ರಾಜ್ಯ ಮಟ್ಟದ ಆಲೂಗಡ್ಡೆ ಮೇಳದ ಭಿತ್ತಿಪತ್ರ ಬಿಡುಗಡೆ ಸಮಾರಂಭದಲ್ಲಿ ಬಿತ್ತಿಪತ್ರ ಪ್ರದರ್ಶಿಸಿ ಶಾಸಕ ರೇವಣ್ಣ ಮಾತನಾಡಿದರು. ಆಲೂಗಡ್ಡೆ ಬೆಳೆಯಿಂದ ನಷ್ಟ ಅನುಭವಿಸಿದ ರೈತರು ಶುಂಠಿ ಬೆಳೆದರು ಆದರೆ ಕಳೆದ ವರ್ಷ ಬೆಲೆ ಕುಸಿತ ಮತ್ತು ಮಳೆಯಿಂದಾಗಿ ರೈತರು ಸರ್ವನಶವಾದರು. ಈ ವರ್ಷ ೨.೫ ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬೆಳೆದಿದ್ದಾರೆ, ಮಾರಲು ನಮ್ಮ ತಾಲೂಕಿನಲ್ಲಿ ಖರೀದಿ ಕೇಂದ್ರವನ್ನೇ ತೆರೆದಿಲ್ಲ. ರೈತರು ಬೆಳೆಯನ್ನು ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ತೆರೆಯುತ್ತಾರೆ. ಈ ರೀತಿಯಾಗಬಾರದು. ಇದರ ಸಂಬಂಧ ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಜಿಲ್ಲೆಯಲ್ಲಿ ಅಂಗಮಾರಿ ರೋಗದಿಂದಾಗಿ ಆಲೂಗಡ್ಡೆ ಬೆಳೆ ಕುಂಠಿತವಾಗಿದೆ. ರೈತರ ಸಮಸ್ಯೆಗೆ ಸ್ಪಂದಿಸುವ ಜತೆಗೆ ರೋಗವನ್ನು ಉಚ್ಛಾಟನೆ ಮಾಡುವ ಸಲುವಾಗಿ ಭೂಮಿಯ ಹದ ಮಾಡುವ ಸಲುವಾಗಿ ಸರ್ಕಾರ, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಖರ್ಚು ಮಾಡಿ, ಅಗತ್ಯ ಕೈಗೊಳ್ಳಬೇಕು. ಎಲ್ಲೆಲ್ಲೂ ಲೂಟಿ ಮಾಡಿದ್ದೀರಲ್ಲಾ, ಅದರ ಬದಲು ಖರ್ಚು ಮಾಡಿ ಎಂದು ಶಾಸಕ ಎಚ್.ಡಿ. ರೇವಣ್ಣ ಸಲಹೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜನೆ ಮಾಡಿದ್ದ ರಾಜ್ಯ ಮಟ್ಟದ ಆಲೂಗಡ್ಡೆ ಮೇಳದ ಭಿತ್ತಿಪತ್ರ ಬಿಡುಗಡೆ ಸಮಾರಂಭದಲ್ಲಿ ಬಿತ್ತಿಪತ್ರ ಪ್ರದರ್ಶಿಸಿ ಮಾತನಾಡಿದರು. ಆಲೂಗಡ್ಡೆ ಬೆಳೆಯಿಂದ ನಷ್ಟ ಅನುಭವಿಸಿದ ರೈತರು ಶುಂಠಿ ಬೆಳೆದರು ಆದರೆ ಕಳೆದ ವರ್ಷ ಬೆಲೆ ಕುಸಿತ ಮತ್ತು ಮಳೆಯಿಂದಾಗಿ ರೈತರು ಸರ್ವನಶವಾದರು. ಈ ವರ್ಷ ೨.೫ ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬೆಳೆದಿದ್ದಾರೆ, ಮಾರಲು ನಮ್ಮ ತಾಲೂಕಿನಲ್ಲಿ ಖರೀದಿ ಕೇಂದ್ರವನ್ನೇ ತೆರೆದಿಲ್ಲ. ರೈತರು ಬೆಳೆಯನ್ನು ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ತೆರೆಯುತ್ತಾರೆ. ಈ ರೀತಿಯಾಗಬಾರದು. ಇದರ ಸಂಬಂಧ ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ರೈತರು ೨.