ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನ ಬಳಸಿ: ಎಸ್ಪಿ ಕವಿತಾ

| Published : Nov 17 2024, 01:20 AM IST

ಸಾರಾಂಶ

ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಇದನ್ನು ಕಡಿಮೆ ಮಾಡಬೇಕಾದರೆ ಜಾಗರೂಕತೆಯಿಂದ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಪ್ರಜ್ಞಾಪೂರ್ವಕವಾಗಿ ಬಳಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹೇಳಿದರು. ಚಾಮರಾಜನಗರದಲ್ಲಿ ಸೈಬರ್ ಅಪರಾಧದ ಮೇಲಿನ ಇತ್ತೀಚಿನ ಮಾರ್ಗಗಳು ಎಂಬ ವಿಷಯದ ಬಗ್ಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆಧುನಿಕ ತಂತ್ರಜ್ಞಾನದಿಂದಾಗಿ ಮೊಬೈಲ್ ಬಳಸುವವರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಅನುಕೂಲಗಳ ಜೊತೆ ಅನಾನುಕೂಲಗಳು ಹೆಚ್ಚಾಗುತ್ತಿದ್ದು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಇದನ್ನು ಕಡಿಮೆ ಮಾಡಬೇಕಾದರೆ ಜಾಗರೂಕತೆಯಿಂದ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಪ್ರಜ್ಞಾಪೂರ್ವಕವಾಗಿ ಬಳಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹೇಳಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧದ ಮೇಲಿನ ಇತ್ತೀಚಿನ ಮಾರ್ಗಗಳು ಎಂಬ ವಿಷಯದ ಬಗ್ಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗುರುತಿನ ಕಳ್ಳತನ, ಹಣಕಾಸಿನ ವಂಚನೆ, ಹ್ಯಾಕಿಂಗ್, ಸೈಬರ್‌ಸ್ಟಾಕಿಂಗ್ ಮತ್ತು ಹಾನಿಕಾರಕ ಸಾಫ್ಟ್‌ವೇರ್‌ಗಳ ವಿತರಣೆ ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ಅಪರಾಧಗಳನ್ನು ಗುರುತಿಸಲಾಗಿದೆ, ಇದನ್ನು ಕಾನೂನು ಒಂದರಿಂದಲೇ ತಡೆಯಲು ಸಾಧ್ಯವಿಲ್ಲ. ಇಂತಹ ವಿಚಾರ ಸಂಕಿರಣಗಳ ಮೂಲಕ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಬಗ್ಗೆ ಜಾಗೃತರಾಗಿ, ಇತರರಿಗೂ ಇದನ್ನು ಮನದಟ್ಟು ಮಾಡಿದಾಗ ಇಂತಹ ಅಪರಾಧಗಳು ಕಡಿಮೆಯಾಗುತ್ತವೆ ಎಂದರು.ಹಿಂದೆ ಕಳ್ಳತನ ಮಾಡಬೇಕಾದರೆ ಯೋಜನೆ ರೂಪಿಸಿಕೊಂಡು ಸಮಯ ನೋಡಿ ಕಳ್ಳತನ ಮಾಡುತ್ತಿದ್ದರು. ಆದರೆ ಹೆಚ್ಚು ತಂತ್ರಜ್ಞಾನದ ಬಳಕೆಯಿಂದಾಗಿ ಆಮಿಷಗಳಿಗೆ ಬಲಿಯಾಗಿ ಲಕ್ಷಾಂತರ ರು.ಗಳನ್ನು ಕಳೆದುಕೊಳ್ಳುತ್ತಿದ್ದಾರೆ, ಸೈಬರ್ ಅಪರಾದ ತಡೆಗಟ್ಟುವಿಕಾಗಿ ಪೊಲೀಸ್ ಇಲಾಖೆಯಿಂದ ವಿಭಾಗಳನ್ನು ತೆರೆದಿದ್ದರೂ ಆಪರಾಧಗಳನ್ನು ಕಂಡುಹಿಡಿಯಲು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ಇದನ್ನೆ ತಡೆಗಟ್ಟಬೇಕಾದರೆ ನಾವೇ ಜಾಗೂರುಕತೆಯಿಂದ ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಸಬೇಕು ಇತರರಿಗೂ ತಿಳಿಸಬೇಕು ಎಂದರು.ಸೈಬರ್ ಅಪರಾಧಗಳಿಗೆ ವಿದ್ಯಾವಂತರು, ಅವಿದ್ಯಾವಂತರು ಅಂತೇನಿಲ್ಲ. ಎಲ್ಲರೂ ಈ ಅಪರಾಧಗಳಿಗೆ ಬಲಿಯಾಗುತ್ಗಿದ್ದಾರೆ, ಮೊಬೈಲ್‌ನಲ್ಲಿ ಬಂದ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳದೇ ಇರುವುದು ಸಹ ಅಪರಾಧಗಳು ಹೆಚ್ಚಾಗಲು ಕಾರಣವಾಗಿದೆ, ತಂತ್ರಜ್ಞಾನದಿಂದ ಆಗುವ ಅನುಕೂಲತೆಗಳು, ಅನಾನುಕೂಲತೆ ಮತ್ತು ತಡೆಗಟ್ಟುವಿಕೆ ಬಗ್ಗೆ ತಿಳಿಸಿಕೊಡುವ ಉತ್ತಮ ವಿಚಾರಸಂಕಿರಣ ಇದಾಗಿದ್ದು ಸದುಪಯೋಗ ಪಡಿಸಿಕೊಳ್ಳಿ ಎಂದರು,ಮುಖ್ಯ ಅತಿಥಿಗಳಾಗಿದ್ದ ಮೈಸೂರು ಜೆಎಸ್‌ಎಸ್‌ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಕೆ.ಎಸ್.ಸುರೇಶ್ ಮಾತನಾಡಿ, ಕ್ರಿಪ್ಟೋಗ್ರಫಿ ಮತ್ತು ಸೈಬರ್ ಭದ್ರತೆ ಎರಡೂ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಕ್ಷೇತ್ರಗಳಾಗಿವೆ. ದಾಳಿಕೋರರು ಯಾವಾಗಲೂ ಸುರಕ್ಷತಾ ಕ್ರಮಗಳನ್ನು ಬೈಪಾಸ್ ಮಾಡಲು ಹೊಸ ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಭದ್ರತಾ ಪ್ರೋಟೋಕಾಲ್‌ಗಳನ್ನು ನಿರಂತರವಾಗಿ ನವೀಕರಿಸುವುದು ಮತ್ತು ಸುಧಾರಿಸುವುದು ಅತ್ಯಗತ್ಯವಾಗಿದೆ ಎಂದರು.ಡಿಜಿಟಲ್ ಯುಗವು ಸಾಟಿಯಿಲ್ಲದ ಅನುಕೂಲತೆ ಮತ್ತು ಸಂಪರ್ಕವನ್ನು ತರುತ್ತಿರುವಾಗ, ಸೈಬರ್ ಅಪರಾಧದಲ್ಲಿ ಸಮಾನಾಂತರ ಮತ್ತು ಆತಂಕಕಾರಿ ಏರಿಕೆಯನ್ನು ಕಂಡಿದೆ. ಪ್ರಪಂಚದಾದ್ಯಂತ ಇಂಟರ್ನೆಟ್ ಮತ್ತು ಡಿಜಿಟಲ್ ಸೇವೆಗಳ ಹೆಚ್ಚುತ್ತಿರುವ ನುಗ್ಗುವಿಕೆಗೆ ಈ ಉಲ್ಬಣವು ಕಾರಣವಾಗಿದೆ ಎಂದರು, ಹೆಚ್ಚಿನ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸೈಬರ್ ಬೆದರಿಕೆಗಳಿಗೆ ಗುರಿಯಾಗುತ್ತವೆ. ಸೈಬರ್ ಅಪರಾಧವು ಗುರುತಿನ ಕಳ್ಳತನ, ಹಣಕಾಸಿನ ವಂಚನೆ, ಹ್ಯಾಕಿಂಗ್, ಸೈಬರ್‌ಸ್ಟಾಕಿಂಗ್ ಮತ್ತು ಹಾನಿಕಾರಕ ಸಾಫ್ಟ್‌ವೇರ್‌ಗಳ ವಿತರಣೆಯನ್ನು ಒಳಗೊಂಡಂತೆ ವ್ಯಾಪಕವಾದ ದುರುದ್ದೇಶಪೂರಿತ ಚಟುವಟಿಕೆಗಳನ್ನು ಒಳಗೊಂಡಿದೆ ಎಂದರು.

