ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥಿಸಿ ಉರುಳು ಸೇವೆ

| Published : Apr 25 2024, 01:10 AM IST

ಸಾರಾಂಶ

ಮಂಡ್ಯ ಕ್ಷೇತ್ರ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಗೆಲುವಿಗಾಗಿ ಅಭಿಮಾನಿಗಳೊಂದಿಗೆ ಶ್ರೀ ರಂಗನಾಥಸ್ವಾಮಿಯ ಆಶೀರ್ವಾದ ಪಡೆದು, ಉರುಳು ಸೇವೆ ಸಲ್ಲಿಸಿದ್ದೇವೆ. ಎಚ್ಡಿಕೆ ಗೆಲುವಿನ ಭರವಸೆ ಇದೆ. ಅದೇ ರೀತಿ ಹೆಚ್ಚಿನ ಬಹುಮತದಿಂದ ಗೆದ್ದರೆ ಶ್ರೀರಂಗನಾಥನಿಗೆ 101 ಈಡುಗಾಗಿ ಸೇವೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಂಡ್ಯ ಲೋಕಸಭಾ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥಿಸಿ ಅಭಿಮಾನಿಗಳು ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದ ಮುಂಭಾಗ ಉರುಳು ಸೇವೆ ನಡೆಸಿದರು.

ಎಚ್.ಡಿ.ಕೆ ಗ್ರೂಪ್ ಸಂಘದ ಅಧ್ಯಕ್ಷ ಕಿರಂಗೂರು ಕುಮಾರಸ್ವಾಮಿ ನೇತೃತ್ವದಲ್ಲಿ ಅಭಿಮಾನಿಗಳು ದೇವಾಲಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿ ನಂತರ ಉರುಳು ಸೇವೆ ಮಾಡಿದರು.

ಈ ವೇಳೆ ಮಾತನಾಡಿದ ಕಿರಂಗೂರು ಕುಮಾರಸ್ವಾಮಿ, ಮಂಡ್ಯ ಕ್ಷೇತ್ರ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಗೆಲುವಿಗಾಗಿ ಅಭಿಮಾನಿಗಳೊಂದಿಗೆ ಶ್ರೀ ರಂಗನಾಥಸ್ವಾಮಿಯ ಆಶೀರ್ವಾದ ಪಡೆದು, ಉರುಳು ಸೇವೆ ಸಲ್ಲಿಸಿದ್ದೇವೆ. ಎಚ್ಡಿಕೆ ಗೆಲುವಿನ ಭರವಸೆ ಇದೆ. ಅದೇ ರೀತಿ ಹೆಚ್ಚಿನ ಬಹುಮತದಿಂದ ಗೆದ್ದರೆ ಶ್ರೀರಂಗನಾಥನಿಗೆ 101 ಈಡುಗಾಗಿ ಸೇವೆ ಮಾಡುವುದಾಗಿ ತಿಳಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್ ಮಾತನಾಡಿ, ಶ್ರೀರಂಗನಾಥಸ್ವಾಮಿ ಹಾಗೂ ಶ್ರೀರಂಗನಾಯಕಿ ಅಮ್ಮನವರ ಆಶೀರ್ವಾದ ಕುಮಾರಸ್ವಾಮಿ ಅವರ ಮೇಲಿರಲಿ ಎಂಬ ಉದ್ದೇಶದಿಂದ ಅಭಿಮಾನಿಗಳು ಉರುಳು ಸೇವೆ ಮಾಡಿದ್ದಾರೆ. ಪ್ರತಿ ತಾಲೂಕು, ಹಳ್ಳಿಗಳಲ್ಲಿ ಕುಮಾರಸ್ವಾಮಿ ಅವರನ್ನು ಬಹಳ ಆತ್ಮೀಯವಾಗಿ ಸ್ವಾಗತಿಸುತ್ತಿದ್ದು, ಪ್ರಸ್ತುತ ಜೆಡಿಎಸ್-ಬಿಜೆಪಿ ಎರಡು ಪಕ್ಷಗಳ ಅಲೆಯಿಂದಾಗಿ ಅವರು 2 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿ, ಕೇಂದ್ರ ಸಚಿವರಾಗಿ ಕ್ಷೇತ್ರದ ಅಭಿವೃದ್ದಿಗೆ ಮುಂದಾಗಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ಪುರಸಭಾ ಸದಸ್ಯರಾದ ಎಸ್. ಪ್ರಕಾಶ್, ಶ್ರೀನಿವಾಸ್, ಶ್ರೀ ಕೃಷ್ಣ ರಾಜೇಂದ್ರ ಸಹಕಾರ ಸಂಘದ ಅಧ್ಯಕ್ಷ ರಘು, ಕೃಷ್ಣಪ್ಪ, ಚಂದನ್, ನೆಲಮನೆ ಗುರುಪ್ರಸಾದ್, ಜಗಧೀಶ್, ಕುಮಾರ್, ಏಜಾಜ್‌ಪಾಷ, ಪಿಲಿಪ್ಸ್ ಸೇರಿದಂತೆ ಕುಮಾರಸ್ವಾಮಿ ಅಭಿಮಾನಿಗಳು, ಜಿಡಿಎಸ್-ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.