ಹುಬ್ಬಳ್ಳಿ:
ಆಜಾದಿ ಬಚಾವೋ ಆಂದೋಲನದ ಸಂಸ್ಥಾಪಕ ರಾಜೀವ್ ದೀಕ್ಷಿತ್ ಅವರ ಜನ್ಮದಿನ ಮತ್ತು ದೈವಾಧೀನರಾದ ದಿನಾಂಕ ಒಂದೇ ಆಗಿದ್ದು, ಈ ದಿನವನ್ನು ದೇಶಾದ್ಯಂತ ''ಸ್ವದೇಶಿ ದಿನ''ವನ್ನಾಗಿ ಆಚರಿಸುತ್ತಿದ್ದು ಇಲ್ಲಿನ ಪತಂಜಲಿ ಯೋಗ ಪೀಠದ ಕಚೇರಿಯಲ್ಲಿ ಸ್ವದೇಶಿ ದಿನ ಆಚರಿಸಲಾಯಿತುಈ ವೇಳೆ ಪತಂಜಲಿ ಯೋಗಪೀಠದ ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ಸ್ವದೇಶಿ ಉತ್ಪನ್ನ ಬಳಸುವುದು ಹಾಗೂ ನಿತ್ಯ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯಯುತ ಜೀವನ ನಡೆಸಲು ಸಂಕಲ್ಪ ಮಾಡಬೇಕು ಎಂದರು.
ಆರೋಗ್ಯವಾಗಿರುವುದೆ ನಿಜವಾದ ದೇಶಸೇವೆ. ಇಂದು ನಾವು ಸೇವಿಸುವ ಹಣ್ಣು, ತರಕಾರಿ ಮತ್ತು ಧಾನ್ಯಗಳು ರಾಸಾಯನಿಕ ಹಾಗೂ ರಸಗೊಬ್ಬರಗಳ ಬಳಕೆಯಿಂದ ವಿಷಕಾರಿಯಾಗಿವೆ. ಇಂತಹ ಆಹಾರ ಸೇವನೆಯಿಂದ ಅಕಾಲಿಕ ಹೃದಯ ರೋಗ, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ಭಾರತೀಯರು ನಿತ್ಯ ಒಂದು ಗಂಟೆ ಯೋಗಾಭ್ಯಾಸ ಮಾಡಬೇಕು ಎಂದು ಹೇಳಿದರು.ಭಾರತದಲ್ಲಿ ನೂರಕ್ಕೆ ನೂರರಷ್ಟು ಶುದ್ಧ ಸ್ವದೇಶಿ ಸಂಸ್ಥೆ ಎಂದರೆ ಅದು ಪತಂಜಲಿ ಆಯುರ್ವೇದ ಮಾತ್ರ. ಹಿಮಾಲಯದ ಗಿಡಮೂಲಿಕೆಗಳಿಂದ ತಯಾರಾದ ಪತಂಜಲಿಯ ಔಷಧಿಗಳು ಯಾವುದೇ ಅಡ್ಡಪರಿಣಾಮಗಳಿಲ್ಲದೆ ದೇಹದ ಎಲ್ಲ ತೊಂದರೆ ನಿವಾರಿಸುವ ಶಕ್ತಿ ಹೊಂದಿದೆ ಎಂದರು.
ಪತಂಜಲಿ ಪಶು ಆಹಾರ ವಿಭಾಗದ ದಕ್ಷಿಣ ವಲಯದ ವಲಯ ವ್ಯವಸ್ಥಾಪಕ ದಿವಾಕರ್ ಮೂರ್ತಿ, ಪತಂಜಲಿ ಸ್ವದೇಶಿ ವಿಭಾಗ ಕರ್ನಾಟಕದ ಮಾರಾಟ ವ್ಯವಸ್ಥಾಪಕ ಮನೋಜಕುಮಾರ ಸಾಹು ಹಾಗೂ ಡಾ. ಮಂಜುನಾಥ್ ಉಪಸ್ಥಿತರಿದ್ದರು.