೫ ಲಕ್ಷ ಹೆಕ್ಟೇರ್ ಆಲೂಗಡ್ಡೆ ಬೆಳೆ ಬೆಳೆಯುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ೬ ರಿಂದ ೭ ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದಾರೆ. ಹಿಂದೆ ಆಲೂಗಡ್ಡೆ ಜಿಲ್ಲೆಯ ಮುಖ್ಯ ಬೆಳೆಯಾಗಿತ್ತು ಜತೆಗೆ ಕಾರಾಗಿ ಬೆಳೆಯಲಾಗುತ್ತಿತ್ತು, ಆಲೂಗೆಡ್ಡೆಗೆ ಹಾಕಿದ ಗೊಬ್ಬರದಲೇ ರಾಗಿ ಬೆಳೆಯೂ ಬೆಳೆಯುತ್ತಿತ್ತು. ನಾನು ೧೫ರಿಂದ ೨೦ ಲೋಡ್ ಆಲೂಗಡ್ಡೆ ಬೆಳೆಯುತ್ತಿದ್ದೆ ಜತೆಗೆರ ೨೦೦ರಿಂದ ೩೦೦ ಚೀಲ ಕಾರಾಗಿ ಬೆಳೆಯುತ್ತಿದ್ದೆ ಎಂದು ಹಿಂದಿನ ಆಲೂಗಡ್ಡೆ ಹಾಗೂ ರಾಗಿಯ ಇಳುವರಿ ಬಗ್ಗೆ ಮಾಹಿತಿ ನೀಡಿ, ಇಂದಿನ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಾಗೇಶ್ ರಾವ್ ಮಾತನಾಡಿ, ಜ.೨೬ರಿಂದ ಎರಡು ದಿನ ನಡೆಯುವ ಆಲೂಗೆಡ್ಡೆ ಮೇಳ ೨೦೨೬ರಲ್ಲಿ ರೈತರಿಗೆ ಬಹಳ ಉಪಯುಕ್ತ ಮಾಹಿತಿ ದೊರೆಯಲಿದೆ. ಆಲೂಗಡ್ಡೆ ಬೆಳೆಗೆ ಸಂಬಂಧಿಸಿದ ಇತರೆ ವಿಷಯಗಳ ಕುರಿತು ಚರ್ಚೆ ಹಾಗೂ ವಿಚಾರ ವಿನಿಮಯ ಮಾಡಲಾಗುತ್ತದೆ. ವಿನೂತನ ಬೇಸಾಯ ಕ್ರಮಗಳು, ಹೊಸ ತಳಿಗಳು, ಸುಧಾರಿತ ಸಸ್ಯ ಸಂರಕ್ಷಣಾ ಔಷಧಿಗಳು ಹಾಗೂ ವಿಧಾನಗಳು, ನಾಟಿ ಮತ್ತು ಕಟ್ಟಾವು ಯಂತ್ರೋಪಕರಣಗಳ ಪರಿಚಯ ಮಾಡಲಾಗುತ್ತದೆ. ರೈತರು, ರೈತರ ಉತ್ಪಾದಕ ಸಂಸ್ಥೆಗಳು ಹಾಗೂ ಬೀಜದ ಆಲೂಗೆಡ್ಡೆ ಉತ್ಪಾದಕರು, ಮಾರಾಟಗಾರರು, ಸಸ್ಯ ಸಂರಕ್ಷಣಾ ಔಷಧಿ ಕಂಪನಿಗಳು, ಸಂಸ್ಕರಣಾ ಕೈಗಾರಿಕೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಆಲೂಗೆಡ್ಡೆ ಮೇಳದ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ಶಿರೆಸ್ತೆದಾರ್ ವೆಂಕಟೇಶ್, ಹಳೇಕೋಟೆ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಬೋರೇಗೌಡ, ಕಸಬಾ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ರಂಗಸ್ವಾಮಿ ಎಂ.ಸಿ., ಹಳ್ಳಿಮೈಸೂರು ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ರವಿಕುಮಾರ್ ಹಾಗೂ ರವೀಶ್ ಇತರರು ಇದ್ದರು.