ಸಾರಾಂಶ
ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದ ಎರಡನೇ ದಿನ ನಡೆದ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರದಲ್ಲಿ ಮಂಜುಳಾ ಭೀಮರಾವ್ ಭಾಗವಹಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮನೆಯಲ್ಲಿ ಇರುವಂತಹ ವಿವಿಧ ರೀತಿಯ ವಸ್ತುಗಳನ್ನು ಬಳಕೆ ಮಾಡುವ ಮೂಲಕ ನಮಗೆ ಅಗತ್ಯವಾಗಿ ಬೇಕಾಗುವ ವಿವಿಧ ರೀತಿಯ ವಸ್ತುಗಳನ್ನು ತಯಾರಿ ಮಾಡಿಕೊಳ್ಳುವುದರ ಮೂಲಕ ಸ್ವದೇಶಿ ವಸ್ತುಗಳ ಬಳಕೆಯನ್ನು ಮಾಡಬೇಕಿದೆ ಎಂದು ಮಂಜುಳಾ ಭೀಮರಾವ್ ತಿಳಿಸಿದರು.ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದ ಎರಡನೇ ದಿನವಾದ ಗುರುವಾರ ನಡೆದ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಮಾನದಲ್ಲಿ ಬಹುತೇಕ ಜನತೆ ಅಂಗಡಿಯಲ್ಲಿ ತಯಾರಾದ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ ನಮ್ಮ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ವಿವಿಧ ರೀತಿಯ ವಸ್ತುಗಳನ್ನು ತಯಾರು ಮಾಡಬಹುದಾಗಿದೆ. ಅದರೆ ಇದಕ್ಕೆ ಯಾರೂ ಸಹ ಮನಸ್ಸು ಮಾಡುತ್ತಿಲ್ಲ. ನಾವುಗಳು ಸಾಧ್ಯವಾದಷ್ಟು ಅಂಗಡಿಯಿಂದ ವಸ್ತುಗಳನ್ನು ತರದೆ ನಮ್ಮ ಮನೆಯಲ್ಲಿಯೇ ಇರುವoತಹ ವಸ್ತುಗಳನ್ನು ಬಳಕೆ ಮಾಡಿಕೊಂಡು ನಮಗೆ ಅಗತ್ಯವಾಗಿ ಬೇಕಾದ ವಸ್ತುಗಳನ್ನು ನಿರ್ಮಾಣ ಮಾಡಿಕೊಳ್ಳಬೇಕಿದೆ ಎಂದರು.ಪ್ರಕೃತಿ ನಮಗೆ ಬೇಕಾದ ಎಲ್ಲಾ ರೀತಿಯ ವಸ್ತುಗಳನ್ನು ನೀಡಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ನಮ್ಮ ದಿನ ನಿತ್ಯದ ವಸ್ತುಗಳನ್ನು ನಿರ್ಮಾಣ ಮಾಡುವುದರ ಮೂಲಕ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವುದನ್ನು ಕಲಿಯಬೇಕಿದೆ.ಹಿಂದಿನ ಕಾಲದವರು ಯಾರೂ ಸಹ ಅಂಗಡಿಗಳಿಂದ ವಸ್ತುಗಳನ್ನು ಖರೀದಿ ಮಾಡುತ್ತಿರಲಿಲ್ಲ. ಎಲ್ಲವನ್ನು ಸಹ ಮನೆಯಿಂದಲೇ ತಯಾರು ಮಾಡಿಕೊಳ್ಳುತ್ತಿದ್ದರು. ಆದರೆ ಕಾಲ ಬದಲಾದಂತೆ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳುತ್ತ ವಿವಿಧ ಕಂಪನಿಗಳ ಮೊರೆ ಹೋಗುತ್ತಿದ್ದಾರೆ ಎಂದರು.
ಡಾ ರೂಪ ಮಾತನಾಡಿ ಆಯುರ್ವೆದವನ್ನು ಬಳಕೆ ಮಾಡುವುದರಿಂದ ಸಂದಿವಾತ, ಆಮ್ಲವಾತ, ಚರ್ಮದ ಕಾಯಿಲೆಗಳು, ಕಿಡ್ನಿ ಸಮಸ್ಯೆ, ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಸಮಸ್ಯೆಗಳನ್ನು ಚಿಕಿತ್ಸೆ ಮೂಲಕ ಪರಿಹರಿಸಿಕೊಳ್ಳಬಹುದು. ಆಹಾರ ಪದ್ದತಿ ಪಥ್ಯ, ಅಪಥ್ಯಗಳ ಮೂಲಕವೂ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಶಶಿರೇಖಾ ರವಿಶಂಕರ್, ಶೈಲಜ ರೆಡ್ಡಿ, ಲಕ್ಷ್ಮೀ ಮುಂತಾದವರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))