ಹಜರತ್‌ ಖಾಜಾ ಬಂದಾ ನವಾಜರ ಉರುಸ್‌ ಸಂಭ್ರಮ

| Published : May 27 2024, 01:02 AM IST

ಹಜರತ್‌ ಖಾಜಾ ಬಂದಾ ನವಾಜರ ಉರುಸ್‌ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಉರುಸ್‌ನಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಖಾಜಾರ ಭಕ್ತರು ಆಗಮಿಸಿದ್ದಾರೆ. ಉರುಸ್‌ ಅಂಗವಾಗಿ ಕಲಬುರಗಿಯಲ್ಲಿ ಕಳೆದ 2 ದಿನಗಳ ಹಿದೆಯೇ ಸಂದಲ್‌ ಮೆರವಣಿಗೆ ನಡೆದು ಗಮನ ಸೆಳೆಯಿತು

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರದಲ್ಲೀಗ ಆರೂವರೆ ಶತಮಾನಗಳ ಸೂಫಿ ಸಂತ ಹಜರತ್‌ ಖಾಜಾ ಬಂದೇ ನವಾಜರ ಉರುಸ್‌ ಸಂಭ್ರಮ ಕಳೆಗಟ್ಟಿದೆ.

ಉರುಸ್‌ನಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಖಾಜಾರ ಭಕ್ತರು ಆಗಮಿಸಿದ್ದಾರೆ. ಉರುಸ್‌ ಅಂಗವಾಗಿ ಕಲಬುರಗಿಯಲ್ಲಿ ಕಳೆದ 2 ದಿನಗಳ ಹಿದೆಯೇ ಸಂದಲ್‌ ಮೆರವಣಿಗೆ ನಡೆದು ಗಮನ ಸೆಳೆಯಿತು.

ನಗರದ ಜಗತ್‌ ವೃತ್ತದಲ್ಲಿರುವ ಮೆಹೆಬೂಬ್‌ ಗುಲಷನ್‌ ಸಾರ್ವಜನಿಕ ಉದ್ಯಾನದಿಂದ ಗಂಧದ ಮೆರವಣಿಗೆ ಶುರುವಾಗಿ ದರ್ಗಾದ ಗ್ಯಾರಾ ಸಿಡಿವರೆಗೂ ತಲುಪುತ್ತದೆ. ಇದರಲ್ಲಿ ಸಾವಿರಾರು ಜನ ಪಾಲಗೊಂಡು ಖಾಜಾ ಬಂದಾನವಾಜರಿಗೆ ಪ್ರಾರ್ಥಿಸುತ್ತಾರೆ.

ಗಂಧದ ಮೆರವಣಿಗೆಗೆ ಉದ್ಯಾನವನದಲ್ಲಿ ಸಜ್ಜಾದ ನಶೀನ ಡಾ.ಸಯ್ಯದ ಶಾಹ ಖುಸ್ರೋ ಹುಸ್ಸೇನಿ ಚಾಲನೆ ನೀಡಿದರು. ಜಗತ್ ಸರ್ಕಲ್‌ಗೆ, ಸೂಪರ್ ಮಾರ್ಕೆಟ, ಚೌಕ ಸರ್ಕಲ್‌ನಿಂದ ಗಣೇಶ್ ಮಂದಿರ, ಬಹಮನಿ ಚೌಕ ಮತ್ತು ಹಫ್ತ್ ಗುಂಬದ ಮಾರ್ಗವಾಗಿ ದರ್ಗಾ ಶರೀಫ್‌ಗೆ ಗಂಧದ ಮೆರವಣಿಗೆ ತಲುಪಿದಾಗ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಗ್ಯಾರಾ ಸಿಡಿಯಲ್ಲಿ ಗಂಧ್ ತಲುಪುದ್ ಸಮಯದಲ್ಲಿ ಜನಾಬ್ ಸೈಯದ್ ಮುಹಮ್ಮದ್ಲಿ ಅಲ್ ಹುಸೇನಿ, ಜನಾಬ್ ಡಾ ಸೈಯದ್ ಮುಸ್ತಫಾ ಅಲ್ ಹುಸೇನಿ, ಜನಾಬ್ ಸೈಯದ್ ಷಾ ಹಸನ್ ಶಬ್ಬೀರ್ ಹುಸೇನಿ ಸಾಹೇಬ್ ಸಜ್ಜಾದ ನಹಿಂ ರೌಜಾ ಖುರ್ದ್, ಜನಾಬ್ ಸೈಯದ್ ಶಾ ತಕಿವುಲ್ಲಾ ಹುಸೇನಿ, ಜನಾಬ್ ಮೀರ್ ಸದರುದ್ದೀನ್ ಅಲಿ ಖಾನ್, ಜನಾಬ್ ಮೀರ್ ಸದರುದ್ದೀನ್ ಅಲಿ ಖಾನ್ ಶರೀಫ್ ಮತ್ತು ಇತರರು ಹಾಜರಿದ್ದರು.

