ಸಾರಾಂಶ
ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಘೋಷಣೆಯಾದ ಫಿಟ್ ಇಂಡಿಯಾ ಅನುಷ್ಠಾನಗೊಳಿಸಲಾಗಿದೆ. ನಗರದ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಫಿಟ್ ಇಂಡಿಯಾ ಅಭಿಯಾನದ ಭಾಗವಾಗಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಸೈಕಲ್ ಬಳಸುವುದು ಎಂದರೆ ನಾವು ಪ್ರಕೃತಿಯೊಂದಿಗೆ ಜೀವಿಸುತ್ತೇವೆ ಮತ್ತು ಪ್ರಕೃತಿಯನ್ನು ಆಧರಿಸುತ್ತೇವೆ ಎಂದರ್ಥ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಪ್ರಧಾನ ಅಂಚೆ ಕಚೇರಿಯ ಸಂಯುಕ್ತಾಶ್ರಯದಲ್ಲಿ ‘ಫಿಟ್ ಇಂಡಿಯಾ’ ಅಭಿಯಾನ ನಿಮಿತ್ತ ಆಯೋಜಿಸಿದ ಸೈಕಲ್ ಜಾಥಾದಲ್ಲಿ ಶಾಖೆಯ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಸೈಕಲ್ ಸವಾರಿ ನಡೆಸುವ ಮೂಲಕ ಫಿಟ್ ಇಂಡಿಯಾದ ಬಗ್ಗೆ ಜನ ಜಾಗೃತಿ ಮೂಡಿಸಿದರು.ಸೈಕಲ್ ಜಾಥಾ ಅಂಚೆ ಕಚೇರಿಯಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಎಇಎಸ್ ನ್ಯಾಷನಲ್ ಕಾಲೇಜಿನವರೆಗೆ ಸಾಗಿ ನಂತರ ಕೇಂದ್ರ ಸ್ಥಾನಕ್ಕೆ ಹಿಂತಿರುಗಿದರು.ಆರೋಗ್ಯ ರಕ್ಷಣ ಉದ್ದೇಶ
ಈ ಸಂದರ್ಭದಲ್ಲಿ ಪೋಸ್ಟ್ ಮಾಸ್ಟರ್ ಗುರುಪ್ರಸಾದ್ ಮಾತನಾಡಿ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಘೋಷಣೆಯಾದ ಫಿಟ್ ಇಂಡಿಯಾ ಅನುಷ್ಠಾನಗೊಳಿಸಲಾಗಿದೆ. ನಗರದ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಫಿಟ್ ಇಂಡಿಯಾ ಅಭಿಯಾನದ ಭಾಗವಾಗಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಹಸಿರಿಗಾಗಿ ಸೈಕಲ್ ಬಳಸಿ, ಸುಲಭ ಸಂಚಾರಕ್ಕಾಗಿ ಸೈಕಲ್ ತುಳಿಯಿರಿ, ಇಂದು ಸೈಕಲ್ ತುಳಿದರೆ ನಾಳೆ ಉತ್ತಮ ಆರೋಗ್ಯ ಎಂಬ ಆರೋಗ್ಯ ಕಾಪಾಡಿಕೊಳ್ಳಲು ಹಲವು ಘೋಷವಾಕ್ಯಗಳನ್ನು ಕೂಗುತ್ತ ಅಂಚೆ ಕಚೇರಿಯ ಸಿಬ್ಬಂಧಿ ಮತ್ತು ಸಾರ್ವಜನಿಕರು ಈ ಜಾಥಾ ನಡೆಸಿದರು.ಸೈಕಲ್ ಪ್ರಕೃತಿಯ ಸಂಕೇತಸೈಕಲ್ ಎನ್ನುವುದು ಕೇವಲ ದೈಹಿಕ ವ್ಯಾಯಾಮದ ಸಾಧನವಲ್ಲ. ಅದು ಪ್ರಕೃತಿಯ ಸಂಕೇತ. ಸೈಕಲ್ ಬಳಸುವುದು ಎಂದರೆ ನಾವು ಪ್ರಕೃತಿಯೊಂದಿಗೆ ಜೀವಿಸುತ್ತೇವೆ ಮತ್ತು ಪ್ರಕೃತಿಯನ್ನು ಆಧರಿಸುತ್ತೇವೆ ಎಂದು ಅರ್ಥ ಎಂದು ತಿಳಿಸಿದರು.ಈ ಜಾಥಾದಲ್ಲಿ ಗೌರಿಬಿದನೂರು ಅಂಚೆ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಕೆ. ಹನುಮಂತಯ್ಯ, ಪೋಸ್ಟ್ ಮಾಸ್ಟರ್ ಗುರುಪ್ರಸಾದ್ ಹಾಗೂ ಎಲ್ಲಾ ಅಂಚೆ ಕಚೇರಿಯ ಎಲ್ಲಾ ಸಿಬ್ಬಂದಿ ಭಾಗವಹಿಸಿದ್ದರು.