ಸಾರಾಂಶ
- ಡ್ರೋನ್ ಮೂಲಕ ನ್ಯಾನೊ ಯೂರಿಯಾ ಸಿಂಪರಣೆಗೆ ಗಂಗಾಧರ ಸ್ವಾಮಿ ಚಾಲನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಹರಳು ರೂಪದ ಯಾರಿಯಾ ಬದಲಾಗಿ ನ್ಯಾನೊ ಯೂರಿಯಾವನ್ನು ಬೆಳೆಗಳಿಗೆ ಬಳಸುವ ಮೂಲಕ ಇಳುವರಿ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಬೆಳೆಗಳಿಗೆ ಕಾಡುವ ರೋಗ, ಕೀಟಬಾಧೆಯನ್ನು ಕೊನೆಗಾಣಿಸಲು ರೈತರು ಸಾಮೂಹಿಕವಾಗಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಹೇಳಿದರು.
ತಾಲೂಕಿನ ತುಂಬಿಗೆರೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕೃಷಿ ಇಲಾಖೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತುಂಬಿಗೆರೆ ಹಾಗೂ ಇಪ್ಕೋ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೊ ಯೂರಿಯಾ ಡ್ರೋನ್ ಮೂಲಕ ಸಿಂಪರಣೆ ಮಾಡುವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ನ್ಯಾನೊ ಯೂರಿಯಾ ಬಳಕೆಗೆ ರೈತರು ಸ್ವಪ್ರೇರಣೆಯಿಂದ ಮುಂದಾಗಲಿ. ನ್ಯಾನೊ ಯೂರಿಯಾ ಬೆಳೆಗಳಿಗೆ ಸಿಂಪಡಿಸಿದ 4 ಗಂಟೆಯಲ್ಲೇ ಹೀರಿಕೊಳ್ಳುವ ಸಾಮರ್ಥ್ಯವಿದೆ. ಶೇ.80ರಷ್ಟು ಬೆಳೆಗಳಿಗೆ ಯೂರಿಯಾ ಸಿಗುತ್ತದೆ ಎಂದರು.ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರಸ್ವಾಮೀಜಿ ಮಾತನಾಡಿ, ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೊ ಯೂರಿಯಾವನ್ನು ಶ್ರೀಮಠದ 14 ಎಕರೆ ಮೆಕ್ಕೆಜೋಳದ ಬೆಳೆಗೆ ಈಗಾಗಲೇ ಸಿಂಪರಣೆ ಮಾಡಲಾಗಿದೆ. ಬೆಳೆಯು ಉತ್ಕೃಷ್ಟವಾಗಿ ಬೆಳೆದುನಿಂತಿದೆ. ರೈತರು ನ್ಯಾನೊ ಯೂರಿಯಾ ಬಳಸಬೇಕು. ಮೆಕ್ಕೆಜೋಳ ಬೆಳೆಯಲ್ಲಿ ಈಗೀಗ ಮುಳ್ಳುಸಜ್ಜೆ ಹೆಚ್ಚಾಗಿದ್ದು, ರಾಗಿ, ತೊಗರಿ, ಇತರೆ ಬೆಳೆ ಪರಿವರ್ತನೆ ಮಾಡಿ ಬೆಳೆ ಬೆಳೆಯಬೇಕು. ಆಗ ಇಂತಹ ಸಮಸ್ಯೆ ಎದುರಾಗುವುದಿಲ್ಲ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಜಿಯಾವುಲ್ಲಾ ಮಾತನಾಡಿದರು. ಉಪ ಕೃಷಿ ನಿರ್ದೇಶಕ ಎಸ್.ಅಶೋಕ, ಸಹಾಯಕ ಕೃಷಿ ನಿರ್ದೇಶಕ ಡಿ.ಎಂ.ಶ್ರೀಧರಮೂರ್ತಿ, ತಹಶೀಲ್ದಾರ ಡಾ.ಅಶ್ವಥ್, ಕೃಷಿ ಅಧಿಕಾರಿ ಆರ್.ಶ್ರೀನಿವಾಸ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಶಿವಣ್ಣ, ಹೊನ್ನೂರು ಮುನಿಯಪ್ಪ, ನಾಗರಾಜ, ಇಪ್ಕೋ ಸಂಸ್ಥೆ ಅಧಿಕಾರಿ ವಿನಯ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಪಿ. ನುಲಿಯ ಚಂದಯ್ಯ, ಉಪಾಧ್ಯಕ್ಷ ಬಿ.ವಿ.ಶೀಲಾ, ಎಚ್.ಬಿ.ಭೂಮೇಶ್ವರಪ್ಪ, ಇಫ್ಕೋ ಆರ್‌ಜಿಬಿ ಸದಸ್ಯರು, ಅಣಜಿ ಚಂದ್ರಣ್ಣ, ಗ್ರಾಪಂ ಸದಸ್ಯರಾದ ಎಚ್.ವಿ.ರೇವಣಸಿದ್ದಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರುಗಳು, ರೈತರು ಹಾಗೂ ಮಹಿಳೆಯರು ಇದ್ದರು.ತುಂಬಿಗೆರೆ ಗ್ರಾಮದ ರೈತ ಎಸ್.ಎಸ್.ಕೆಂಚವೀರಪ್ಪ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆಗೆ ಹರಳು ರೂಪದ ಯೂರಿಯಾ ಬದಲಾಗಿ ಡ್ರೋನ್ ಮುಖಾಂತರ ನ್ಯಾನೊ ಯೂರಿಯಾ ಸಿಂಪರಣೆ ಆಂದೋಲನ ಪ್ರಾರಂಭಿಸಿ, ಪ್ರಾತ್ಯಕ್ಷಿಕೆ ನಡೆಸಲಾಯಿತು.
- - --1ಕೆಡಿವಿಜಿ11, 12.ಜೆಪಿಜಿ:
ಡ್ರೋನ್ ಬಳಸಿ ನ್ಯಾನೊ ಯೂರಿಯಾ ಸಿಂಪರಣೆ ಆಂದೋಲನಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಚಾಲನೆ ನೀಡಿದರು.