ಅಧ್ಯಕ್ಷತೆಯನ್ನು ಮಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಮಾತನಾಡಿ, ಸಮಾಜದ ಸ್ವಾಸ್ತ್ಯ ಹಾಳು ಮಾಡುವ ಸೈಬರ್ ಅಪರಾಧಗಳ ಬಗ್ಗೆ ತಿಳಿದುಕೊಂಡು ಅವುಗಳ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ.ಆರ್ ಸುಮಿತ್ರಾ ಟಾಟಾ ಬೆಂಗಳೂರು ಹಿರಿಯ ಡಾಟಾ ಸೈಂಟಿಸ್ಟ್, ಗ್ರೂಪ್ ಆಫ್ ಇವರು ಎಐ ಆಧಾರಿತ ಸೈಬರ್ ಭದ್ರತಾ ಕ್ರಮಗಳು ಎಂಬ ವಿಷಯದ ಬಗ್ಗೆ ತಿಳಿಸಿಕೊಟ್ಟರು. ಚಾಮರಾಜನಗರ ಸಿಇಎನ್ ಶಾಖೆ ಇನ್ಸ್‌ಪೆಕ್ಟರ್, ಸೈಬರ್ ಭದ್ರತೆ ಮತ್ತು ಸೈಬರ್ ಸಿಆರ್‌ನಲ್ಲಿ ಇತ್ತೀಚಿನ ಮಾರ್ಗಗಳು ವಿಷಯದ ಬಗ್ಗೆ ತಿಳಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಂ.ರಾಜೇಶ್ ಸ್ವಾಗತಿಸಿ, ಅರ್.ಮಲ್ಲೇಶ್ ವಂದಿಸಿದರು. ಡಾ.ಜಿ.ಎಂ.ಗುರುಪ್ರಸಾದ್ ನಿರೂಪಿಸಿದರು.