ನೆಲಮಂಗಲ: ದಿನೇದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟ, ನೀರಿನ ಅಭಾವ ಮತ್ತು ನಗರ ಪ್ರದೇಶಗಳಲ್ಲಿನ ನೀರಿನ ಬೇಡಿಕೆಯನ್ನು ಪೂರೈಸಲು ಮಳೆನೀರು ಕೊಯ್ಲು ಬಳಸುವುದು ಅಗತ್ಯ ರೋಟರಿ ನೆಲಮಂಗಲ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು

ನೆಲಮಂಗಲ: ದಿನೇದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟ, ನೀರಿನ ಅಭಾವ ಮತ್ತು ನಗರ ಪ್ರದೇಶಗಳಲ್ಲಿನ ನೀರಿನ ಬೇಡಿಕೆಯನ್ನು ಪೂರೈಸಲು ಮಳೆನೀರು ಕೊಯ್ಲು ಬಳಸುವುದು ಅಗತ್ಯ ರೋಟರಿ ನೆಲಮಂಗಲ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.

ರೋಟರಿ ಬೆಂಗಳೂರು ನ೦ದಿನಿ ರೋಟರಿ ನೆಲಮಂಗಲ ವತಿಯಿಂದ ಅನುಬಂಧ ಪ್ರಾಜೆಕ್ಟ್ ಅಡಿಯಲ್ಲಿ ತ್ಯಾಮಗೊಂಡ್ಲುವಿನ ಸರ್ಕಾರಿ ಜಿಜಿಎಂಎಸ್ ಶಾಲೆಗೆ ಮಳೆನೀರು ಕೊಯ್ಲು ಘಟಕವನ್ನು ಹಾಗೂ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಳೆನೀರು ಕೊಯ್ಲು ಅಂತರ್ಜಲ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ. ಬೇಸಿಗೆ ಅಥವಾ ನೀರಿನ ಅಭಾವವಿರುವ ಸಂದರ್ಭಗಳಲ್ಲಿ ಬಳಕೆಗೆ ಲಭ್ಯವಿರುತ್ತದೆ ಎಂದರು.

ಮಳೆನೀರು ರಸ್ತೆಯಲ್ಲಿ ಹರಿದು ಹೋಗುವುದನ್ನು ತಪ್ಪಿಸಿ, ಪ್ರವಾಹದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಸಂಗ್ರಹಿಸಿದ ನೀರನ್ನು ಶುದ್ಧೀಕರಿಸಿ ಕುಡಿಯಲು ಅಥವಾ ನೇರವಾಗಿ ತೋಟಗಾರಿಕೆ, ಶೌಚಾಲಯ ಮತ್ತು ತೊಳೆಯುವಿಕೆ ಮುಂತಾದ ದೈನಂದಿನ ಕೆಲಸಗಳಿಗೆ ಬಳಸಬಹುದು ಎಂದು ರೋಟರಿ ಜಿಲ್ಲಾ ಗೌರ್ನರ್ ರೊ. ಎಲಿಜಬತ್ ಚೆರಿಯನ್ ಹೇಳಿದರು.

ಕಾರ್ಯಕ್ರಮದಲ್ಲಿ ನವೀನ್ ಕಾರಿಯಪ್ಪ, ಕಾರ್ಯದರ್ಶಿ ಆರ್.ರವಿಕುಮಾರ್, ಮಾಜಿ ಅಧ್ಯಕ್ಷ ಎಂ.ಟಿ.ನವೀನ್ ಕುಮಾರ್, ರೊ.ಸಿ.ಜಿ.ಮಂಜುನಾಥ್ ಗೌಡ ರೊ. ವಿ.ಆರ್.ಸ್ವಾಮಿ, ರೋಟರಿ ನಂದಿನಿ ಅಧ್ಯಕ್ಷರಾದ ದಯಾನಂದ್ ರೇವಣ್ ಕರ್, ಕಾರ್ಯದರ್ಶಿ ನರಸಿಂಹಮೂರ್ತಿ, ಮಾಜಿ ಅಧ್ಯಕ್ಷರಾದ ಮಧುಸೂದನ್ , ಕುಮಾರಸ್ವಾಮಿ ಪ್ರಕಾಶ್ ರಾಯ್ಕರ್ ಹಾಗೂ ರಂಗನಾಥ್ ಉಂಬರ್ ವಾಡಿ, ಮುಖ್ಯ ಶಿಕ್ಷಕರಾದ ಸುಮಂಗಳಮ್ಮ ಇತರರಿದ್ದರು.