ಸಾರಾಂಶ
ಉತ್ತರ ಕನ್ನಡ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶವು ಪ್ರಸಕ್ತ ವರ್ಷ ಶೇ.೮೨.೯೩ರಷ್ಟು ಆಗಿದ್ದು, ೬ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶವು ಪ್ರಸಕ್ತ ವರ್ಷ ಶೇ.೮೨.೯೩ರಷ್ಟು ಆಗಿದ್ದು, ೬ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕಳೆದ ಸಾಲಿನಲ್ಲಿ ಶೇ.೯೨.೫೧ ರಷ್ಟಾಗಿತ್ತು. ನಾಲ್ಕನೇ ಸ್ಥಾನದಲ್ಲಿತ್ತು. ಎರಡು ಸ್ಥಾನ ಕುಸಿತವಾದಂತಾಗಿದೆ.
ವಿಜ್ಞಾನ ಹಾಗೂ ಕಲಾ ವಿಭಾಗದಲ್ಲಿ ಹೆಣ್ಣು ಮಕ್ಕಳೇ ಟಾಪ್ ಮೂರರ ಪಟ್ಟಿಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ಕಾರವಾರದ ಸರ್ಕಾರಿ ಕಾಲೇಜಿನ ಅನನ್ಯಾ ನಾಯ್ಕ, ವಾಣಿಜ್ಯ ವಿಭಾಗದಲ್ಲಿ ಶಿರಸಿ ತಾಲೂಕಿನ ಯಡಳ್ಳಿಯ ವಿದ್ಯೋದಯ ಕಾಲೇಜಿನ ದರ್ಶನ ಹೆಗಡೆ, ವಿಜ್ಞಾನ ವಿಭಾಗದಲ್ಲಿ ಕುಮಟಾದ ಸರಸ್ವತಿ ಕಾಲೇಜಿನ ಅನನ್ಯಾ ಭಾಗ್ವತ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.ಕಲಾ ವಿಭಾಗ:
ಕಾರವಾರದ ಸರ್ಕಾರಿ ಕಾಲೇಜಿನ ಅನನ್ಯಾ ನಾಯ್ಕ(೯೭.೮೩), ಹೊನ್ನಾವರ ಸರ್ಕಾರಿ ಪಿಯು ಕಾಲೇಜಿನ ಸಿಂಚನಾ ನಾಯ್ಕ (೯೭.೩೩), ಭಟ್ಕಳದ ಅಂಜುಮಾನ್ ಕಾಲೇಜಿನ ಫಾತಿಮಾ ಎಸ್.(೯೬.೩೩), ಕುಮಟಾದ ನೆಲ್ಲಿಕೇರಿ ಸರ್ಕಾರಿ ಕಾಲೇಜಿನ ಮಂಜುನಾಥ ಪಟಗಾರ (೯೬.೩೩), ಹಳಿಯಾಳದ ವಿ.ಡಿ. ಹೆಗಡೆ ಕಾಲೇಜಿನ ರುಹಿ ದಲಾಲ್(೯೬.೩೩), ಕುಮಟಾ ಹಿರಿಗುತ್ತಿ ಸರ್ಕಾರಿ ಕಾಲೇಜಿನ ಸ್ನೇಹಾ ಗಾಂವಕರ (ಶೇ.೯೬) ಜಿಲ್ಲೆಗೆ ಮೊದಲ ಮೂರು ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗ:
ಶಿರಸಿಯ ಯಡಳ್ಳಿಯ ವಿದ್ಯೋದಯ ಕಾಲೇಜಿನ ದರ್ಶನ ಹೆಗಡೆ (ಶೇ.೯೯.೧೬), ಶಿರಸಿಯ ಎಂಇಎಸ್ ಕಾಲೇಜಿನ ರುಚಿತಾ ಹೆಗಡೆ (ಶೇ.೯೮.೫೦), ಕುಮಟಾದ ಗೋಕರ್ಣ ಸಾರ್ವಭೌಮ ಗುರುಕುಲದ ರಾಗ ಮೂರೂರು (ಶೇ.೯೮.೧೬), ಶಿರಸಿ ಮಾರಿಕಾಂಬಾ ಸರ್ಕಾರಿ ಕಾಲೇಜಿನ ರಕ್ಷಿತಾ ನಾಯ್ಕ (ಶೇ.೯೮.೧೬), ಕಾರವಾರದ ಪ್ರೀಮಿಯರ್ ಕಾಲೇಜಿನ ಸಮೃದ್ಧಿ ನಾಯ್ಕ (ಶೇ.೯೮.೧೬), ಶಿರಸಿಯ ಎಂಇಎಸ್ ಕಲೇಜಿನ ಶ್ರೀಜಾ ಭಟ್ (ಶೇ.೯೮.೧೬). ಜಿಲ್ಲೆಗೆ ಮೊದಲ ಮೂರು ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗ:
ಕುಮಟಾದ ಸರಸ್ವತಿ ಕಾಲೇಜಿನ ಅನನ್ಯಾ ಭಾಗ್ವತ (ಶೇ.೯೯), ಶಿರಸಿಯ ಚಂದನ ಕಾಲೇಜಿನ ಕನ್ನಿಕಾ ಭಟ್ (ಶೇ.೯೮.೬೬), ಭಟ್ಕಳದ ಅಂಜುಮಾನ ಕಾಲೇಜಿನ ಆಯಶಾ ಮಹೀನ್ (ಶೇ.೯೮.೩೩), ಶಿರಸಿಯ ಎಂಇಎಸ್ ಕಾಲೇಜಿನ ಸುಕನ್ಯಾ ಗೌಡ (ಶೇ.೯೮.೩೩), ಭಟ್ಕಳದ ಸಿದ್ಧಾರ್ಥ ಕಾಲೇಜಿನ ಸಂಜನಾ ನಾಯ್ಕ (ಶೇ.೯೮.೧೬), ಶಿರಸಿಯ ಎಂಇಎಸ್ ಕಾಲೇಜಿನ ಸುಶಾಂತ ರೇವಣಕರ (ಶೇ.೯೮.೧೬, ಭಟ್ಕಳದ ಸಿದ್ದಾರ್ಥ ಕಾಲೇಜಿನ ಸಚಿನ ಎಚ್.ಆರ್., ಕುಮಟಾದ ಸರಸ್ವತಿ ಕಾಲೇಜಿನ ಸಾಗರ ನಾಯ್ಕ, ಸ್ವಾತಿ ಗಾಯತೊಂಡೆ (ಶೇ.೯೮) ಜಿಲ್ಲಾ ಮಟ್ಟದ ಟಾಪರ್‌ಗಳಾಗಿದ್ದಾರೆ.