ಉರುಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

| Published : Oct 12 2025, 01:02 AM IST

ಸಾರಾಂಶ

ಎಮ್ಮೆಮಾಡುವಿನ 2026ರ ಸಾಲಿನ ಉರುಸ್‌ ಕಾರ್ಯಕ್ರಮ ಏ. 17ರಿಂದ 24ರ ವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇತಿಹಾಸ ಪ್ರಸಿದ್ಧ ಎಮ್ಮೆಮಾಡು ವಿನ 2026ರ ಸಾಲಿನ ಉರುಸ್ ಕಾರ್ಯಕ್ರಮ ಏಪ್ರಿಲ್ 17ರಿಂದ 24ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಮರ್ಕಜ್ ಸಂಸ್ಥೆಯಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಹಾಗೂ ಕೊಡಗು ಜಿಲ್ಲಾ ಖಾಜಿಗಳಾದ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯರ್ ನೆರವೇರಿಸಿದರು.

ಈ ಸಂದರ್ಭ ಜಮಾಯತ್ ಅಧ್ಯಕ್ಷರಾದ ಹುಸೇನ್ ಸಖಾಫಿ, ಮಾಜಿ ಅಧ್ಯಕ್ಷರಾದ ಅಬೂಬಕರ್ , ಮಜೀದ್ ಕೆ. ಎಸ್, ಹನಿಫಾ, ಅಶ್ರಫ್ ಸಿ.ಎಂ, ಹ್ಯಾರಿಸ್, ಯೂಸುಫ್ ಉಪಸ್ಥಿತರಿದ್ದರು.

--------------------------------------------------------------------------------------

ಮಾದಾಪುರ ಗ್ರಾ.ಪಂ. ನೂತನ ಅಭಿವೃದ್ಧಿಅಧಿಕಾರಿಯಾಗಿ ರವಿ ಅಧಿಕಾರ ಸ್ವೀಕಾರ

ಸುಂಟಿಕೊಪ್ಪ: ಮಾದಾಪುರ ಗ್ರಾಮ ಪಂಚಾಯಿತಿಯ ನೂತನ ಅಭಿವೃದ್ಧಿ ಅಧಿಕಾರಿಯಾಗಿ ರವಿ ಅಧಿಕಾರ ವಹಿಸಿಕೊಂಡರು.ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ರವಿ ಅವರನ್ನು ವರ್ಗಾವಣೆಗೊಳಿಸಿ ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚುವರಿ ಪಿಡಿಓ ಆಗಿದ್ದ ಗೂಳಪ್ಪ ಕೂತಿನ ಅವರಿಂದ ರವಿ ಅಧಿಕಾರ ವಹಿಸಿಕೊಂಡಿದ್ದಾರೆ.