ಮಾನವ ಹಕ್ಕುಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ನೆಲೆಸುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಸಿಎಸ್ ಪುರ ಪೊಲೀಸ್ ಠಾಣೆಯ ಪಿಎಸ್‌ಐ ಧರ್ಮಾಂಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಮಾನವ ಹಕ್ಕುಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ನೆಲೆಸುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಸಿಎಸ್ ಪುರ ಪೊಲೀಸ್ ಠಾಣೆಯ ಪಿಎಸ್‌ಐ ಧರ್ಮಾಂಜಿ ತಿಳಿಸಿದರು.ತಾಲೂಕಿನ ಕೆ ಜಿ ಟೆಂಪಲ್ ಬೃಂದಾವನ ಇಂಗ್ಲಿಷ್ ಹೈ ಸ್ಕೂಲ್ ನಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಭೂಮಿಯ ಮೇಲೆ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಅದರಂತೆ ಸರಿ ಸಮಾನವಾಗಿ ಜೀವಿಸುವ, ತಮಗೆ ಬೇಕಾದದ್ದನ್ನು ಮಾತನಾಡುವ ಮೂಲಭೂತ ಹಕ್ಕುಗಳಿವೆ. ಮನುಷ್ಯ ಅರ್ಥ ಮಾಡಿಕೊಂಡು ಸಮಾಜದ ಕೆಲಸಕ್ಕೆ ಬಳಸಬೇಕಾಗಿದೆ ಎಂದು ಸಲಹೆ ನೀಡಿದರು. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷದ್ ಜಿಲ್ಲಾಧ್ಯಕ್ಷ ಅನ್ಸಾರ್ , ಬಿಇಒ ನಟರಾಜ್ ಮಾತನಾಡಿದರು. ಕಾರ್ಯಕ್ರಮದ ಅಥಿತಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ. ಎಸ್ ಸಿದ್ಧರಾಮಣ್ಣ, ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ಜಿ. ರಘುಚಂದ್ರ, , ತಾಲೂಕು ಅಧ್ಯಕ್ಷ ರಮೇಶ್, ಸಿಡಿಪಿಒ ಕೃಷ್ಣಮೂರ್ತಿ, ವೈದ್ಯ ಡಾ. ಆರ್ಯನ್, ಪಿಡಿಒ ಮಂಜುಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪವಿತ್ರ ಆರ್. ರಹಮತ್ ಅಲಿ, ಶೈಲಜಾ ರವಿ ಬಾಬು ಇತರರಿದ್ದರು.