ಸಾರಾಂಶ
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೃಷಿಯಲ್ಲಿ ವಿಜ್ಞಾನ ಬಳಕೆ ಅನಿವಾರ್ಯವಾಗಿದೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ದಾವಣಗೆರೆ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೃಷಿಯಲ್ಲಿ ವಿಜ್ಞಾನ ಬಳಕೆ ಅನಿವಾರ್ಯವಾಗಿದೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.
ಜಗಳೂರು ತಾಲೂಕು ಬಸಪ್ಪನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ''''ರಾಷ್ಟ್ರೀಯ ವಿಜ್ಞಾನ ದಿನ'''' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಂಪ್ರದಾಯಕ ಕೃಷಿಯಿಂದ ಇಂದು ತಂತ್ರಜ್ಞಾನದ ಕೃಷಿಗೆ ಬದಲಾಗಬೇಕಾಗಿದೆ. ಒಂದೆಡೆ ಉತ್ಪಾದನೆ ಹೆಚ್ಚಿಸುವ ಸವಾಲಾದರೆ, ಮತ್ತೊಂದೆಡೆ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ, ಕೃಷಿಯಲ್ಲಿ ಇಂದು ಸಮಗ್ರ ಮತ್ತು ಸುಸ್ಥಿರತೆ ಕಾಪಾಡಲು ವೈಜ್ಞಾನಿಕ ಅಂಶಗಳ ಅಳವಡಿಕೆ ಅಗತ್ಯ ಎಂದು ತಿಳಿಸಿದರು.ಕೇಂದ್ರದ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ ಮಾತನಾಡಿ, ಇಂದು ಕೃಷಿಯಲ್ಲಿ ಡ್ರೋನ್‌ಗಳ ಬಳಕೆಯಿಂದ ಔಷಧ ಸಿಂಪರಣಾ ವೆಚ್ಚ ಕಡಿಮೆ ಆಗುತ್ತಿದೆ. ಅಲ್ಲದೇ, ಸಮಯದ ಉಳಿತಾಯವೂ ಆಗುತ್ತಿದೆ ಎಂದರು.
ಗೃಹ ವಿಜ್ಞಾನಿ ಡಾ.ಸುಪ್ರಿಯಾ ಪಿ. ಪಾಟೀಲ್ ಮಾತನಾಡಿ, ಅಪೌಷ್ಠಿಟಿಕತೆಯಿಂದ ಮಹಿಳಾ ಮತ್ತು ಮಕ್ಕಳನ್ನು ಪಾರು ಮಾಡಲು ಸತ್ವವುಳ್ಳ ಹಣ್ಣು- ತರಕಾರಿಗಳ ಸೇವನೆ ಅವಶ್ಯಕ. ಪರಿಶಿಷ್ಠ ಪಂಗಡ ಉಪ ಯೋಜನೆಯಲ್ಲಿ 50 ಪೌಷ್ಠಿಕ ಕೈತೋಟ ನಿರ್ಮಾಣದಿಂದ ಗ್ರಾಮದ ಜನತೆಯಲ್ಲಿ ಉತ್ತಮ ಆರೋಗ್ಯ ಕಾಣುತ್ತಿದ್ದೇವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕೃಷ್ಣಮೂರ್ತಿ, ಶಶಿಧರ, ಸಣ್ಣಸೊರಯ್ಯ, ರೈತ ಮಹಿಳೆಯರು ಭಾಗವಹಿಸಿದ್ದರು.
- - - -28ಕೆಡಿವಿಜಿ32:ಜಗಳೂರು ತಾಲೂಕಿನ ಬಸಪ್ಪನಹಟ್ಟಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಡಾ. ಎಂ.ಜಿ. ಬಸವನಗೌಡ ಮಾತನಾಡಿದರು.