ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿ: ಶಾಸಕ ಅಶೋಕ ಪಟ್ಟಣ

| Published : Nov 23 2025, 03:30 AM IST

ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿ: ಶಾಸಕ ಅಶೋಕ ಪಟ್ಟಣ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ವಿದ್ಯಾರ್ಥಿಗಳು ಮೊಬೈಲ್-ಟಿವಿ ಬಳಕೆ ತ್ಯಜಿಸಿ, ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ತಂತ್ರಜ್ಞಾನವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಕಂಡುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ವಿದ್ಯಾರ್ಥಿಗಳು ಮೊಬೈಲ್-ಟಿವಿ ಬಳಕೆ ತ್ಯಜಿಸಿ, ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ತಂತ್ರಜ್ಞಾನವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಕಂಡುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಕರೆ ನೀಡಿದರು.

ಪಟ್ಟಣದ ಐ.ಎಸ್.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನದಡಿ ಐಬಿಪಿಎಸ್, ಎಸ್‌ಬಿಐ ಮತ್ತು ಇನ್ನಿತರ ಬ್ಯಾಂಕ್‌ಗಳ 120 ಗಂಟೆಗಳ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಅಧ್ಯಯನದ ಸಂದರ್ಭದಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡುತ್ತಿರುವದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಕುರಿತು ತರಬೇತಿ ಹಾಗೂ ಉದ್ಯೋಗ ನೀಡಲು ಉನ್ನತ ಶಿಕ್ಷಣದಲ್ಲಿ ಹಲವಾರು ಯೋಜನೆ ಅಳವಡಿಸಿ ಉದ್ಯೋಗ ನೀಡಲು ಬದ್ಧವಾಗಿದೆ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎಸ್.ಜಿರಂಕಳಿ ಮಾತನಾಡಿ, ವಿವಿಧ ಬ್ಯಾಂಕ್‌ಗಳ ಆಶ್ರಯದಲ್ಲಿ ನಡೆಯುತ್ತಿರುವ ಯುವಜನರ ಉದ್ಯೋಗ ಕೌಶಲ್ಯ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಂ.ಡಿ.ಕಮತಗಿ ವಹಿಸಿದ್ದರು. ಪಿ.ಎಂ.ಉಷಾ, ಸಂಯೋಜಕ ಡಾ.ಎ.ಬಿ.ವಗ್ಗರ, ಡಾ.ಎಂ.ಆರ್.ದೊಡಮನಿ, ಡಾ.ಎ.ಸಿ.ಹುಲ್ಲೊಳ್ಳಿ, ಪವನಕುಮಾರ ಮಹೇಂದ್ರಕರ್, ಎಂ.ಎ.ನಕಾರ್ಚಿ, ಮಾರುತಿ ಸೂಳಿಕೇರಿ ಸೇರಿದಂತೆ ಕಾಲೇಜಿನ ಸಿಡಿಸಿ ಕಮಿಟಿಯ ಸದಸ್ಯರು ಹಲವರಿದ್ದರು.