ಅತ್ಯಾಚಾರ ಪ್ರಕರಣದ ಆರೋಪಿಗೆ ಡ್ರಗ್ಸ್‌ ನೀಡಿದ ಮೂರನೇ ಆರೋಪಿ ಎಂದು ವಾಟ್ಸಾಪ್ ನಲ್ಲಿ ಫೋಟೋ ಬಳಕೆ: ದೂರು

| Published : Aug 29 2024, 01:02 AM IST / Updated: Aug 29 2024, 05:41 AM IST

ಅತ್ಯಾಚಾರ ಪ್ರಕರಣದ ಆರೋಪಿಗೆ ಡ್ರಗ್ಸ್‌ ನೀಡಿದ ಮೂರನೇ ಆರೋಪಿ ಎಂದು ವಾಟ್ಸಾಪ್ ನಲ್ಲಿ ಫೋಟೋ ಬಳಕೆ: ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಾಚಾರ ಪ್ರಕರಣದ ಆರೋಪಿಗೆ ಡ್ರಗ್ಸ್‌ ನೀಡಿದ ಮೂರನೇಯ ಆರೋಪಿ ಅಭಯ್‌ ಎಂದು ನನ್ನ ಫೋಟೋ ಬಳಸಿ ವಾಟ್ಸಾಪ್‌ನಲ್ಲಿ ಸುದ್ದಿ ಹಬ್ಬಿಸಿದ್ದಾರೆ ಎಂದು ಪೊಲೀಸ್‌ ಠಾಣೆಗೆ ದೂರು ದಾಖಲಾಗಿದೆ.

 ಕಾರ್ಕಳ :  ಅತ್ಯಾಚಾರ ಪ್ರಕರಣದ ಆರೋಪಿಗೆ ಡ್ರಗ್ಸ್ ನೀಡಿದ ಮೂರನೇಯ ಆರೋಪಿ ಅಭಯ್ ಎಂದು ನನ್ನ ಫೋಟೋ ಬಳಸಿ ವಾಟ್ಸಪ್‌ನಲ್ಲಿ ಸುದ್ದಿ ಹಬ್ಬಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಅರವಿಂದ ಎಂಬವರು ಬುಧವಾರ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಅಭಯ್‌ ಬಂಧನವಾದ ಬಳಿಕ ವಾಟ್ಸಾಪ್ ನಲ್ಲಿ ನನ್ನ ಫೋಟೋ ಬಳಸಿ ಸಂದೇಶ ರವಾನಿಸಿರುತ್ತಾರೆ. ಆ. 26ರಂದು ಕಾರ್ಕಳದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವೇಳೆ ತೆಗೆದ ನನ್ನ ಫೋಟೋವನ್ನು ಬಳಸಿರುತ್ತಾರೆ. 

ನನ್ನ ಫೋಟೋವನ್ನು ಅಭಯ್ ಎಂದು ವಾಟ್ಸಪ್ ಮೂಲಕ ಹರಡಿದ್ದಾರೆ. ಅಲ್ಲದೆ ಈ ಫೋಟೋವನ್ನು ಸ್ಟೇಟಸ್‌ನಲ್ಲಿ ಹಾಕಿದ್ದಾರೆ ಎಂದು ಅರವಿಂದ ದೂರಿನಲ್ಲಿ ತಿಳಿಸಿದ್ದಾರೆ.