದ್ದು, ಪುನಹ ವರ್ಗ ಒಂದರಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಅಳವಡಿ ಸಲು ಚಿಂತಿಸಲಾಗಿದೆ. ಸ್ವಚ್ಛ ಮಾಡಿಸಿದರು ಪ್ರಸ್ತುತ ವೃತ್ತ ಮತ್ತು ಬೀಜವಳ್ಳಿ ಗ್ರಾಮದ ಬಳಿ ಪ್ರವಾಸಿಗರು ಕಸದ ತ್ಯಾಜ್ಯಗಳನ್ನು ಹಿಗ್ಗಿಲ್ಲದೆ ಹಾಕುತ್ತಲೇ ಇರುತ್ತಾರೆ - ವೀಣಾ, ಪಿಡಿಒ, ಹಳೆ ಮೂಡಿಗೆರೆ ಗ್ರಾಪಂ