ಐಗೂರು ಗ್ರಾಮದಲ್ಲಿ ಮುತ್ತಪ್ಪ ದೇವಾಲಯದ ಉತ್ಸವ ಸಂಪನ್ನ

| Published : Jun 11 2024, 01:36 AM IST

ಸಾರಾಂಶ

ಶ್ರೀ ಮುತ್ತಪ್ಪ ದೇವರ ದೇವಾಲನಯದ ಲೋಕಾರ್ಪಣೆ ಹಾಗೂ ಪುನರ್‌ ಪ್ರತಿಷ್ಠಾಪನೆ ಪ್ರಯುಕ್ತ ವಿವಿಧ ದೇವರ ವೆಳ್ಳಾಟಂ ಮತ್ತು ಕೋಲ ನಡೆಯಿತು. ದೇವಾಲಯ ಸಮಿತಿ ಸದಸ್ಯರು ಉತ್ಸವ ನಡೆಸಿಕೊಟ್ಟರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ ಸಮೀಪದ ಐಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮುತ್ತಪ್ಪ ದೇವರ ದೇವಾಲಯದ ಲೋಕಾರ್ಪಣೆ ಹಾಗೂ ಪುನರ್ ಪ್ರತಿಷ್ಠಾಪನೆ ಪ್ರಯುಕ್ತ ಭಾನುವಾರ ಸಂಜೆಯಿಂದ ನಡೆದ ವಿವಿಧ ದೇವರ ವೆಳ್ಳಾಟಂ ಮತ್ತು ಸೋಮವಾರದಂದು ಬೆಳಗಿನ ಜಾವ ಕೋಲ ನಡೆಯಿತು.

ಭಾನುವಾರ ಸಂಜೆ ಶ್ತೀ ಮುತ್ತಪ್ಪನ್ ಮತ್ತು ಶ್ರೀ ತಿರುವಪ್ಪನ್ , ಶ್ರೀ ಕುಟ್ಟಿಚಾತನ್ ಹಾಗೂ ಶ್ರೀ ಗುಳಿಗನ್ ಮತ್ತು ಪೋದಿ ದೇವರ ವೆಳ್ಳಾಟಂ ನಡೆಯಿತು. ನಂತರ ಸೋಮವಾರ ಬೆಳಗಿನ ಜಾವ ಗುಳಿಗನ್‌, ಶ್ತೀಮುತ್ತಪ್ಪನ್‌, ತಿರುವಪ್ಪನ್‌, ಕಟ್ಟಿಚಾತನ್‌, ಪೋದಿ ದೇವಿಯ ಕೋಲಗಳು ನಡೆಯಿತು. ನಂತರ ಗುರುಶ್ರೀ ತರ್ಪಣದೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು.

ಶನಿವಾರದಿಂದಲೂ ದೇವಾಲಯದ ಪೂಜಾ ಕಾರ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳಾದಿಯಾಗಿ ಐಗೂರು ಗ್ರಾಮಸ್ಥರೊಂದಿಗೆ, ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ದೇವಾಲಯ ಸಮಿತಿ ಅಧ್ಯಕ್ಷ ಸಿ.ಎಸ್‌.ಮಹೇಶ್‌, ಕಾರ್ಯದರ್ಶಿ ಟಿ.ಆರ್‌.ವಿಜಯ, ಉಪಾಧ್ಯಕ್ಷ ಅರ್ಪಂಗಯ ರಮೇಶ್‌, ಖಜಾಂಚಿ ರಾಧಾಕೃಷ್ಣ ಮತ್ತು ಪದಾಧಿಕಾರಿಗಳು, ದೇವಾಲಯ ಸಮಿತಿ ಸದಸ್ಯರು ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.