ಉತ್ತಮ ಆರೋಗ್ಯಕ್ಕೆ ಆಯುರ್ವೇದ ಬಳಸಿ: ಡಾ. ಉದಯಕುಮಾರ್‌ ಶೆಟ್ಟಿ

| Published : Sep 03 2025, 01:02 AM IST

ಉತ್ತಮ ಆರೋಗ್ಯಕ್ಕೆ ಆಯುರ್ವೇದ ಬಳಸಿ: ಡಾ. ಉದಯಕುಮಾರ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ ಶಂಕರಪುರ ಮತ್ತು ಇನ್ನಂಜೆ ಮಹಿಳಾ ಮಂಡಲ ಇನ್ನಂಜೆ ಇದರ ಆಶ್ರಯದಲ್ಲಿ ಭಾನುವಾರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾಲಯದಲ್ಲಿ ‘ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿರ್ವ: ಇಲ್ಲಿನ ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ ಶಂಕರಪುರ ಮತ್ತು ಇನ್ನಂಜೆ ಮಹಿಳಾ ಮಂಡಲ ಇನ್ನಂಜೆ ಇದರ ಆಶ್ರಯದಲ್ಲಿ ಭಾನುವಾರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾಲಯದಲ್ಲಿ ‘ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ’ವನ್ನು ಆಯೋಜಿಸಲಾಗಿತ್ತು.

ಶಿಬಿರವನ್ನು ಕಟಪಾಡಿಯ ಖ್ಯಾತ ವೈದ್ಯ ಡಾ.ಉದಯಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ನಮ್ಮ ಆರೋಗ್ಯವನ್ನು ಶಾಶ್ವತವಾಗಿ ಕಾಪಾಡಲು ಆಯುರ್ವೇದ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ. ಆಲೋಪತಿಯಲ್ಲಿ ರೋಗ ತಕ್ಷಣ ಗುಣವಾಗುತ್ತದೆ. ಆದರೆ ಅಯುರ್ವೇದದಲ್ಲಿ ನಿರಂತರ ಆರೋಗ್ಯವಾಗಿರಲು ಬೇಕಾದ ಚಿಕಿತ್ಸೆ, ಔಷಧಿಗಳು ಹಾಗೂ ಜೀವನಕ್ರಮದ ಪಾಠ ಸಿಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಅಯುರ್ವೇದ ಬಳಸಿ ಎಂದು ತಿಳಿಸಿದರು.ಕೃಷ್ಣವೇಣಿ ಆಯುರ್ವೇದ ಮತ್ತು ಆಶ್ರಯಧಾಮದ ಮುಖ್ಯ ವೈದಾಧಿಕಾರಿ ಡಾ. ಕೆ.ಲಕ್ಷ್ಮೀಶ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿ ರೋಗ ಬಂದರೆ ಮಾತ್ರ ಬರುವುದಲ್ಲ. ಉತ್ತಮ ಆರೋಗ್ಯಕ್ಕಾಗಿ ಬನ್ನಿ. ಪೂರಕವಾದ ಎಲ್ಲಾ ರೀತಿಯ ಸೌಲಭ್ಯಗಳ ವ್ಯವಸ್ಥೆಯೂ ಇಲ್ಲಿ ಇದೆ.ಶಿಬಿರದ ಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಕರೆಯಿತ್ತರು.ಇನ್ನಂಜೆ ಮಹಿಳಾ ಮಂಡಳದ ಅಧ್ಯಕ್ಷೆ ಶ್ವೇತಾ ಎಲ್.ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಆಯುರ್ವೇದ ಚಿಕಿತ್ಸಾ ಹಾಗೂ ಸ್ವಾಸ್ಥ್ಯ ಕೇಂದ್ರ ಕಾರ್ಯನಿರ್ವಹಾಣಾಧಿಕಾರಿ ಡಾ.ರಮೇಶ ಮಿತ್ತಾಂತಾಯ, ಟ್ರಸ್ಟಿ ಪದ್ಮನಾಭ ಭಟ್, ಗೌರವ ಸಲಹೆಗಾರರಾದ ಸಕ್ಕೂಬಾಯಿ ಇನ್ನಂಜೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಇದರ ಟ್ರಸ್ಟಿ ಸಿಎ. ಹರಿದಾಸ ಭಟ್ ವಹಿಸಿದ್ದರು. ಕೇಂದ್ರದ ತನುಜಾ ನಿರೂಪಿಸಿದರು. ಶ್ವೇತಾ ಧನ್ಯವಾದವಿತ್ತರು. ಶಿಬಿರದಲ್ಲಿ ಮುನಿಯಾಲು ಆಯುರ್ವೇದಿಕ್ ಆಸ್ಪತ್ರೆ ಮಣಿಪಾಲ ಇಲ್ಲಿನ ತಜ್ಞವೈದ್ಯಾದಿಕಾರಿಗಳು ಭಾಗವಹಿಸಿದ್ದು, ೮೪ ಶಿಬಿರಾರ್ಥಿಗಳು ಪ್ರಯೋಜನ ಪಡೆದುಕೊಂಡರು