ದರ್ಗಾದ ಸಮಾಖಾನದಲ್ಲಿ ನಡೆದ ಸೆಮಿನಾರ ಕಾರ್ಯಕ್ರಮದಲ್ಲಿ ಉಪಸ್ಥಿತಿ ಗಣ್ಯರಿಂದ ಕಳೆದ ವರ್ಷದ ಸೆಮಿನಾರನ ಭಾಷಣ ಒಳಗೊಂಡ ''''‘ಶಹಾಬಾಜ ಬುಕ’ ಬಿಡುಗಡೆ ಮಾಡಿ ಮಾತನಾಡಿದ ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಅರೇಬಿಕ್ ವಿಭಾಗದ ಮಾಜಿ ಮುಖ್ಯಸ್ಥರಾದ ಮುಸ್ತಫಾ ಶರೀಫ್ ಅವರು ಹಜರತ್ ಖಾಜಾ‌ ಬಂದಾ ನವಾಜ್ (ರ.ಅ) ಕುರಿತು ಹೇಳಿದರು.

ದೊಡ್ಡವರಿಗೆ ಗೌರವಿಸುವುದು, ಸಮಾನ ವಯಸ್ಕರಲ್ಲಿ ಮರ್ಯಾದೆ ಮತ್ತು ಪ್ರೀತಿಯ ಮನೋಭಾವ ಮತ್ತು ಚಿಕ್ಕವರಲ್ಲಿ ಶಿಷ್ಟಚಾರದ ಪದ್ಧತಿ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು. ಅಜ್ಮೀರನ ಖಾಜಾ ಗರೀಬ್ ನವಾಜ್ ದರ್ಗಾದ ಪೀಠಾಧಿಪತಿಗಳಾದ ಸಜ್ಜದೇ ನಶೀನರ ಸುಪುತ್ರ ಹಜರತ್ ಫಜಲೂಲ್ ಅಮೀನ್ ಸಾಹೇಬ್ ಅವರು ಕಾರ್ಯಕ್ರಮದ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು.

ಉರ್ದು ಕವಿ ತಯ್ಯಬ್ ಯಾಕೂಬಿ ನಾಥ ಪ್ರಸ್ತುತ ಪಡಿಸಿದರು. ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಸಮ ಕುಲಾಧಿಪತಿ ಸಯ್ಯದ ಮುಹಮ್ಮದ ಅಲಿ ಅಲ್ ಹುಸ್ಸೇನಿ ಗಣ್ಯರನ್ನು ಸ್ವಾಗತಿಸಿದರು. ಜನಾಬ್ ಹಮೀದ್ ಅಕ್ಮಲ್ ಹಾಗೂ ಕೆಬಿಎನ್ ದರ್ಗಾದ ಕಾರ್ಯದರ್ಶಿ ಅಬ್ದುಲ್ ಬಸೀದ ಉರ್ದು ಕವಿತೆ ವಾಚಿಸಿದರು. ಅಬ್ದುಲ್ ಬಸೀದ ವಂದಿಸಿದರು. ಕೆಬಿಎನ ವಿಶ್ವ ವಿದ್ಯಾಲಯದ ಉರ್ದು ವಿಭಾಗದ ಮುಖ್ಯಸ್ಥ ಡಾ. ಹಮಿದ ಅಕ್ಬರ ನಿರೂಪಿಸಿದರು.